ಆನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ,ಸಾಂತ್ವಾನ

ರಿಪ್ಪನ್‌ಪೇಟೆ : ಹಲವಾರು ದಿನಗಳ ಹಿಂದೆ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಕಮದೂರು ಬಳಿ ಸ.ನಂ. 115ರ ಜಮೀನಿನಲ್ಲಿ ಕಾಡಾನೆಗಳು ದಾಳಿ ಮಾಡಿ ಬಾಳೆ ಮತ್ತು ಅಡಿಕೆ ಬೆಳೆ ಧ್ವಂಸಗೊಳಿಸಿದ್ದು ಸ್ಥಳಕ್ಕೆ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನಿನ ಮಾಲೀಕರಿಗೆ ವೈಯಕ್ತಿಕ ನೆರವು ನೀಡುವ ಮೂಲಕ ಸಾಂತ್ವನ ಹೇಳಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ಒಂದು ತಿಂಗಳುಗಳಿಂದ ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ಒಂದು ಕಡೆಯಿಂದ ಮೊತ್ತೊಂದು ಭಾಗಕ್ಕೆ ಅನೆಗಳು ಸಂಚರಿಸುತ್ತಾ ಕರೆಯಲ್ಲಿ ನೀರು ಕುಡಿಯಲು ಬರುವುದರೊಂದಿಗೆ ರೈತರ ಬೆಳೆದ ಬಾಳೆ ಅಡಿಕೆ ತೋಟಗಳಿಗೆ ನುಗ್ಗಿ ಬೆಳೆ ಸಾಶಮಾಡುತ್ತಿದ್ದು ಆ ಕಾರಣದಿಂದಾಗಿ ತಕ್ಷಣ ಅರಣ್ಯ ಇಲಾಖೆಯವರು ಆನೆ ಪರಿಣಿತರನ್ನು ಕರೆಯಿಸಿ ಆನೆಗಳನ್ನು ಸ್ಥಳಾಂತರ ಮಾಡುವಂತೆ ಕ್ರಮ ವಹಿಸುವಂತೆ ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ನಾನು ಅರಣ್ಯ ಸಚಿವ ಈಶ್ವರ ಖಂಡ್ರೆಯವರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು ಸಂಬಂಧಿಸಿದ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ತಿಳಿಸಿ ಕೂಡಲೇ ಈ ಭಾಗದಲ್ಲಿ ಆನೆಗಳ ಉಪಟಳದಿಂದಾಗಿ ರೈತರು ಹೈರಾಣಾಗಿ ಹೋಗಿದ್ದಾರೆ ಅವರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ಕೊಡಿಸುವುದರ ಬಗ್ಗೆ ಸಹ ಗಮನಸೆಳೆಯಲಾಗಿದ್ದು ಪ್ರತಿ ಬಾಳೆ ಗಿಡಕ್ಕೆ 3.20 ರೂ. ನಂತೆ ಬೆಳೆ ಪರಿಹಾರ ಕೊಡಲು ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಹಲವು ರೈತರು ನಮಗೆ ರಾತ್ರಿ ವೇಳೆ 3 ಪೇಸ್ ವಿದ್ಯುತ್ ನೀಡಲಾಗುತ್ತಿದ್ದು ಆನೆ ಹಾವಳಿಯಿಂದಾಗಿ ರಾತ್ರಿ ವೇಳೆ ಜಮೀನಿಗೆ ಹೋಗುವವುದು ಕಷ್ಟ ಆದ್ದರಿಂದ ಹಗಲು ವೇಳೆಯಲ್ಲಿ 3 ಪೇಸ್ ವಿದ್ಯುತ್ ಸೌಲಭ್ಯ ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಆಗ ಶಾಸಕರು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಇಂದಿನಿಂದಲೇ ಈ ರೀತಿ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.

ಇದೇ ವೇಳೆ ಪತ್ರಕರ್ತರು ಸಾಗರ-ತೀರ್ಥಹಳ್ಳಿ-ರಿಪ್ಪನ್‌ಪೇಟೆ ರಾಜ್ಯ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕರಲ್ಲಿ ಪ್ರಸ್ತಾಪಿಸಿದಾಗ ತಕ್ಷಣ ಗಮನಹರಿಸುವ ಭರವಸೆ ವ್ಯಕ್ತಪಡಿಸಿ, ಈಗಾಗಲೇ ಚಿಕ್ಕಮಗಳೂರಿನಿಂದ ತೀರ್ಥಹಳ್ಳಿ ಮಾರ್ಗವಾಗಿ ಹುಂಚದವರೆ ಕೆ.ಎಸ್.ಆರ್.ಟಿ. ಬಸ್ ಬಂದು ಹೋಗುತ್ತಿದ್ದು ಅದನ್ನು ರಿಪ್ಪನ್‌ಪೇಟೆವರೆಗೆ ವಿಸ್ತರಿಸಿ ಶಕ್ತಿಯೋಜನೆಯ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರೀಪ್, ಗ್ರಾಮ ಪಂಚಾಯ್ತಿ ಸದಸ್ಯರಾದ ಮಹಮ್ಮದ್ ಷರೀಫ್,ಕೃಷ್ಣೋಜಿ ರಾವ್ , ರಮ್ಯಾ , ಕೆಂಚನಾಲ ಘಟಕದ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾದಾಪುರ, ಡಿ.ಈ.ಮಧುಸೂದನ್, ಗಣಪತಿ, ಎನ್. ಚಂದ್ರೇಶ್, ದಿವಾಕರ, ರವೀಂದ್ರ ಕೆರೆಹಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಪ್ರಕಾಶಗೌಡ ಆಲವಳ್ಳಿ, ರಾಜಶೇಖರಗೌಡ, ಕಮದೂರು, ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ, ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *