January 11, 2026

RIPPONPETE |ಗವಟೂರಿನಲ್ಲಿ ಅಲ್ ಬದ್ರಿಯಾ ಮದರಸ ಕಟ್ಟಡ ಲೋಕಾರ್ಪಣೆ

RIPPONPETE | ಅಲ್ ಬದ್ರಿಯಾ ಮದರಸ ಕಟ್ಟಡ ಲೋಕಾರ್ಪಣೆ

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಗ್ರಾಮದ ಅಲ್ ಬದ್ರಿಯಾ ಮದ್ರಸದ ನೂತನ ಕಟ್ಟಡ ಸುನ್ನಿ ಜಂ -ಇಯ್ಯಂತುಲ್ ಸಮಿತಿಯ ಸಾಗರ ರೇಂಜ್ ಅಧ್ಯಕ್ಷರಾದ ಎ ಸಿ ಮಹಮ್ಮದ್ ಫೈಜಿ ( ಕಾರ್ಗಲ್ ಉಸ್ತಾದ್) ಲೋಕಾರ್ಪಣೆಗೊಳಿಸಿದರು.
.
ನಂತರ ಕೂರ ತಂಝಲ್ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನನ್ನು ಮಾನವೀಯತೆ ಪಾಠ ಕಲಿಸಿ, ಸಮಾಜದಲ್ಲಿ ಜೀವಿಸುವ ರೀತಿಯ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿ ಕೊಳ್ಳಲು ಕಲಿಸುವ ಕೇಂದ್ರಗಳಾಗಿರುವ ಮದ್ರಸ ನಿರ್ಮಾಣಕ್ಕೆ ಸಹಾಯ-ಸಹಕಾರ ನೀಡುವುದು ಅತ್ಯಂತ ಪುಣ್ಯದಾಯಕ ವಾಗಿದೆ. ಮದ್ರಸಗಳು ಅರಿವಿನ ಕೇಂದ್ರವಾಗಿದ್ದು, ಜ್ಞಾನವಿಲ್ಲದೆ ಮನುಷ್ಯ ಕೈಗೊಳ್ಳುವ ಯಾವುದೇ ಆರಾಧನಾ ಕರ್ಮ ಗಳೂ ಸ್ವೀಕಾರಾರ್ಹವಲ್ಲ. ಇಂತಹ ಅರಿವನ್ನು ನೀಡುವ ಮದ್ರಸಗಳು ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಮನುಷ್ಯ ಜೀವನವನ್ನು ಪ್ರಕಾಶದೆಡೆಗೆ ಕೊಂಡೊಯ್ಯುವ ವಿದ್ಯಾಕೇಂದ್ರವಾಗಿರುವ ಮದ್ರಸಕ್ಕೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ ಈ ಮದ್ರಸ ಕಟ್ಟಡವನ್ನು ಬಳಸಿಕೊಂಡು ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಿದಲ್ಲಿ ಅದುವೇ ಈ ಸಂಸ್ಥೆಗೆ ನೀಡುವ ದೊಡ್ಡ ಸನ್ಮಾನ ಎಂದರು.

ಸೃಷ್ಟಿಕರ್ತನನ್ನು ಹಾಗೂ ಆಧ್ಯಾತ್ಮಿಕತೆಯನ್ನು ಪುಟ್ಟ ಮಕ್ಕಳಿಗೆ ಕಲಿಸಿಕೊಡುವ ಬಾಲ ವಿದ್ಯಾ ಕೇಂದ್ರ ವಾಗಿರುವ ಮದ್ರಸಗಳಿಗೆ ಅತ್ಯಂತ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.

ಗ್ರಾಪಂ ಸದಸ್ಯ ಆಸೀಫ಼್ ಭಾಷಾ ಪ್ರಾಸ್ತಾವಿಕವಾಗಿ ಮಾತನಾಡಿ ಮದ್ರಸ ನಿರ್ಮಾಣದ ಪಯಣದ ಹಾದಿ ಹಾಗೂ ಅದಕ್ಕೆ ಸಹಕರಿಸಿದ ಸರ್ವರ ಸಹಕಾರವನ್ನು ನೆನಪಿಸಿದರು.

ಈ ಸಂಧರ್ಭದಲ್ಲಿ ಮದರಸ ನಿರ್ಮಾಣಕ್ಕೆ ಸಹಕರಿಸಿದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬಾವಬ್ಯಾರಿ, ಜುಮ್ಮಾ ಮಸೀದಿ ಧರ್ಮಗುರು ಮುನೀರ್ ಸಖಾಫಿ , ಮುಖಂಡರಾದ ಅರ್ ಎ ಚಾಬುಸಾಬ್ , ಅಮೀರ್ ಹಂಜಾ  ,ರಾಜ್ಯ SSF ಅಧ್ಯಕ್ಷರಾದ ಸೂಫಿಯನ್ ಸಖಾಫಿ,ಮರ್ಕಜ್ ಸ ಅದ ಖತಿಬರಾದ ಅಬ್ದುಲ್ ಜಬ್ಬಾರ್, ಮದರಸ ಗುರುಗಳಾದ ಸೈಫುಲ್ಲ ಸಖಾಫಿ. ಇಸ್ಮಾಯಿಲ್ ಸಖಾಫಿ, ಇಬ್ರಾಹಿಂ ಸಖಾಫಿ, ಅಲ್ತಾಫ್ ಸಖಾಫಿ ಹಾಗೂ ಇನ್ನಿತರರಿದ್ದರು.

About The Author

Leave a Reply

Your email address will not be published. Required fields are marked *