ಎರಡು ಬೈಕ್ ಗಳ ನಡುವೆ ಡಿಕ್ಕಿ: ಓರ್ವ ಗಂಭೀರ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಬಳಿ ಭೀಕರ ಬೈಕ್ ಅಪಘಾತ ಸಂಭವಿಸಿದೆ.
ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದ್ದು, ನಾಲ್ಕು ಮಂದಿಗೆ ಗಾಯಗಳಾಗಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಇಲ್ಲಿನ ಬೆಜ್ಜವಳ್ಳಿ ಜಾತ್ರೆಗೆ ಹೋಗಿ ವಾಪಸ್ ಆಗುತ್ತಿದ್ದ ಮಂಡಗದ್ದೆ ಸಮೀಪದ ದಂಪತಿಗಳಿದ್ದ ಬೈಕ್‌ಗೆ ಮೇಲಿನ ತೂದೂರು, ಬೇಗುವಳ್ಳಿ ನಿವಾಸಿಗಳಿದ್ದ ಬೈಕ್ ಹಿಂದಿನಿಂದ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.
ಘಟನೆಯಲ್ಲಿ ಮಂಡಗದ್ದೆಯ ದಂಪತಿಗಳಿಗೆ ಹೆಚ್ಚು ಪೆಟ್ಟಾಗಿಲ್ಲ. ಆದರೆ ಡಿಕ್ಕಿಯಾದ ಇನ್ನೊಂದು ಬೈಕ್‌ನಲ್ಲಿ ಇಬ್ಬರು ಹುಡುಗರಿಗೆ ಹೆಚ್ಚು ಹೊಡೆತ ಬಿದ್ದಿದ್ದು, ಅವರನ್ನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

