
HOSANAGARA | ನಿಯಂತ್ರಣ ತಪ್ಪಿ ಧರೆಗೆ ಅಪ್ಪಳಿಸಿದ ಬೈಕ್ – ಓರ್ವ ಸಾವು
ಹೊಸನಗರ ; ಸವಾರನ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಬಳಿ ಶನಿವಾರ ಸಂಭವಿಸಿದೆ.
ಸೊನಲೆಯ ವಾಸಿ ಸುಮಂತ್ (30) ಸಾವನ್ನಪ್ಪಿದ ಯುವಕನಾಗಿದ್ದಾನೆ.
ಸೊನಲೆಯಿಂದ ಹೊಸನಗರದ ಕಡೆಗೆ ಬರುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಧರೆಗೆ ಅಪ್ಪಳಿಸಿ ಈ ಘಟನೆ ನಡೆದಿದೆ.
ಸುಮಂತ್ ನಾಗರಾಜ್ ಅವರ ಏಕಮಾತ್ರ ಪುತ್ರನಾಗಿದ್ದು ಈತ ಅವಿವಾಹಿತನಾಗಿದ್ದ ಎಂದು ತಿಳಿದುಬಂದಿದೆ.
ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
