Headlines

ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ವರ್ಗಾವಣೆ

ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ವರ್ಗಾವಣೆ

ತೀರ್ಥಹಳ್ಳಿ : ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರನ್ನು ಬಾಗಲಕೋಟೆಗೆ ವರ್ಗಾವಣೆ ಮಾಡಿ ಸರ್ಕಾರ ಅದೇಶಿಸಿದೆ.

ತೀರ್ಥಹಳ್ಳಿಯಲ್ಲಿ ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರನ್ನು ಇಂದು ವರ್ಗಾವಣೆ ಮಾಡಲು ಸರ್ಕಾರ ಆದೇಶ ಮಾಡಿದ್ದು ಬಾಗಲಕೋಟೆಗೆ ವರ್ಗಾವಣೆ ಮಾಡಲಾಗಿದೆ.

ಗಾಂಜಾ ಗಿರಾಕಿಗಳಿಗೆ ಸಿಂಹಸ್ವಪ್ನರಾಗಿ ತೀರ್ಥಹಳ್ಳಿ ಉಪವಿಭಾಗದಲ್ಲಿ ಹಲವಾರು ಕಡೆ ದಾಳಿ ನಡೆಸಿ ಕೋಟ್ಯಾಂತರ ರೂ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದು ಹಲವರನ್ನು ಬಂಧಿಸಿ ಈ ಭಾಗದಲ್ಲಿ ಗಾಂಜಾ ಅಮಲನ್ನು ನಿಯಂತ್ರಿಸಿದ್ದರು , ತೀರ್ಥಹಳ್ಳಿಯ ಪ್ರತಿಷ್ಠಿತ ವಿಹಂಗಮ ರೆಸಾರ್ಟ್ ಮೇಲಿನ ದಾಳಿ ರಾಜ್ಯಾದ್ಯಂತ ಸುದ್ದಿಯಾಗಿತ್ತು ಈ ದಾಳಿಯ ನೇತ್ರತ್ವ ವಹಿಸಿದ್ದ ಡಿವೈಎಸ್ಪಿ ಗಜಾನನ ವಾಮನ ಸುತಾರ ರವರು ಯಾವ ಬೆದರಿಕೆಗೂ ಬಗ್ಗದೇ ಬಂದೂಕು ಸಮೇತ ಪ್ರಾಣಿಗಳ ಕಳೇಬರವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಾಗುವಂತೆ ಮಾಡಿದ್ದರು.

ಕಳೆದ ಮೂರು ವರ್ಷಗಳ ಎಳ್ಳಮಾವಾಸ್ಯೆ ಜಾತ್ರೆಯ ಯಶಸ್ಸಿಗೆ ಗಜಾನನ ವಾಮನ ಸುತಾರ ಅವರ ಕಾರ್ಯ ವೈಖರಿ ಕೂಡ ಪ್ರಮುಖ ಕಾರಣವಾಗಿತ್ತು. ಆದರೆ ಸರ್ಕಾರ ಏಕಾಏಕಿ ಇವರನ್ನು ವರ್ಗಾವಣೆ ಮಾಡಿದ್ದು ತೀರ್ಥಹಳ್ಳಿ ಉಪ ವಿಭಾಗದ ಜನತೆಗೆ ಬೇಸರ ಮೂಡಿಸಿದಂತೂ ಸತ್ಯ…..

Leave a Reply

Your email address will not be published. Required fields are marked *