ಸಾಲ ಬಾಧೆ ರೈತ ಮಹಿಳೆ ವಿಷ ಸೇವಿಸಿ ಅತ್ಮಹತ್ಯೆ
ರಿಪ್ಪನ್‌ಪೇಟೆ : ಸಾಲಭಾದೆಯಿಂದ ತತ್ತರಿಸಿದ ಮಹಿಳೆಯೊಬ್ಬರು ಕಳೆನಾಶಕ ಸೇವಿಸಿ ಮೃತಪ್ಪಟ್ಟಿರುವ ಘಟನೆ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಲ್ಲೂರಿನಲ್ಲಿ ನಡೆದಿದೆ.
ಕಲ್ಲೂರಿನ ಮೋಹಿನಿ ಕೋಂ ಶೇಷಪ್ಪ (65) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಅಕಾಲಿಕವಾಗಿ ಬಂದ ಭಾರಿ ಮಳೆಯಿಂದಾಗಿ ಹಾಕಲಾದ ಭತ್ತ ಶುಂಠಿ ಬೆಳೆ ನಾಶವಾಗಿರುವ ಕಾರಣ ಸಹಕಾರ ಸಂಘದಲ್ಲಿ ಮಾಡಿದ ಸಾಲವನ್ನು ತಿರುವಳಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಮಹಿಳೆ ಕಳೆನಾಶಕ ಸೇವಿಸಿದ್ದಾರೆ, ತಕ್ಷಣ ಕುಟುಂಬಸ್ಥರು ಮಹಿಳೆಗೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಿಪ್ಪಿದ್ದಾರೆ.
ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎಂಬ ಚಿಂತೆಯಲ್ಲಿ ಈ ಭಾರಿ ಒಳ್ಳೆಯ ಬೆಳೆ ಬರುವುದೆಂಬ ಆಶಾಭಾವನೆಯಲ್ಲಿ ತಳಲೆ ಸಹಕಾರ ಬ್ಯಾಂಕ್‌ನಲ್ಲಿ ಮತ್ತು ಜಿಲ್ಲಾ ಸಹಕಾರ ಸಂಘದ ಸ್ವಸಹಾಯ ಸಂಘದಲ್ಲಿ ಮತ್ತು ಖಾಸಗಿಯಾಗಿ ಒಟ್ಟು 7 ಲಕ್ಷ ರೂ ಸಾಲವನ್ನು ಪಡೆಯಲಾಗಿ ಅಕಾಲಿಕ ಮಳೆಯಿಂದ ಬೆಳೆ ನಾಶಗೊಂಡ ಪರಿಣಾಮ ಮಾಡಿದ ಸಾಲವನ್ನು ಮರುಪಾವತಿಸುವುದು ಹೇಗೆ ಎಂಬ ಮಾನಸಿಕ ಚಿಂತೆಯಲ್ಲಿ ಬಳಲಿ ಕೊನೆಗೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತ ಮಹಿಳೆಯ ಮಗ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.