ಶ್ರೀಗಂಧ ಮರ ಕಡಿತಲೆ ಪ್ರಕರಣದಲ್ಲಿ ಬಟ್ಟೆಮಲ್ಲಪ್ಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಶಿವಮೊಗ್ಗ ಜಿಲ್ಲೆಯ ಆಯನೂರು ವ್ಯಾಪ್ತಿಯ ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಿರಿಗೆರೆ ಪರಿಮಿತಿಯಲ್ಲಿ ದಾಖಲಾಗಿದ್ದ ಶ್ರೀಗಂಧ ಮರ ಕಡಿದ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ರಿಪ್ಪನ್ ಪೇಟೆ ಸಮೀಪದ ಬಟ್ಟೆಮಲ್ಲಪ್ಪದಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ದಿನಾಂಕ 5-09 – 2024 ರಂದು ಅಕ್ರಮ ಶ್ರೀಗಂಧ ಮರಗಳ ಕಡಿತಲೆ ಪ್ರಕರಣ ಸಿರಿಗೆರೆ ವಲಯದಲ್ಲಿ ದಾಖಲಾಗಿತ್ತು.
ಈ ಪ್ರಕರಣ ದಾಖಲಾದ ನಂತರ ಮೂರನೇ ಆರೋಪಿ ತಲೆಮರಿಸಿಕೊಂಡಿದ್ದ. ಇದೀಗ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ರಿಪ್ಪನ್ ಪೇಟೆ ಸಮೀಪದ ಬೆಟ್ಟೆ ಮಲ್ಲಪ್ಪದ ವ್ಯಾಪ್ತಿಯ ಹೆಬ್ಬೈಲು ಗ್ರಾಮದ ಮನೆಯೊಂದರಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.