ಬಂಕಾಪುರ್ ಪುನರುತ್ತಾನ ಹೋರಾಟ ಸಮಿತಿಯಯಿಂದ ಕಪ್ಪು ಬಟ್ಟೆ ಪ್ರದರ್ಶನ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಇಂದು ಮಧ್ಯಾಹ್ನ ನಡೆದ ಬಂಕಾಪುರ ಪುನರುತ್ಥಾನ ಹೋರಾಟ ಸಮಿತಿ ಇಂದ ಕಪ್ಪು ಬಟ್ಟೆ ಪ್ರದರ್ಶನವನ್ನು ಮಾಡಿದರು. ಉಪಚುನಾವಣೆ ಪ್ರಕ್ರಿಯೆ ಚೂರುಕುಗೊಂಡಂತೆ ಇತ್ತ ಬಂಕಾಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂಬ ಒತ್ತಾಯಕ್ಕೆ ಇಂದು ಮಧ್ಯಾಹ್ನ ನಡೆದ ತಾಲೂಕು ಪುನರುತ್ಥಾನ ಸಮಿತಿ ಸಭೆಯಲ್ಲಿ ಒಮ್ಮತ ವ್ಯಕ್ತಪಡಿಸಿದರು. ತಾಲೂಕು ರಚನೆ ಘೋಷಣೆ ಮಾಡದಿದ್ದರೆ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಕಪ್ಪು ಬಟ್ಟೆ ಪ್ರದರ್ಶನ ನಡೆಯಿತು.
ಶಿಗ್ಗಾವಿ ತಾಲೂಕಿನ ವ್ಯಾಪ್ತಿಗೆ ಬರುವ ಬಂಕಾಪುರ ಪಟ್ಟಣ ಕಳೆದ 1953 ರವರೆಗೆ ತಾಲೂಕು ಕೇಂದ್ರವಾಗಿತ್ತು. ನಂತರ ಶಿಗ್ಗಾವಿ ತಾಲೂಕು ರಚನೆಯಾಗಿದೆ. ಸುಮಾರು 39 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಅದರಲ್ಲಿ ಸವಣೂರು ತಾಲೂಕಿನ 6 ಗ್ರಾಮಗಳು ಹಾನಗಲ್ ತಾಲೂಕಿನ 4 ಗ್ರಾಮಗಳನ್ನು ಒಳಗೊಂಡಿದ್ದು, ಅವುಗಳೊಂದಿಗೆ ತಾಲೂಕು ರಚನೆ ಮಾಡುವಂತೆ ಹೋರಾಟಕ್ಕೆ ಸಾರ್ವಜನಿಕರು.
ಬಂಕಾಪುರ ಹೋರಾಟ ಸಮಿತಿ ಶನಿವಾರ ಮಧ್ಯಾಹ್ನ ನಡೆದ ನಾಡಕಛೇರಿ ಮುಂದೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು.
ಚುನಾವಣೆ ಪ್ರಚಾರಕ್ಕೆ ಬರುವ ಪ್ರತಿಯೊಬ್ಬ ಅಭ್ಯರ್ಥಿಗೆ ತಾಲೂಕ ಘೋಷಣೆ ಯಾರು ಮಾಡುತ್ತೇನೆ ಎಂಬ ಭರವಸೆ ನೀಡಿದರೆ ಮಾತ್ರ ಅವರಿಗೆ ಮತದಾನ ಮಾಡುವುದು ಎಂದರು.
ಇಲ್ಲವಾದರೆ ಮತದಾನವನ್ನು ಸಂಪೂರ್ಣ ಬಹಿಷ್ಕಾರ ಮಾಡಲಾಗುವುದು ಎಂದು ಹೇಳಿದರು.
ಸಾಹಿತಿ ಎ.ಕೆ.ಅದವಾನಿಮಠ ಬಂಕಾಪುರ ವೈಭವದ ಕಾಲ ಮತ್ತೆ ಮರುಕಳಿಸಬೇಕು ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
ಉಪಚುನಾವಣೆ , ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಮುಖ್ಯಾಂಶಗಳು
- ಬಂಕಾಪುರ ತಾಲೂಕು ಕೇಂದ್ರಕ್ಕೆ ಒತ್ತಾಯಿಸಿ 20 ವರ್ಷಗಳ ಕಾಲ ಹೋರಾಟ
ಪುರಸಭೆ ಆವರಣ ನಾಡಕಚೇರಿ ಮುಂದೆ ಹೋರಾಟ ನಡೆಯಿತು - ಚುನಾವಣೆ ಇದ್ದಾಗ ಮಾತ್ರ ತಾಲೂಕು ಮಾಡುತ್ತೇನೆ ಎಂದು ಹೇಳಿದ ಶಾಸಕರು ಈಗ ಕ್ಯಾರೆ ಅನ್ನದ ಹಾಗೆ ಕೈಕಟ್ಟಿ ಕುಳಿತಿದ್ದಾರೆ.
- ಬಂಕಾಪುರ ಪುನರುತ್ತಾನ ಸಮಿತಿಯವರು ಮತದಾನ ಬಯಸ್ತಾರಕ್ಕೆ ಮತದಾನ ಬಹಿಷ್ಕಾರಕ್ಕೆ ನಿರ್ಧಾರವನ್ನು ಕೈಗೊಂಡರು.
- ಬಂಕಾಪುರ ಐತಿಹಾಸಿಕ ಸ್ಥಳ ಇದು ಹಿಂದೆ ತಾಲೂಕ
ಕೇಂದ್ರವಾಗಿತ್ತು ಯಾವುದೇ ಕಾರಣಾಂತರಗಳಿಂದ ಈಗ ಶಿಗ್ಗಾವಿ ತಾಲೂಕು ಕೇಂದ್ರವಾಗಿದೆ.
ವರದಿ : ನಿಂಗರಾಜ್ ಕುಡಲ್ ಹಾವೇರಿ ಜಿಲ್ಲೆ ಬಂಕಾಪುರ್