ಡಿಜೆ ಲೇಸರ್ ಲೈಟಿಂಗ್ ಎಫೆಕ್ಟ್ –  ತೀರ್ಥಹಳ್ಳಿಯಲ್ಲಿ ಹಲವು ಮೊಬೈಲ್ ಗೆ ಹಾನಿ! 

ಡಿಜೆ ಲೇಸರ್ ಲೈಟಿಂಗ್ ಎಫೆಕ್ಟ್ –  ತೀರ್ಥಹಳ್ಳಿಯಲ್ಲಿ ಹಲವು ಮೊಬೈಲ್ ಗೆ ಹಾನಿ! 

ತೀರ್ಥಹಳ್ಳಿ : ಪಟ್ಟಣದ ಪ್ರತಿಷ್ಠಿತ ಗಣಪತಿಗಳಲ್ಲಿ ಒಂದಾದ ಮುಖ್ಯ ಬಸ್ ನಿಲ್ದಾಣದ ಅದ್ದೂರಿ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ  ನಡೆದಿದ್ದು ಈ ವೇಳೆ ಮೆರವಣಿಗೆಯಲ್ಲಿ ಹಾಕಲಾಗಿದ್ದ ಡಿಜೆಯ ಹೈ ಪವರ್ ಲೇಸರ್ ಲೈಟ್ ಗೆ ಹಲವಾರು ಮೊಬೈಲ್ ಗಳು ಹಾನಿಯಾಗಿದೆ ಎಂದು ವರದಿಯಾಗಿದೆ.

ಡಿಜೆ ಧ್ವನಿ ವರ್ಧಕ ಹಾಗೂ ಅತ್ಯಂತ ಹೈ ಪವರ್ ಲೈಟ್ ಮತ್ತು ಲೇಸರ್ ಕಿರಣದ ಬೆಳಕುಗಳನ್ನು ಹಾಕಲಾಗಿತ್ತು.ಇದನ್ನು ಅರಿತ ಮಾಲೀಕರು ನೇರಪ್ರಸಾರ ಮಾಡಲು ತೆರಳಿದ್ದ ಮಾಧ್ಯಮದ ಸಿಬ್ಬಂದಿಗಳು ಹಾಗೂ ಇತರಿಗೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡುವಾಗ ಎಚ್ಚರಿಕೆ ವಹಿಸಿ ಎಂದು ತಿಳಿಸಿದ್ದರು. ಆದರೆ ಜನರು ಸಂಭ್ರಮದ ನಡುವೆ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ಲೇಸರ್ ಕಿರಣಗಳಿಂದ ಹಲವಾರು ಮೊಬೈಲ್ ಕ್ಯಾಮೆರಾ ಲೆನ್ಸ್ ಗಳನ್ನು ಹಾನಿಗೊಳಿಸಿದೆ. ಕೆಲವರಿಗೆ ಇದು ತತ್ತಕ್ಷಣ ಗಮನಕ್ಕೆ ಬರದೇ ತುಂಬಾ ಹೊತ್ತು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದರಿಂದ ಹಲವಾರು ಜನರ ಮೊಬೈಲ್ ಡಿಸ್ಪ್ಲೇ ಸಹ ಹಾನಿಯಾಗಿದೆ. ಹತ್ತಾರು ಐಫೋನ್ ಗಳು ಹಾಗೂ ಇತರ ಫೋನ್ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಡಿಜೆ ಯಲ್ಲಿ ಲೇಸರ್ ಲೈಟ್ ಹಾಕಿರುವಾಗ ವಿರುದ್ದ ದಿಕ್ಕಿನಲ್ಲಿ ವೀಡಿಯೋ ಚಿತ್ರೀಕರಣ ಮಾಡದೇ ಡಿಜೆ ವಾಹನ ನಿಂತಿರುವಲ್ಲಿಂದ ವೀಡಿಯೋ ಮಾಡಿದರೆ ಅಷ್ಟೇನೂ ಹಾನಿಯಾಗುವುದಿಲ್ಲ ಎಂದು ತಂತ್ರಜ್ಞರು ತಿಳಿಸುತ್ತಾರೆ.

Leave a Reply

Your email address will not be published. Required fields are marked *