SHIVAMOGGA | ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ
ಶಿವಮೊಗ್ಗದ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ದೊರೆತಿದೆ. ನಗರದ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ದೊರೆತಿದೆ.
80 ನೇ ವರ್ಷದ ಹಿಂದೂ ಮಹಾಸಭಾ ಗಣಪತಿಗೆ ಅರ್ಚಕ ನಾಗಭೂಷಣ, ರಾಮಚರಣ ತಂಡದಿಂದ ಪೂಜೆ ನಡೆದಿದೆ. ಶಾಸಕ ಚೆನ್ನಬಸಪ್ಪ, ತಹಶೀಲ್ದಾರ್ ಗಿರೀಶ್ ಮೆರವಣಿಗೆಗೆ ಚಾಲನೆ ನೀಡುವ ವೇಳೆ ಉಪಸ್ಥಿತರಿದ್ದರು.
ಡೊಳ್ಳು, ಹುಲಿ ಕುಣಿತ, ವಿವಿಧ ನಾದಗಳಿಂದ ಗಣಪತಿಯು 11-11 ಕ್ಕೆ ಭೀಮೇಶ್ವರ ದೇವಸ್ಥಾನವನ್ನ ಬಿಟ್ಟಿದೆ. ಆರ್ ಎಸ್ ಎಸ್ ಮುಖಂಡ ಪಟ್ಟಾಭಿರಾಮ್ ಅವರು ಗಣಪತಿ ಹೊತ್ತ ಟ್ಯ್ಯಾಕ್ಟರ್ ಗೆ ತೆಂಗಿನ ಕಾಯಿ ನಿವಾಳಿಸಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ದೊರೆತಿದೆ.
ಕೋಟೆ ಭೀಮೇಶ್ವರ ದೇವಸ್ಥಾನದಿಂದ ಹೊರಟ ಗಣಪತಿ ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ, ಎಎ ವೃತ್ತ ಗೋಪಿ ವೃತ್ತ ಜೈಲು ರಸ್ತೆ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಡಿವಿಎಸ್ ಸರ್ಕಲ್ ಬಿಹೆಚ್ ರಸ್ತೆ, ಕೋಟೆ ರಸ್ತೆ ಮೂಲಕ ಮತ್ತೆ ಭೀಮೇಶ್ವರ ದೇವಾಲಯದ ಹಿಂಭಾಗದಲ್ಲಿ ಗಣಪತಿ ವಿಸರ್ಜಿಸಲಾಗುವುದು.