ರಿಪ್ಪನ್‌ಪೇಟೆ ಪೆಟ್ರೋಲ್ ಬಂಕ್ ಮೇಲೆ ಮಾಡಿದ್ದ ಆರೋಪ ಹಿಂಪಡೆದ ಯುವಕ – MRPL ಮುಖ್ಯಸ್ಥರ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯ

ರಿಪ್ಪನ್‌ಪೇಟೆ ಪೆಟ್ರೋಲ್ ಬಂಕ್ ಮೇಲೆ ಮಾಡಿದ್ದ ಆರೋಪ ಹಿಂಪಡೆದ ಯುವಕ – MRPL ಮುಖ್ಯಸ್ಥರ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯ

ರಿಪ್ಪನ್‌ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಶ್ರೀ ಗಣೇಶ್ ಪೆಟ್ರೋಲ್ ಬಂಕ್ ನಲ್ಲಿ ಮೋಸ ನಡೆದಿತ್ತು ಎನ್ನುವ ಪ್ರಕರಣದಲ್ಲಿ ಆರೋಪ ಮಾಡಿದ್ದ ಯುವಕ ತನ್ನ ಆರೋಪವನ್ನು ಹಿಂಪಡೆಯುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.


ಇತ್ತೀಚೆಗೆ ಈ ಬಂಕ್ ನಲ್ಲಿ ಪೆಟ್ರೋಲ್ ಹಾಕುವಲ್ಲಿ ಮೋಸವಾಗಿದೆ ಎಂದು ಯುವಕ ವೀಡಿಯೋವೊಂದನ್ನು ಹರಿಬಿಟ್ಟಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಈ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಗೆ ಆಗಮಿಸಿದ್ದ ಮಂಗಳೂರಿನ MRPL ಕಂಪನಿಯ ಮುಖ್ಯಸ್ಥರು ಮಾತನಾಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದೇ ಸಂಧರ್ಭದಲ್ಲಿ ಪೆಟ್ರೋಲ್ ಬಂಕ್ ನ ಕಾರ್ಯಕ್ಷಮತೆ ಬಗ್ಗೆ ಯುವಕನಿಗೆ ಕಂಪನಿಯ ಮುಖ್ಯಸ್ಥರು ಪ್ರಾತ್ಯಕ್ಷಿಕೆ ನೀಡಿ , ಘಟನೆ ನಡೆದ ದಿನ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯವಸ್ಥಾಪಕರ ಬಳಿ ಕ್ಷಮೆ ಯಾಚಿಸಿದ್ದಾರೆ. ನಂತರ ಮಾತನಾಡಿದ ಕಾರ್ತಿಕ್ ಈ ಘಟನೆಗೆ ಸಂಬಂಧಿಸಿದ ವೀಡಿಯೋವನ್ನು ಅಳಿಸಿ ಹಾಕುತ್ತೇನೆ ಹಾಗೂ ಈ ಬಂಕ್ ನ ಮೇಲೆ ನನಗೆ ಯಾವುದೇ ರೀತಿಯಾದ ಅನುಮಾನವಿಲ್ಲ ಎನ್ನುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.


ಘಟನೆಯ ಹಿನ್ನಲೆ :

ಪಟ್ಟಣದ ತೀರ್ಥಹಳ್ಳಿ ರಸ್ತೆಯ ಶ್ರೀ ಗಣೇಶ್ ಪೆಟ್ರೋಲ್ ಬಂಕ್ ನಲ್ಲಿ ಕಾರ್ತಿಕ್ ಎಂಬ ಯುವಕ ಮಂಗಳವಾರ ರಾತ್ರಿ ತನ್ನ ಬೈಕ್ ಗೆ 100 ರೂ ಪೆಟ್ರೋಲ್ ಹಾಕಿಸಿಕೊಂಡು ಕೇವಲ ಎರಡು ಕಿಮೀ ಕ್ರಮಿಸುವುದರೊಳಗೆ ಪೆಟ್ರೋಲ್ ಖಾಲಿಯಾಗಿ ನಿಂತು ಬಂಕ್ ನ ಕಾರ್ಯತತ್ಪರತೆಯ ಬಗ್ಗೆ ಅನುಮಾನಗೊಂಡು ಬುಧವಾರ ಬಂದು ಬಂಕ್ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ಅವರು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ತನ್ನ INSTAGRAM ಖಾತೆಯಲ್ಲಿ ವೀಡಿಯೋವೊಂದನ್ನು ಅಪ್ಲೋಡ್ ಮಾಡಿದ್ದನು.ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಎಬ್ಬಿಸಿದ್ದು ವಾಟ್ಸಾಪ್ , ಫೇಸ್ಬುಕ್ ಹಾಗೂ ಇನ್ನಿತರ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ನಿಯಾಮವಳಿಗಳ ಪ್ರಕಾರ ಪ್ರತಿಯೊಂದು ಪೆಟ್ರೋಲ್ ಬಂಕ್ ನಲ್ಲಿಯೂ ಎಲ್ಲ ವ್ಯವಹಾರಗಳನ್ನು ಪಾರದರ್ಶಕವಾಗಿಡುವ ಉದ್ದೇಶದಿಂದ ಗ್ರಾಹಕ ಪೆಟ್ರೋಲ್ ಅಥವಾ ಡಿಸೇಲ್ ಹಾಕಿಸಿದ ನಂತರ ಅನುಮಾನವಿದ್ದರೆ ಬಂಕ್ ನಲ್ಲಿರುವ ರೀಡಿಂಗ್ ನ್ನು ನೋಡಬಹುದು ಈ ವ್ಯವಸ್ಥೆಯನ್ನು ಮಾಲೀಕರು ಕಲ್ಪಿಸಿಕೊಡಬೇಕು ಆದರೆ ರಿಪ್ಪನ್‌ಪೇಟೆಯ ಶ್ರೀ ಗಣೇಶ್ ಪೆಟ್ರೋಲ್ ಬಂಕ್ ಇತ್ತೀಚೆಗೆ ಪ್ರಾರಂಭವಾಗಿದ್ದರಿಂದ ಆಟೋಮೆಟಿಕ್  ವ್ಯವಸ್ಥೆ ಕಲ್ಪಿಸಲಾಗಿದೆ. ಮ್ಯಾನ್ಯುಯಲ್ ರೀಡಿಂಗ್ ನೋಡಬೇಕಾದರೆ 14 transaction ಒಳಗೆ ನೋಡಬೇಕಾಗಿರುತ್ತದೆ.ಆದರೆ ಈ ಪ್ರಕರಣದಲ್ಲಿ ಆರೋಪವೆಸಗಿರುವ ಕಾರ್ತಿಕ್ ಪೆಟ್ರೋಲ್ ಹಾಕಿಸಿಕೊಂಡು 23 ಗಂಟೆಗಳ ನಂತರ ಬಂಕ್ ನಲ್ಲಿ ಬಂದು ವಿಚಾರಿಸಿದ್ದಾನೆ ಈ ಸಂಧರ್ಭದಲ್ಲಿ ಬಂಕ್ ನ ವ್ಯವಸ್ಥಾಪಕ ಉಡಾಫೆಯಾಗಿ ಉತ್ತರಿಸಿರುವುದು ಕಾರ್ತಿಕ್ ನನ್ನು ಕೆರಳಿಸಿದೆ ಈ ಹಿನ್ನಲೆಯಲ್ಲಿ ತನ್ನ Instagram ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾನೆ..

ಒಟ್ಟಾರೆಯಾಗಿ ವೈರಲ್ ಆಗಿರುವ ವೀಡಿಯೋದಲ್ಲಿ ಇರುವ ಯುವಕನ ಆರೋಪದ ಪ್ರಕಾರ ಆತನ ಬೈಕ್ ಗೆ ಪೆಟ್ರೋಲ್ ಬಿದ್ದಿದೆಯೋ ಇಲ್ಲವೋ ಅನ್ನುವುದಕ್ಕಿಂತ ಆ ಸಂಧರ್ಭದಲ್ಲಿ ಯುವಕನ ಬಳಿ ಬೇಜವಬ್ದಾರಿಯಾಗಿ ನಡೆದುಕೊಂಡ ಕಾರಣಕ್ಕೆ ಪೆಟ್ರೋಲ್ ಬಂಕ್ ವ್ಯವಸ್ಥಾಪಕನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದರು ಈಗ  ಕ್ಷಮೆ ಕೇಳುವ ಮೂಲಕ ಈ ಪ್ರಕರಣ ಸುಖಾಂತ್ಯ ಕಂಡಿದೆ.

Leave a Reply

Your email address will not be published. Required fields are marked *