w
Headlines
Home » ಅನಾರೋಗ್ಯದಿಂದ ಯುವಕ ಸಾವು – ಕುಟುಂಬಸ್ಥರಿಂದ ವಾಮಚಾರದ ಶಂಕೆ | ದೂರು ದಾಖಲು | Crime News

ಅನಾರೋಗ್ಯದಿಂದ ಯುವಕ ಸಾವು – ಕುಟುಂಬಸ್ಥರಿಂದ ವಾಮಚಾರದ ಶಂಕೆ | ದೂರು ದಾಖಲು | Crime News

1722443627932241 0.png
ಅನಾರೋಗ್ಯದಿಂದ ಯುವಕ ಸಾವು – ಕುಟುಂಬಸ್ಥರಿಂದ ವಾಮಚಾರದ ಶಂಕೆ | ದೂರು ದಾಖಲು

ರಿಪ್ಪನ್‌ಪೇಟೆ : ಯುವಕನೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದು ಕುಟುಂಬಸ್ಥರು ಇತ್ತೀಚಿಗೆ ಜಮೀನಿನ ವಿಚಾರದಲ್ಲಿ ನಡೆದ ಗಲಾಟೆ ಹಿನ್ನಲೆಯಲ್ಲಿ ವಾಮಚಾರದ ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಿರುವ ಘಟನೆ ನಡೆದಿದೆ.


ಕೋಡೂರು ಸಮೀಪದ ಹೊಸಳ್ಳಿಯ ನರೇಂದ್ರ (20) ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ನಡೆದಿದ್ದೇನು..!?

ಹೊಸಳ್ಳಿ ಗ್ರಾಮದ ಟ್ರ್ಯಾಕ್ಟರ್ ಚಾಲಕನಾಗಿದ್ದ ನರೇಂದ್ರನಿಗೆ ಕಳೆದ ಒಂದು ತಿಂಗಳಿನಿಂದ ತೀವ್ರ ಜ್ವರ ಕಾಣಿಸಿಕೊಂಡಿತ್ತು ಈ ಹಿನ್ನಲೆಯಲ್ಲಿ ಹೊಸನಗರ ಹಾಗೂ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಆದರೆ 29/07/24 ರಂದು ತೀವ್ರ ಜ್ವರದ ಹಿನ್ನಲೆಯಲ್ಲಿ ಕೋಮಾ ಗೆ ತೆರಳಿ ಅಂದು ರಾತ್ರಿ ಮೃತಪಟ್ಟಿದ್ದಾನೆ.

ಕುಟುಂಬಸ್ಥರ ದೂರಿನಲ್ಲೇನಿದೆ..!!??

ಮೃತ ಯುವಕನ ಮನೆ ಹಾಗೂ ಎದುರುಗಡೆ ಮನೆಯವರ ನಡುವೆ ಇತ್ತೀಚೆಗೆ ಜಮೀನಿನ ವಿಚಾರದಲ್ಲಿ ಗಲಾಟೆಯಾಗಿತ್ತು ಅವರೇ ಏನಾದರೂ ವಾಮಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ “ಅಸಹಜ ಸಾವು”(UDR) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.