w
Headlines
Home » Shivamogga | ಬ್ಯಾಡ್ಮಿಂಟನ್ ಆಡಿ ವಿಶ್ರಾಂತಿಗೆ ಕುಳಿತಲ್ಲೇ ಹೋಯಿತು ಪ್ರಾಣಪಕ್ಷಿ –

Shivamogga | ಬ್ಯಾಡ್ಮಿಂಟನ್ ಆಡಿ ವಿಶ್ರಾಂತಿಗೆ ಕುಳಿತಲ್ಲೇ ಹೋಯಿತು ಪ್ರಾಣಪಕ್ಷಿ –

ಬ್ಯಾಡ್ಮಿಂಟನ್ ಆಡಿ ವಿಶ್ರಾಂತಿಗೆ ಕುಳಿತಲ್ಲೇ ಹೋಯಿತು ಪ್ರಾಣಪಕ್ಷಿ – 

ಶಟಲ್‌ ಬ್ಯಾಡ್ಮಿಂಟನ್‌ ಆಡಿ ಬಂದು ವಿಶ್ರಾಂತಿಗಾಗಿ ಕುಳಿತಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.

ಮೃತ ಅಧಿಕಾರಿಯನ್ನು ಮಲ್ಲಿಕಾರ್ಜುನ್‌ (50) ಎಂದು ಗುರುತಿಸಲಾಗಿದೆ.

ಅವರು ಡಯಟ್‌ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಟವಾಡಿ ಬಂದ ಬಳಿಕ ಏಕಾಏಕಿ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಅಧಿಕಾರಿಯ ಸಾವಿಗೆ ಶಿವಮೊಗ್ಗ ಸೈಕಲ್ ಕ್ಲಬ್​ನ ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕದ ವಾಗೀಶ್ ಮತ್ತು ರೋಟರಿ ಸಂಸ್ಥೆ ಜಿ ವಿಜಯಕುಮಾರ್, ನರಸಿಂಹಮೂರ್ತಿ, ಬ್ಯಾಡ್ಮಿಂಟನ್‌ ಆಟಗಾರರು ಹಾಗೂ ಸುರಹೊನ್ನೇ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.