w
Headlines
Home » ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ನಿಧನ – ಗಣ್ಯರ ಸಂತಾಪ | Ripponpete

ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ನಿಧನ – ಗಣ್ಯರ ಸಂತಾಪ | Ripponpete

ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ನಿಧನ – ಗಣ್ಯರ ಸಂತಾಪ

ಹಿರಿಯ ಪತ್ರಕರ್ತ, ಸಹಕಾರಿ ಧುರೀಣ ಹಿರಿಯ ಪತ್ರಲರ್ತ, ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಅರಸಾಳು ಎಸ್.ಜಿ.ರಂಗನಾಥ (93) ಇಂದು ಸಂಜೆ ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮಾದ್ಯಮ ಕ್ಷೇತ್ರದಲ್ಲಿ ವಿಶಿಷ್ಠವಾದ ಛಾಫು ಮೂಡಿಸಿದ್ದ ಅರಸಾಳು ರಂಗನಾಥ್ ರವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ಸಂಚಾಲಕ ಹಾಗೂ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ದೇಶಕರಾಗಿ, ಅರಸಾಳು ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿಯಾಗಿ ಹಾಗೂ ಅರಸಾಳು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 ಹಿರಿಯ ಚೇತನ ಎಸ್.ಜಿ.ರಂಗನಾಥರ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ , ಮಾಜಿ ಸಚಿವ ಹರತಾಳು ಹಾಲಪ್ಪ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ , ಡಿಸಿಸಿ ಬ್ಯಾಂಕ್ ನಿರ್ದೇಶಕರಾದ  ಎಂ ಎಂ ಪರಮೇಶ್ ,ಜಿ.ಪಂ.ಮಾಜಿ ಸದಸ್ಯ ಬಿ.ಎಸ್.ಪುರುಷೋತ್ತಮರಾವ್ ತಾ.ಪಂ.ಮಾಜಿ ಸದಸ್ಯ ಎಂ.ಬಿ.ಲಕ್ಷ್ಮಣ ಗೌಡ , ರಿಪ್ಪನ್‌ಪೇಟೆ ಪತ್ರಕರ್ತರ ಬಳಗ, ಕಾಂಗ್ರೆಸ್ ಮುಖಂಡ ಬಿ.ಎಸ್.ಈಶ್ವರಪ್ಪ, ಎಲ್.ವೈ.ದಾನೇಶಪ್ಪಗೌಡ ಲಕ್ಕವಳ್ಳಿ ಇನ್ನಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.