w
Headlines
Home » Accident | ಟಿಪ್ಪರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ – ಓರ್ವ ಸ್ಥಳದಲ್ಲಿಯೇ ಸಾವು

Accident | ಟಿಪ್ಪರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ – ಓರ್ವ ಸ್ಥಳದಲ್ಲಿಯೇ ಸಾವು

Accident | ಟಿಪ್ಪರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ – ಓರ್ವ ಸ್ಥಳದಲ್ಲಿಯೇ ಸಾವು 



ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿಯ ಮಂದಾರ್ತಿ ಗ್ರಾಂಡ್ ಹೊಟೇಲ್ ಎದುರು ನಿಂತಿರುವ ಟಿಪ್ಪರ್ ಗೆ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಲ್ಲಿದ್ದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ತೀರ್ಥಹಳ್ಳಿ ಪಟ್ಟಣದ ದೊಡ್ಡಮನೆಕೇರಿಯ ಸಲ್ಮಾನ್ ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಸಲ್ಮಾನ್ ಕ್ಯಾಂಟರ್ ಒಳಗೆ ಮಲಗಿದ್ದು ಈ ವೇಳೆ ಕ್ಯಾಂಟರ್ ಡ್ರೈವರ್ ನಿಯಂತ್ರಣ ತಪ್ಪಿ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಲ್ಮಾನ್ ಸ್ಥಳದಲ್ಲೇ ಪ್ರಾಣ ಬಿಟ್ಟರೆ ಕ್ಯಾಂಟರ್ ಡ್ರೈವರ್ ಗೆ ಗಂಭೀರ ಗಾಯವಾಗಿದ್ದು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.



ಆಗುಂಬೆಯಿಂದ ತೀರ್ಥಹಳ್ಳಿಗೆ ಕ್ಯಾಂಟರ್ ಬರುವ ವೇಳೆ ಈ ದುರ್ಘಟನೆ  ನಡೆದಿದೆ. ಕ್ಯಾಂಟರ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಸಲ್ಮಾನ್ ಮೃತದೇಹ ತೀರ್ಥಹಳ್ಳಿಯ ಶವಾಗಾರದಲ್ಲಿ ಇರಿಸಲಾಗಿದ್ದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.