w
Headlines
Home » ಗಾಂಜಾ ಸಾಗಿಸುತಿದ್ದ ಮಹಿಳೆಯ ಬಂಧನ – 4.5 ಲಕ್ಷ ಮೌಲ್ಯದ 7 ಕೆ ಜಿ ಗಾಂಜಾ ವಶಕ್ಕೆ.‌!!

ಗಾಂಜಾ ಸಾಗಿಸುತಿದ್ದ ಮಹಿಳೆಯ ಬಂಧನ – 4.5 ಲಕ್ಷ ಮೌಲ್ಯದ 7 ಕೆ ಜಿ ಗಾಂಜಾ ವಶಕ್ಕೆ.‌!!

ಗಾಂಜಾ ಸಾಗಿಸುತಿದ್ದ ಮಹಿಳೆಯ ಬಂಧನ – 4.5 ಲಕ್ಷ ಮೌಲ್ಯದ 7 ಕೆ ಜಿ ಗಾಂಜಾ ವಶಕ್ಕೆ.‌!!


ಗಾಂಜಾ ಸಾಗಾಟ ಮಾಡುವಾಗ ಪೊಲೀಸರು ದಾಳಿ ನಡೆಸಿ 4.5 ಲಕ್ಷ ರೂ. ಮೌಲ್ಯದ 7 ಕೆಜಿ ಗಾಂಜಾ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಸೋಮವಾರ ಭದ್ರಾವತಿ ನಗರದ ಹೊಸಮನೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸತ್ಯ ಸಾಯಿ ನಗರದಲ್ಲಿ ಮಾಧಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಂಡವನ್ನ ರಚಿಸಿ ದಾಳಿ ನಡೆಸಲಾಗಿತ್ತು.

ಗಾಂಜಾ ಸಾಗಾಟ ಮಾಡುತ್ತಿದ್ದ ಸತ್ಯಸಾಯಿ ನಗರದ ನಿವಾಸಿ ಹುಸೇನ್ ಬಿ (35) ಈಕೆಯನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 4,50,000 /- ರೂ ಗಳ 7ಕೆಜಿ 590 ಗ್ರಾಂ ಒಣ ಗಾಂಜಾವನ್ನು ಅಮಾನತುಪಡಿಸಿಕೊಳ್ಳಲಾಯಿತು.  

ಎಸ್ಪಿ ಮಿಥುನ್ ಕುಮಾರ್ ಜಿ ಕೆ,  ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಹಾಗೂ  ಕಾರಿಯಪ್ಪ ಎ ಜಿರವರ ಮಾರ್ಗದರ್ಶನದಲ್ಲಿ ಭದ್ರಾವತಿ ಡಿವೈಎಸ್ಪಿ ನಾಗರಾಜ್ ಸಿಪಿಐ ಶ್ರೀ ಶೈಲ ಕುಮಾರ್ ರವರ ಮೇಲ್ವಿಚಾರಣೆಯಲ್ಲಿ, ಹೊಸಮನೆ ಪಿಐ ಕೃಷ್ಣ ಕುಮಾರ್ ಬಿ ಮಾನೆ ಹಾಗೂ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.‌


ಆರೋಪಿತಳ ವಿರುದ್ಧ ಹೊಸಮನೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0072/2024 ಕಲಂ 20 (ಬಿ) ii (ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.