w
Headlines
Home » Hosanagara | ಮಹಿಳೆಗೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಂದ ಚೂರಿ ಇರಿತ

Hosanagara | ಮಹಿಳೆಗೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಂದ ಚೂರಿ ಇರಿತ

Hosanagara | ವಿವಾಹಿತ ಮಹಿಳೆಗೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಂದ ಚೂರಿ ಇರಿತ


ಹೊಸನಗರ : ಮಹಿಳೆಯೊಬ್ಬರಿಗೆ ಅಪರಿಚಿತ ಯುವಕರು ಚಾಕು ಇರಿದು ಪರಾರಿಯಾಗಿರುವ ಘಟನೆ ನಡೆದಿದೆ.

ಪಟ್ಟಣದ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುವ ಮಹಿಳೆ ಗಣಪತಿ ದೇವಸ್ಥಾನ ರಸ್ತೆಯ ದೇವಸ್ಥಾನದ ಎದುರು ಮನೆಯಲ್ಲಿ ಊಟ ಮುಗಿಸಿ ಪಾರ್ಲರ್ಗೆ ಮರಳುತ್ತಿರುವಾಗ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಚಾಕುವಿನಿಂದ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಗಾಯಗೊಂಡ ಮಹಿಳೆ ನಾಜೀಮಾ (38) ಬುರ್ಖಾ ಧರಿಸಿದ್ದರು ಬುರ್ಖಾದ  ಬಲ ತೋಳಿನ ಮೇಲ್ಭಾಗ ಚಾಕುವಿನ  ಇರಿತಕ್ಕೆ ಕತ್ತರಿಸಿ ಹೋಗಿದೆ

ಹೊಸನಗರ ಪಟ್ಟಣದಲ್ಲಿ ಪ್ರಥಮವಾಗಿ ನಡೆದ ಈ ಘಟನೆ ನಾಗರಿಕರಲ್ಲಿ ದಿಗ್ಬ್ರಮೆ ಉಂಟುಮಾಡಿದೆ.

ಬೈಕ್ ನಲ್ಲಿ ಬಂದ ಅಪರಿಚಿತ ಯುವಕರು ಬೈಕ್ ಚಾಲಕ ಹೆಲ್ಮೆಟ್ ಧರಿಸಿದ್ದು ಹಿಂಬದಿ ಸವಾರ ಮಾಸ್ಕ್ ಹಾಕಿದ್ದನೆಂದು ಗಾಯಗೊಂಡ ಮಹಿಳೆ ತಿಳಿಸಿದ್ದು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.

 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.