Headlines

ಹೊಂಬುಜ ಜಗನ್ಮಾತೆ ಸನ್ನಿಧಿಯಲ್ಲಿ ಶ್ರೀಗಳಿಂದ ಮಳೆಗಾಗಿ ಪ್ರಾರ್ಥನೆ|hombuja

ಹೊಂಬುಜ ಜಗನ್ಮಾತೆ ಸನ್ನಿಧಿಯಲ್ಲಿ ಶ್ರೀಗಳಿಂದ ಮಳೆಗಾಗಿ ಪ್ರಾರ್ಥನೆ ರಿಪ್ಪನ್ ಪೇಟೆ : ಸಮೀಪದ ಹೊಂಬುಜ  ಕ್ಷೇತ್ರದಲ್ಲಿ ಶ್ರಾವಣ ಮಾಸದ ಮೂರನೇ ಸಂಪತ್ ಶುಕ್ರವಾರ ಅಂಗವಾಗಿ ಮಾತೆ  ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಮಠದ ಪೀಠಾಧಿಕಾರಿ  ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರು “ಇಳೆಗೆ ಮಳೆ ಬರಲಿ; ಭಕ್ತಿ ಸಿಂಚನ ತಂಪೆರೆಯಲಿ”ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಭಕ್ತರು ಜಗನ್ಮಾತೆ ಶ್ರೀ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಫಲಪುಷ್ಪ, ಧಾನ್ಯ, ಇಷ್ಟ ನೈವೇದ್ಯಗಳನ್ನು ಸಮರ್ಪಿಸಿದರು. ಮಳೆ ಬರಲಿ,…

Read More

ವಲಯ ಮಟ್ಟದ ಕ್ರೀಡಾಕೂಟ – ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ|Rpet news

ವಲಯ ಮಟ್ಟದ ಕ್ರೀಡಾಕೂಟ – ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ರಿಪ್ಪನ್‌ಪೇಟೆ : ಹೆದ್ದಾರಿಪುರದಲ್ಲಿ ಬುಧವಾರ ನಡೆದ ವಲಯ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ರಿಪ್ಪನ್‌ಪೇಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಲಕರ ಹಾಗೂ ಬಾಲಕಿಯರ ಖೋಖೋ ಪಂದ್ಯಾವಳಿಯಲ್ಲಿ ಬಾಲಕರ ತಂಡ ಪ್ರಥಮ,ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದರೆ,ಥ್ರೋ ಬಾಲ್ ನಲ್ಲಿ ಬಾಲಕರ ತಂಡ…

Read More

ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 352ನೇ ಆರಾಧನ ಮಹೋತ್ಸವ

ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 352ನೇ ಆರಾಧನ ಮಹೋತ್ಸವ  ರಿಪ್ಪನ್‌ಪೇಟೆ: ಸಮೀಪದ ಬೈರಾಪುರ ಗ್ರಾಮದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರದ್ಧಾ ಭಕ್ತಿಯಿಂದ 352ನೇ ಗುರುಸಾರ್ವಭೌಮರ ಆರಾಧನಾ ಮಹೋತ್ಸವವು ಸಂಭ್ರಮದೊಂದಿಗೆ ಸಂಪನ್ನಗೊಂಡಿತು. ಬೆಳಗ್ಗೆ ಗುರುರಾಯರಿಗೆ ಪಂಚಾಮೃತ ಅಭಿಷೇಕ, ಪವಮಾನ ಪೂಜೆ ಹೋಮ ಹವನಗಳು ನಂತರ ರಾಯರಿಗೆ ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿತು. ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಆರಾಧನ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರ ದಂಡು ಹರಿದು ಬಂದಿತು.

Read More

ಗಣಪತಿ ಹಬ್ಬದ ಭದ್ರತೆಯಲ್ಲಿ ಪೊಲೀಸರೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರಿಗೆ ಅವಕಾಶ|Shivamogga police

ಗಣಪತಿ ಹಬ್ಬದ ಭದ್ರತೆಯಲ್ಲಿ ಪೊಲೀಸರೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರಿಗೆ ಅವಕಾಶ ಶಿವಮೊಗ್ಗ : ಮುಂಬರುವ ಗಣೇಶ ಹಬ್ಬದ ಭದ್ರತೆಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾರಂಭಿಸಿದೆ. ಇದೀಗ ಗಣೇಶೋತ್ಸವದ ಭದ್ರತಾ ಕಾರ್ಯಕ್ಕೆ ನಾಗರೀಕರು ಹಾಗೂ ಸಂಘಸಂಸ್ಥೆಗಳ ನೆರವು ಪಡೆದುಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ, ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿಯಿರುವ ಸಾರ್ವಜನಿಕರು – ಸಂಘಸಂಸ್ಥೆಗಳಿಗೆ ಅವಕಾಶ ಕಲ್ಪಿಸಿದೆ. ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು…

Read More

ತೀರ್ಥಹಳ್ಳಿಯಲ್ಲಿ ಕೆನ್ನಾಯಿ (ಕೆಂಪು ನಾಯಿ)ಗುಂಪು ಪ್ರತ್ಯಕ್ಷ!!!|red dog

ತೀರ್ಥಹಳ್ಳಿಯಲ್ಲಿ ಕೆನ್ನಾಯಿ (ಕೆಂಪು ನಾಯಿ)ಗುಂಪು ಪ್ರತ್ಯಕ್ಷ! ತೀರ್ಥಹಳ್ಳಿ : ತಾಲೂಕಿನ ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆಯಾಗಿದ್ದು  ಮಾರೀಕೆರೆ ಅರಣ್ಯದ ಬಳಿ ಅತಿ ವಿರಳವಾದ ಕೆನ್ನಾಯಿಯ ಗುಂಪೊಂದು ಕಂಡುಬಂದಿದೆ. ಅರಣ್ಯ ವೀಕ್ಷಕರಾದ ಪ್ರಜ್ವಲ್ HG ಇವರು ಕರ್ತವ್ಯ ದಲ್ಲಿದ್ದ ಸಂದರ್ಭದಲ್ಲಿ ತಮ್ಮ ಕುಟುಂಬದ ಗುಂಪಿನಲ್ಲಿ ಮಾರಿಕೆರೆ ದಡದಿಂದ ಕಾಡಿನತ್ತ ಹಾದು ಹೋಗುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ಮಾತ್ರ ಕಂಡುಬರುವ ಇವುಗಳು ತೀರ್ಥಹಳ್ಳಿಯ ಹೊದಲದಲ್ಲಿ ಕಂಡುಬಂದಿದ್ದು ಯಾವ ಕಾರಣಕ್ಕೆ ಬಂದಿದೆ ಎಂಬುದು ಮಾತ್ರ…

Read More

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ KSRTC ಬಸ್ ಸೇವೆ ಪ್ರಾರಂಭ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆ.31 ರಿಂದ ವಿಮಾನ ಹಾರಾಟ ಪ್ರಾರಂಭವಾಗಿದ್ದು, ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರಯಾಣಿಕರು ಪ್ರಯಾಣಿಸಲು ಅನುಕೂಲವಾಗುವಂತೆ ಕ.ರಾ.ರ.ಸಾ.ನಿಗಮವು ಶಿವಮೊಗ್ಗ-ವಿಮಾನ ನಿಲ್ದಾಣ- ಕಾಚಿನಕಟ್ಟೆಗೆ ನೂತನ ಸಾರಿಗೆ ಕಾರ್ಯಾಚರಣೆಯ ಸಮಯದ ವಿವರವನ್ನು ನೀಡಲಾಗಿದೆ. ಶಿವಮೊಗ್ಗದಿಂದ ಬೆ.8.30 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಹಾಗೂ ಕಾಚಿನಕಟ್ಟೆಯಿಂದ ಬೆ.9.00 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಸಂಜೆ 6.30 ವರೆಗೆ ಬಸ್‍ಗಳ ಓಡಾಟವಿರುತ್ತದೆ. ಸಾರ್ವಜನಿಕರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಾರಿಗೆ ನಿಗಮದ ಹವಾ…

Read More

ಶಿವಮೊಗ್ಗದ “ಕುವೆಂಪು ವಿಮಾನ ನಿಲ್ದಾಣ”ದಲ್ಲಿ ಮೊದಲ ದಿನವೇ ಕನ್ನಡದ ಕಡೆಗಣನೆ|airport

ಶಿವಮೊಗ್ಗದ “ಕುವೆಂಪು ವಿಮಾನ ನಿಲ್ದಾಣ”ದಲ್ಲಿ ಮೊದಲ ದಿನವೇ ಕನ್ನಡದ ಕಡೆಗಣನೆ ಶಿವಮೊಗ್ಗ : ಇಲ್ಲಿನ ಕುವೆಂಪು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡುವ ಡಿಜಿಟಲ್ ಮಾಹಿತಿ ಫಲಕದಲ್ಲಿ ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿದ್ದು, ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಂತೆ ಟ್ವಿಟರ್ ಖಾತೆಯಲ್ಲಿ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯ ಡಿಜಿಟಲ್ ಮಾಹಿತಿ ಫಲಕದ ಫೋಟೋ ಶೇರ್ ಮಾಡಿ, ಹಿಂದಿ ಹೇರಿಕೆ ಸರಿಯಲ್ಲ ಎಂದು ದೂರಿದ್ದಾರೆ. ಇದು ಯಾವುದೋ ಹಿಂದಿ ರಾಜ್ಯವಲ್ಲ….

Read More

ಸಾಗರದ ಬೆಥನಿ ಕಾನ್ವೆಂಟ್ ನಲ್ಲಿ ರಕ್ಷಾ ಬಂಧನ ಆಚರಣೆ ವಿವಾದ – ಪೊಲೀಸರ ಮಧ್ಯಸ್ಥಿಕೆಯಿಂದ ಅಂತ್ಯ|sagar news

ಸಾಗರ : ಇಲ್ಲಿನ ಮಂಕಳಲೆ ಸಂತ ಜೊಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ರಕ್ಷಾಬಂಧನ ಆಚರಣೆಗೆ ಸಂಬಂಧಪಟ್ಟಂತೆ ಮುಖ್ಯ ಶಿಕ್ಷಕರು ಮತ್ತು ಪೋಷಕರ ನಡುವೆ ವಾಗ್ವಾದ ನಡೆಯಿತು. ಬುಧವಾರ ರಕ್ಷಾಬಂಧನ ಹಿನ್ನೆಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿನಿ ವಿದ್ಯಾಥಿಯೊಬ್ಬನಿಗೆ ರಾಖಿ ಕಟ್ಟಿದ್ದಾಳೆ. ಎಲ್ಲರ ಎದುರಿಗೆ ರಾಖಿ ಕಟ್ಟಿದ್ದರಿಂದ ಬಾಲಕ ಮಾನಸಿಕವಾಗಿ ಬೇಸರಗೊಂಡಿದ್ದಾನೆ. ಬಾಲಕನಿಗೆ ರಾಖಿ ಕಟ್ಟಿದಾಗ ಉಳಿದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಇದರಿಂದ ನೊಂದ ವಿದ್ಯಾರ್ಥಿ ಬಾತ್‌ರೂಮ್‌ಗೆ ಹೋಗಿ ಬಾಗಿಲು…

Read More

ಶಿವಮೊಗ್ಗಕ್ಕೆ 72 ಪ್ರಯಾಣಿಕರ ಹೊತ್ತು ತಂದ ಮೊದಲ ವಿಮಾನ|airport

ಶಿವಮೊಗ್ಗಕ್ಕೆ ಜನರನ್ನು ಹೊತ್ತು ಬಂತು ಮೊದಲ ವಿಮಾನ ಶಿವಮೊಗ್ಗ : ಸೋಗಾನೆಯಲ್ಲಿನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂಡಿಗೋ ಎಟಿಆರ್ ವಿಮಾನ ಬಂದಿಳಿದಿದೆ.  ಇಂಡಿಗೋ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ,ಶಾಸಕರಾದ ಬೇಳೂರು ಗೋಪಾಲಕೃಷ್ಣ,ಚನ್ನಬಸಪ್ಪ ,ಬಿ ವೈ ವಿಜಯೋಂದ್ರ, ಆರಗ ಜ್ಞಾನೇಂದ್ರ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ. ಸೇರಿ ಒಟ್ಟು 72 ಮಂದಿ ಆಗಮಿಸಿದರು. ಇಂಡಿಗೋ ಸಂಸ್ಥೆಯ ಎಟಿಎಅರ್ ವಿಮಾನ ಬೆಳಗ್ಗೆ 11 ಗಂಟೆ ಹೊತ್ತಿಗೆ ಲ್ಯಾಂಡ್ ಆಯಿತು. ಜನರನ್ನು ಹೊತ್ತು ಬಂದಿದ್ದ…

Read More

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಳೆಯಿಂದ ಲೋಹದ ಹಕ್ಕಿಗಳ ಕಲರವ – ಮಧು ಬಂಗಾರಪ್ಪ ಭೇಟಿ|airport

ಶಿವಮೊಗ್ಗ : ಮಲೆನಾಡಿಗರ ಬಹುದಿನದ ಕನಸಾಗಿದ್ದ ಶಿವಮೊಗ್ಗ ಏರ್ಪೋರ್ಟ್ ನಲ್ಲಿ ನಾಳೆಯಿಂದ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡುವ ಇಂಡಿಗೋ ವಿಮಾನ  ಬೆಳಗ್ಗೆ 11:05ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಮೊದಲ ವಿಮಾನ ಆಗಮಿಸುತ್ತಿರುವುದರಿಂದ ಶಿವಮೊಗ್ಗದ ಏರ್ಪೋರ್ಟ್ ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಎಂ ಬಿ ಪಾಟೀಲ್ ವಿಮಾನದ ಮೂಲಕ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಮೊದಲ ವಿಮಾನ ಆಗಿರುವುದರಿಂದ ವಾಟರ್ ಸೆಲ್ಯೂಟ್ ಮೂಲಕ  ಅಧಿಕಾರಿಗಳು…

Read More