ಕೇಂದ್ರ ಸರ್ಕಾರದ ಯೋಜನೆ ಜನಸಾಮಾನ್ಯರಿಗೂ ತಲುಪಲಿ – ಬಿ ವೈ ಆರ್
ರಿಪ್ಪನ್ ಪೇಟೆ: ಸ್ವಾತಂತ್ರ್ಯ ಬಂದು ಆರು ದಶಕದಲ್ಲಿ ಕಾಣದ ಅಭಿವೃದ್ಧಿ, ಕೇವಲ 09 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿರುವುದು ಕೇಂದ್ರದ ಮೋದಿಜಿ ಸರ್ಕಾರದ ಸಾಧನೆಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಪಟ್ಟಣದ ಭೂಪಾಳ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ಕೇಂದ್ರದ ವಿಕಸಿತ ಸಂಕಲ್ಪ ಯಾತ್ರೆ ಗೆ ಚಾಲನೆ ನೀಡಿ ಅವರು ಮಾತನಾಡಿ ಅಭಿವೃದ್ಧಿಯನ್ನು ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಭಿವೃದ್ಧಿ ಹೊಂದದ ದೇಶಗಳಾಗಿ ಪ್ರಪಂಚವನ್ನು ಮೂರು ವಿಭಜನೆ ಮಾಡಿದರೆ, ಭಾರತವು ಎರಡನೇ ಪಟ್ಟಿಯಲ್ಲಿದೆ.ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯನ್ನು ಇಟ್ಟುಕೊಂಡು, ಕೇಂದ್ರ ಸಚಿವರ ಸಮ್ಮುಖದಲ್ಲಿ ಸುಮಾರು ನಾಲ್ಕು ತಿಂಗಳಲ್ಲಿ ರೂ 2500 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಜರುಗಲಿದೆ ಎಂದರು.
ಈಗಾಗಲೇ 16,000 ಕೋಟಿ ಕಾಮಗಾರಿ ಪೂರ್ಣವಾಗಿದ್ದು, ತುಂಗಾ ಸೇತುವೆ ಬಳಿ 22 ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆಗೊಳ್ಳಲಿದೆ ಎಂದರು.
2.25 ಲಕ್ಷ ಜನರಿಗೆ 128 ಕೋಟಿ ರೂ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಸೌಲಭ್ಯ ಪಡೆದಿದ್ದಾರೆಂದು ವಿವರಿಸಿದರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಆ ಕಿಸಾನ್ ಸನ್ಮಾನ ಫಸಲು ಭೀಮಾ ಕೃಷಿ ಸಿಂಚೆಯ ಮಹಿಳಾ ಸಬಲೀಕರಣ ಜನೌಷಧಿ ಉಜಾಲ ಉಜಾಲ ಯೋಜನೆ ಜನಧನ್ ಮುದ್ರಾ ಯೋಜನೆ ಯಿಂದ ರೈತ ಕುಟುಂಬಗಳು ಸೇರಿದಂತೆ ಕುಶಲ ಕಸುಬುದಾರರು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಈ ಕುರಿತು ವಿಕಸಿತ ಸಂಕಲ್ಪ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಚಾರಪಡಿಸಲಾಗುತ್ತಿದ್ದ. ಈ ಯೋಜನೆಯ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ,ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯ ಪಿ ರಮೇಶ್ ಮಂಜುಳಾ ,ಅಶ್ವಿನಿ ರವಿಶಂಕರ್, ದೀಪ ಸುಧೀರ್ , ವಿನೋದ ಹಿರಿಯಣ್ಣ, ಜಿ.ಡಿ ಮಲ್ಲಿಕಾರ್ಜುನ, ಮಧುಸೂದನ್, ಸುಂದರೇಶ್ ನಬಾರ್ಡ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಶರತ್, ವ್ಯವಸ್ಥಾಪಕ ದೇವರಾಜ್ ಇನ್ನಿತರರು ಹಾಜರಿದ್ದರು.
ತಾಪಂ ಮಾಜಿ ಸದಸ್ಯೆ ನಾಗರತ್ನ ದೇವರಾಜ್ ಪ್ರಾರ್ಥಿಸಿದರು,ಸುಂದರೇಶ್ ಸ್ವಾಗತಿಸಿದರು.