POSTMAN NEWS

ನೈಜ ಸುದ್ದಿ ನೇರ ಬಿತ್ತರ..

Hosanagara | ಕೊಡಚಾದ್ರಿ ಚಿಟ್ ಫಂಡ್ ನೌಕರರಿಂದ ವ್ಯಕ್ತಿಯ ಮೇಲೆ ಹಲ್ಲೆ – ಹೊಸನಗರದಲ್ಲೊಂದು ಕಾರ್ಪೊರೇಟ್ ರೌಡಿಸಂ

Hosanagara | ಕೊಡಚಾದ್ರಿ ಚಿಟ್ ಫಂಡ್ ನೌಕರರಿಂದ ವ್ಯಕ್ತಿಯ ಮೇಲೆ ಹಲ್ಲೆ – ಹೊಸನಗರದಲ್ಲೊಂದು ಕಾರ್ಪೊರೇಟ್ ರೌಡಿಸಂ


ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ಪ್ರತಿಷ್ಠಿತ ಕೊಡಚಾದ್ರಿ ಚಿಟ್ ಫಂಡ್ ಕಂಪನಿಯ ನೌಕರರು ಚೀಟಿ ಹಾಕಲ್ಲ ಎಂದ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ.

ಹೊಸನಗರ ನ್ಯಾಯಲಯದ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಚೀಟಿ ಹಾಕಲ್ಲ ಎಂದವನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಘಟನೆಯ ಹಿನ್ನಲೆ :

ಹೊಸನಗರದ ಪ್ರತಿಷ್ಠಿತ ಕೊಡಚಾದ್ರಿ ಚಿಟ್ ಫಂಡ್ ಕಂಪನಿಯ ಏಜೆಂಟ್ ಒಬ್ಬರು ಒಬ್ಬ ವ್ಯಕ್ತಿಯ ಬಳಿ ಚೀಟಿ ಹಾಕುವಂತೆ ಪ್ರಮೋಷನ್ ನೀಡಲು ಹೋಗಿದ್ದಾರೆ ಈ ಸಂಧರ್ಭದಲ್ಲಿ ಆನ್ ಲೈನ್ ಲೋನ್ ಆಪ್ ಮೂಲಕ ಸಾಕಷ್ಟು ಹಣ ಕಳೆದುಕೊಂಡಿದ್ದ ವ್ಯಕ್ತಿ ಇದೆಲ್ಲಾ ಮೋಸ ಹಾಗೇ ಹೀಗೆ ಎಂದು ಮಾತನಾಡಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ..


ಈ ಬಗ್ಗೆ ಚಿಟ್ ಫಂಡ್ ಕಂಪನಿಯ ಎಲ್ಲಾ ನೌಕರರಿಗೆ ಮಾಹಿತಿ ತಿಳಿದು ನ್ಯಾಯಾಲಯದ ಮುಂಭಾಗದಲ್ಲಿ ಆ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ.
ಈ ಸಂಧರ್ಭದಲ್ಲಿ ಅಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಘಟನೆಯ ವೀಡಿಯೋ ಮಾಡಲು ಮುಂದಾದಗ ಅವರ ಮೊಬೈಲ್ ಕಸಿದುಕೊಂಡು ಯಾಕೆ ವೀಡಿಯೋ ಮಾಡ್ತೀಯಾ ಎಂದು ಧಮ್ಕಿ ಹಾಕಿದ್ದಾರೆ.

ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಚಿಟ್ ಫಂಡ್ ನೌಕರನ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಹಾಗೂ ಕಾನೂನನ್ನು ಮರೆತು ಏಕಾಏಕಿ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ ಗಿರಿ ಮೆರೆದ ಸಂಸ್ಥೆಯ ನೌಕರರ ಮೇಲೆ ಏನು ಕ್ರಮವಾಗುತ್ತೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.