Headlines

Shivamogga | ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಬೇಜವಾಬ್ದಾರಿಗೆ ಬಾಲಕಿ ಬಲಿ..!!

Shivamogga | ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ..!!

ತರಕಾರಿ ಬೆಳೆದು ಬದುಕುತ್ತಿದ್ದ ಸುಂದರ ಸಂಸಾರದ ಮುದ್ದು ಮಗಳು ರೈಲ್ವೆ ಕಾಮಗಾರಿಯ ಅಸಮರ್ಪಕ ಕಾರ್ಯಕ್ಕೆ ಬಲಿಯಾಗಿರುವ ಘಟನೆ ನಿನ್ನೆ ಸಂಜೆ ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ನಡೆದಿದೆ.

ರೈಲ್ವೆ ಟರ್ಮಿನಲ್ ನಿರ್ಮಾಣದ ಹಿನ್ನೆಲೆಯಲ್ಲಿ ರೈತರಿಂದ ಭೂಮಿ ಪಡೆದು ನಡೆಯುತ್ತಿರುವ ಕಾಮಗಾರಿಯಲ್ಲಿ ಕೋಟೆಗಂಗೂರು ಹಾಗೂ ಅಲ್ಲಿಂದ ಅನ್ಯ ಊರಿನ ಸಂಪರ್ಕ ಹಾಗೂ ತೋಟ ಹೊಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಆಳವಾದ ಗುಂಡಿಯನ್ನು ತೆಗೆದಿದ್ದರು.

 ಅಲ್ಲಿ ಓಡಾಡುವ ಜನರ ರಕ್ಷಣೆಗೆ ಅಗತ್ಯ ವ್ಯವಸ್ಥೆ ಮಾಡಿರಲಿಲ್ಲ.
ನಿನ್ನೆ ಇದೇ ಕೋಟೆಗಂಗೂರಿನಲ್ಲಿ 5ನೇ ತರಗತಿ ಓದುತ್ತಿದ್ದ ಚೈತ್ರಾ ಶಾಲೆಯಿಂದ ಮನೆಗೆ ಬಂದು ಮನೆಯ ಕೀ ತೆಗೆದುಕೊಂಡು ಬರಲು ತಮ್ಮ ತಂದೆ ತಾಯಿ ಕೆಲಸ ಮಾಡುತ್ತಿದ್ದ ಹೊಲದ ಕಡೆ ಹೋಗಿದ್ದಾಳೆ. ಕೀ ಪಡೆದು ವಾಪಾಸಾಗುತ್ತಿದ್ದಾಗ ಮೊನ್ನೆ ಸುರಿದ ಭಾರೀ ಮಳೆಗೆ ಗುಂಡಿಯ ಕಲ್ಲು ಕಳಚಿದ್ದು, ಮಣ್ಣು ಕುಸಿದಿತ್ತು. ಅಲ್ಲಿ ಬರುತ್ತಿದ್ದ ಚೈತ್ರಾ ಗುಂಡಿ ಪಾಲಾಗಿದ್ದಾಳೆ.

ಅಂತೆಯೇ ಸಂಜೆ ಚೈತ್ರಾ ತಂದೆ ಶ್ರೀನಿವಾಸ್ ಹಾಗೂ ಅವರ ಪತ್ನಿ ಮನೆಗೆ ಬಂದು ನೋಡಿದರೆ ಚೈತ್ರಾ ಬಂದಿಲ್ಲ ಎಂಬುದು ಗೊತ್ತಾಗಿ ಗಾಬರಿಗೊಂಡಿದ್ದಾರೆ. ಎಲ್ಲೆಡೆ ಅವರು ಹಾಗೂ ಗ್ರಾಮಸ್ಥರು ಹುಡುಕಿದ್ದಾರೆ. ರಾತ್ರಿ ಗುಂಡಿಯಲ್ಲಿ ಸಾವು ಕಂಡಿರುವ ಚೈತ್ರಾ ಪತ್ತೆಯಾಗಿದ್ದಾಳೆ. ಈ ಸಂಬಂಧ ಶ್ರೀನಿವಾಸ್ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

About The Author

Leave a Reply

Your email address will not be published. Required fields are marked *