Headlines

Accident | ಕಾಡುಪ್ರಾಣಿ ಅಡ್ಡ ಬಂದು ಬೈಕ್ ಅಪಘಾತ – ಪತಿ ಸಾವು ,ಪತ್ನಿ ಗಂಭೀರ

ಕಾಡುಪ್ರಾಣಿಯೊಂದು ದಾರಿಗೆ ಅಡ್ಡಬಂದ ಪರಿಣಾಮ ಭೀಕರ ಅಪಘಾತವೊಂದು ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಯರೆಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವರು ಸಾವನ್ನಪ್ಪಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಶಿಕಾರಿಪುರದ ಇಟ್ಟಿಗೆಹಳ್ಳಿ ಮೂಲದ ಗಣೇಶ್ ಮೃತರು, ಇನ್ನೂ ಘಟನೆಯಲ್ಲಿ  ಇವರ ಪತ್ನಿ ರಂಜಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪತ್ನಿ ರಂಜಿರನ್ನು ಅವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಿಡಲು ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ. 

ಇಲ್ಲಿನ ಯರೆಕಟ್ಟೆ ಬಳಿಯಲ್ಲಿ ಇರುವ ಬೂತಪ್ಪನ ಕಟ್ಟೆಯ ಹತ್ತಿರ ವನ್ಯಜೀವಿಯೊಂದು ಅಡ್ಡಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಮುಂದಾದ ಗಣೇಶ್​ ತಮ್ಮ ಬೈಕ್​ನ್ನ ರಸ್ತೆ ಬದಿಯ ಕಟ್ಟೆಗೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ. 

ಈ ವೇಳೆ ಗಣೇಶ್​ ತೀವ್ರ ಪೆಟ್ಟಿನಿಂದ ಸಾವನ್ನಪ್ಪಿದ್ದಾರೆ. ರಂಜಿತಾ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *