Headlines

ಮಲ್ಲಿಕಾರ್ಜುನ ಖರ್ಗೆಯವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ – ಆರಗ ಜ್ಞಾನೇಂದ್ರ |araga

ಮಲ್ಲಿಕಾರ್ಜುನ ಖರ್ಗೆಯವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಅರಣ್ಯ ಸಚಿವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡಿದಂತಹ ಕೆಲವು ಮಾತುಗಳನ್ನು ಆಡದೇ ಇರುವ ಮಾತುಗಳನ್ನು ಸೇರಿಸಿ ರಾಜಕಾರಣಕ್ಕೆ ಬಳಸಿ ರಾಜ್ಯಾದ್ಯಂತ ಸುದ್ದಿಯಾಗಿದೆ. ಅದರ ಬಗ್ಗೆ ಯಾರಿಗಾದರೂ ಮನಸ್ಸಿಗೆ ಕಸಿವಿಸಿ ಆಗಿದ್ದರೆ ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನೆಡೆಸಿ…

Read More

ಉಳ್ಳೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – ಗಾಯಾಳುಗಳು ಆಸ್ಪತ್ರೆಗೆ ದಾಖಲು

ಸಾಗರ ತಾಲೂಕಿನ ಉಳ್ಳೂರಿನ ಹೆದ್ದಾರಿಯ ರಸ್ತೆಯಲ್ಲಿ KSRTC ಬಸ್ ಪಲ್ಟಿಯಾದ ಘಟನೆ ನಡೆದಿದೆ.ಬಸ್ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತಿದ್ದ ವೇಳೆ ಈ ಘಟನೆ ನಡೆದಿದೆ. ಉಳ್ಳೂರು ರಸ್ತೆಯ ತಿರುವಿನ ಬಳಿ ಬೈಕ್ ಒಂದು ಅಡ್ಡ ಬಂದಿದ್ದು ಬೈಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಬಸ್ ಚಾಲಕ ತಿರುವು ತೆಗೆದುಕೊಂಡಿದ್ದಾರೆ. ಆದರೆ ರಸ್ತೆಯ ಮೇಲೆ ಮಣ್ಣು ಇದ್ದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದ್ದು, ಬಸ್ ನಲ್ಲಿದ್ದ 20 ಜನರಿಗೆ…

Read More

ತನ್ನ‌ ಭಾವನನ್ನೇ ರಸ್ತೆ ಅಪಘಾತದಲ್ಲಿ ಸಾಯಿಸಲು ಯತ್ನಿಸಿದ ಭಾಮೈದುನ ಅರೆಸ್ಟ್|arrested

ತನ್ನ‌ ಭಾವನನ್ನೇ ರಸ್ತೆ ಅಪಘಾತದಲ್ಲಿ ಸಾಯಿಸಲು ಯತ್ನಿಸಿದ ಭಾಮೈದುನ ಅರೆಸ್ಟ್ ಹೊಳೆಹೊನ್ನೂರು : ಇಲ್ಲಿನ ಸಮೀಪದ ಅರದೋಟ್ಲು ಬಳಿ ತನ್ನ ಭಾವನನ್ನು ರಸ್ತೆ ಅಪಘಾತದಲ್ಲಿ ಸಾಯಿಸಲು ಯತ್ನಿಸಿದ ಭಾವಮೈದುನನ್ನು ಪೊಲೀಸರು ಬಂಧಿಸಿದ್ದಾರೆ. ಭಾವಮೈದುನನ ವಿರುದ್ಧ 307 ಕೇಸ್ ದಾಖಲಾಗಿದೆ. ಆನವೇರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಂಗಪ್ಪ(53) ಎಂಬವರಿಗೆ 17 ವರ್ಷಗಳ ಹಿಂದೆ ತನ್ನ ಅಕ್ಕನ ಮಗಳಾದ ಭಾಗ್ಯರನ್ನು ಮದುವೆಯಾಗಿದ್ದು ಅವರು ಸಹ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಘಟನೆಯ ಹಿನ್ನಲೆ :  ಎರಡುವರೆ ವರ್ಷಗಳ ಹಿಂದೆ ಉಪನ್ಯಾಸಕರಿಗೆ ಮತ್ತು ಹೆಂಡತಿ…

Read More

ರಿಪ್ಪನ್‌ಪೇಟೆ : ಒಂದೇ ರಾತ್ರಿಯಲ್ಲಿ ಮೂರು ಕಡೆ ಲಕ್ಷಾಂತರ ರೂ ಮೌಲ್ಯದ ರಬ್ಬರ್ ಶೀಟ್ ಕಳ್ಳತನ|theft

ರಿಪ್ಪನ್‌ಪೇಟೆ : ಒಂದೇ ರಾತ್ರಿಯಲ್ಲಿ ಮೂರು ಕಡೆ ಲಕ್ಷಾಂತರ ರೂ ಮೌಲ್ಯದ ರಬ್ಬರ್ ಶೀಟ್ ಕಳ್ಳತನ ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ವಿವಿದೆಡೆ  ಒಣಗಲು ಹಾಕಿದ್ದ 4 ಕ್ವಿಂಟಲ್ ಗೂ ಅಧಿಕ  ರಬ್ಬರ್ ಶೀಟ್ ಗಳನ್ನು ಬುಧವಾರ ರಾತ್ರಿ ಕಳ್ಳರು ಅಪಹರಿಸಿದ್ದಾರೆ. ಬೆಳಂದೂರು ಗ್ರಾಮದ ಬಿ.ಟಿ. ಪ್ರಕಾಶ್ ಅವರ ಮನೆಯಲ್ಲಿ 160 ಕೆ.ಜಿ. ಹಾಗೂ  ಪುಟ್ಟಸ್ವಾಮಿಗೌಡ ಅವರ ಮನೆಯಲ್ಲಿ 150 ಕೆಜಿ  ಕೆ ಜಿ, ತಳಲೆ ಜಾರ್ಜ್ ಅವರ ಮನೆಯಲ್ಲಿ 50 ಕೆಜಿ,ಗವಟೂರು…

Read More

ಸಾಗರ : ಗಾಂಜಾ ಸಾಗಾಣಿಕೆ – ಓರ್ವನ ಬಂಧನ|arrested

ಸಾಗರ : ಗಾಂಜಾ ಸಾಗಾಣಿಕೆ – ಓರ್ವನ ಬಂಧನ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ವರದಹಳ್ಳಿ ಸರ್ಕಲ್‌ನ ಸೌಪರ್ಣಿಕ ಹೋಟೆಲ್ ಬಳಿ ಅಬಕಾರಿ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಆ.3 ರ ಗುರುವಾರ ವಶಕ್ಕೆ ಪಡೆದಿದ್ದಾರೆ. ರಾಮನಗರದ ಅಹ್ಮದ್ ಹುಸೇನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಗಸ್ತಿನಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಅಹ್ಮದ್ ಹುಸೇನ್ ನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿಯಿದ್ದ 53 ಗ್ರಾಂ.ಒಣ ಗಾಂಜಾ ಪತ್ತೆ ಮಾಡಲಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ…

Read More

ಧರ್ಮಸ್ಥಳದ ಹೆಗ್ಗಡೆಯವರ ತೇಜೋವಧೆ ಖಂಡನೀಯ – ಹೊಂಬುಜ ಶ್ರೀ|hombuja

  ಧರ್ಮಸ್ಥಳದ ಹೆಗ್ಗಡೆಯವರ ತೇಜೋವಧೆ ಖಂಡನೀಯ ಹೊಂಬುಜ : 2012ರಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವರು ಬಹಿರಂಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದ್ದಾರೆ. ಕಾನೂನಿನ ಮೂಲಕ ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿರುವ ಸಂತ್ರಸ್ಥರು ಕಾನೂನಿನ ಮೇಲೆ ನಂಬಿಕೆಯಿಟ್ಟು ತೀರ್ಮಾನ ಬರುವವರೆಗೆ ತಾಳ್ಮೆಯಿಂದ ಇರಬೇಕು. ಸಂತ್ರಸ್ಥರು ನ್ಯಾಯಾಂಗ ತನಿಖೆಗೆ…

Read More

ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬ ದೇವಾಲಯ ವಿರೂಪಗೊಳಿಸಿದ ದುಷ್ಕರ್ಮಿಗಳು|chandragutti temple

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯವನ್ನು ದುಷ್ಕರ್ಮಿಗಳು ವಿರೂಪ ಗೊಳಿಸಿದ್ದಾರೆ.  ದೇವಾಲಯದ ಬಾಗಿಲು ಒಡೆದು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಕಿಡಿಗೇಡಿಗಳು, ದೇವಾಲಯದ ಗರ್ಭಗುಡಿಯಲ್ಲಿ ಇರುವ ಮೂಲ ದೇವರ ಬೆಳ್ಳಿಯ ಹೊದಿಕೆಯನ್ನು ಹೊರ ಎಸೆದಿದ್ದಾರೆ. ಅಲ್ಲದೇ ದೇವಾಲಯದಲ್ಲಿರುವ ಹುಂಡಿ ಹಾಗೂ ಪೂಜಾ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ. ದೇವರ ಬೆಳ್ಳಿ ಮುಖವಾಡವನ್ನು ಗರ್ಭಗುಡಿಯಿಂದ ದೇವಸ್ಥಾನದ ಹೊರಗಡೆ ವರಂಡದಲ್ಲಿ ಎಸೆದಿದ್ದು, ಕಳ್ಳತನ ಮಾಡುವ ಉದ್ದೇಶ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.  ದೇವಸ್ಥಾನದ ಕೆಳಭಾಗದಲ್ಲಿರುವ…

Read More

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ|RMM

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ ತೀರ್ಥಹಳ್ಳಿ : ಶಾಸಕರಾಗಿ ಅಥವಾ ಸಚಿವರಾದ ನಂತರ ಸಂವಿಧಾನದ ವಿಧಿ ವಿಧಾನಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ. ಆದರೆ ಇವರು ಸಂವಿಧಾನದ ವಿರುದ್ಧವಾಗಿ ಮಾತನಾಡಿದ್ದಾರೆ. ಎಲ್ಲವನ್ನು ಗೃಹ ಸಚಿವರಾದ ನಂತರ ಪ್ರಾರಂಭ ಮಾಡಿದ್ದರು. ಗೃಹ ಸಚಿವರಾದ ಸ್ವಲ್ಪ ದಿನದಲ್ಲೇ ಮೈಸೂರಿನ ಮಹಿಳೆಯೊಬ್ಬರ ಬಗ್ಗೆ ಮಾತನಾಡಿದ್ದರು. ಈಗ ರಾಷ್ಟ್ರ ಕಂಡಂತಹ ಎತ್ತರದ ಮನುಷ್ಯನ ಬಗ್ಗೆ  ವೈಯಕ್ತಿಕವಾಗಿ ನಿಂದನೆ ಮಾಡಿದ್ದಾರೆ…

Read More

ಓವರ್ ಟೇಕ್ ಮಾಡುವಾಗ KSRTC ಬಸ್ ಗೆ ಖಾಸಗಿ ಬಸ್ ಡಿಕ್ಕಿ

ಓವರ್ ಟೇಕ್ ಮಾಡುವಾಗ KSRTC ಬಸ್ ಗೆ ಖಾಸಗಿ ಬಸ್ ಡಿಕ್ಕಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗಿಳಾಲಗುಂಡಿ ಸಮೀಪ ಖಾಸಗಿ ಬಸ್ಸೊಂದು ಕೆಎಸ್​ಆರ್​ಟಿಸಿ ಬಸ್​ಗೆ ಸೈಡ್​ನಿಂದ ಡಿಕ್ಕಿಹೊಡೆದ ಘಟನೆ ಸಂಭವಿಸಿದೆ.  ಸಾಗರ-ಶಿವಮೂಗ್ಗ ರೂಟ್​ನಲ್ಲಿ KSRTC  ಹಾಗೂ ಖಾಸಗಿ ಬಸ್​ ಸಂಚರಿಸುತ್ತಿತ್ತು. ಈ ವೇಳೆ ಸೀಟ್​ ಹಾಕುವ ವಿಚಾರಕ್ಕೆ ಖಾಸಗಿ ಬಸ್, ಕೆಎಸ್​ಆರ್​ಟಿಸಿ ಬಸ್​ನ್ನ ಓವರ್​ ಟೇಕ್​ ಮಾಡಲು ಮುಂದಾಗಿದ್ದು, ಈ ವೇಳೆ ಬಸ್​ನ ಹಿಂಬದಿ ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿಯಾಗಿದೆ.  ಒಂದೇ ರೂಟ್​ನಲ್ಲಿ, ಹೆಚ್ಚು ಕಮ್ಮಿ ಒಂದೇ…

Read More

ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ: ಕೋಳಿ ಸಮೇತ ಆರೋಪಿಗಳು ವಶಕ್ಕೆ!!!|arrested

ತೀರ್ಥಹಳ್ಳಿಯಲ್ಲಿ ಕೋಳಿ ಅಂಕದ ಆಟ ನಡೆಸ್ತಿದ್ದವರ ಮೇಲೆ ಪೊಲೀಸರ ದಾಳಿ ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಈಗ ಅನೇಕ ದಂಧೆ, ಅಕ್ರಮ ಚಟುವಟಿಕೆಗಳು ಶುರುವಾಗಿದೆ. ಒಂದು ಕಡೆ ಕಳ್ಳತನ, ಅತ್ಯಾಚಾರದಂತಹ ಚಟುವಟಿಕೆ ನಡುವೆ ಇದೀಗ ಕೋಳಿ ಪಡೆ, ಇಸ್ಪೀಟ್, ಆನ್ಲೈನ್ ಬೆಟ್ಟಿಂಗ್ ಹೆಚ್ಚಾಗಿದೆ. ಈಗಾಗಲೇ ಇದರಿಂದ ನೂರಾರು ಕುಟುಂಬಗಳು ಕಣ್ಣೀರು ಹಾಕುತ್ತಿವೆ.  ಈ ನಡುವೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸರು ಕೋಳಿ ಅಂಕ ನಡೆಸ್ತಿದ್ದವರ ಮೇಲೆ ದಾಳಿ ನಡೆಸಿದ್ದ ಹಲವರನ್ನ ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಬೈಲ್ ನಲ್ಲಿ ಕೋಳಿ…

Read More