ಓವರ್ ಟೇಕ್ ಮಾಡುವಾಗ KSRTC ಬಸ್ ಗೆ ಖಾಸಗಿ ಬಸ್ ಡಿಕ್ಕಿ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗಿಳಾಲಗುಂಡಿ ಸಮೀಪ ಖಾಸಗಿ ಬಸ್ಸೊಂದು ಕೆಎಸ್ಆರ್ಟಿಸಿ ಬಸ್ಗೆ ಸೈಡ್ನಿಂದ ಡಿಕ್ಕಿಹೊಡೆದ ಘಟನೆ ಸಂಭವಿಸಿದೆ.
ಸಾಗರ-ಶಿವಮೂಗ್ಗ ರೂಟ್ನಲ್ಲಿ KSRTC ಹಾಗೂ ಖಾಸಗಿ ಬಸ್ ಸಂಚರಿಸುತ್ತಿತ್ತು. ಈ ವೇಳೆ ಸೀಟ್ ಹಾಕುವ ವಿಚಾರಕ್ಕೆ ಖಾಸಗಿ ಬಸ್, ಕೆಎಸ್ಆರ್ಟಿಸಿ ಬಸ್ನ್ನ ಓವರ್ ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಬಸ್ನ ಹಿಂಬದಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿಯಾಗಿದೆ.
ಒಂದೇ ರೂಟ್ನಲ್ಲಿ, ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ, ಹಿಂದೆ ಮುಂದೆ ಬರುವ ಬಸ್ಗಳ ನಡುವೆ ಪ್ಯಾಸೆಂಜರ್ಗಳನ್ನು ಹತ್ತಿಸಿಕೊಳ್ಳುವುದಕ್ಕೆ ಬಸ್ಗಳ ನಡುವೆ ಸ್ಪರ್ಧೆ ಏರ್ಪಟ್ಟಿರುತ್ತದೆ. ಇವತ್ತು ಇದೇ ರೀತಿಯಲ್ಲಿ ಪ್ಯಾಸೆಂಜರ್ಗಳನ್ನು ತಮ್ಮ ಬಸ್ಗೆ ಹತ್ತಿಸಿಕೊಳ್ಳಬೇಕು ಎನ್ನುವ ಅವಸರದಲ್ಲಿ ಈ ಆಕ್ಸಿಡೆಂಟ್ ಸಂಭವಿಸಿದೆ.
. ಇನ್ನೂ ಘಟನೆಯಿಂದಾಗಿ ಎರಡು ಬಸ್ನಲ್ಲಿದ್ದ ಪ್ರಯಾಣಿಕರು ರಸ್ತೆಯಲ್ಲಿಯೇ ನಿಲ್ಲಬೇಕಾದ ಪ್ರಸಂಗ ಎದುರಾಗಿತ್ತು.