ಪತ್ರಕರ್ತ ಮುದಾಸಿರ್ ಅಹಮದ್ ಮೇಲೆ ದುಷ್ಕರ್ಮಿಗಳ ಹಲ್ಲೆಗೆ SJKPS ಮತ್ತು ಪ್ರೆಸ್ ಟ್ರಸ್ಟ್ ಖಂಡನೆ
ಪತ್ರಕರ್ತ ಮುದಾಸಿರ್ ಅಹಮದ್ ಮೇಲೆ ದುಷ್ಕರ್ಮಿಗಳ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಕೃತ್ಯವನ್ನು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸಿವೆ. ತಮ್ಮ ಮಗನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದ ಮುದಾಸಿರ್ ಪತ್ರಕರ್ತ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ. ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು. ಸಮಾಜ ಘಾತುಕ ಚಟುವಟಿಕೆಗಳ ಬಗ್ಗೆ ಸುದ್ದಿ ಮಾಡುತ್ತಿದ್ದ ಒಬ್ಬ ಪತ್ರಕರ್ತನ ಮೇಲಿನ ಹಲ್ಲೆಗೆ ಬೇರೆಯದೇ ಆಯಾಮ ಇರುವ ಅನುಮಾನ ಇದ್ದು,…