w
Headlines
Home » ಉರುಳಿಗೆ ಸಿಲುಕಿ ಚಿರತೆ ಸಾವು|leopard

ಉರುಳಿಗೆ ಸಿಲುಕಿ ಚಿರತೆ ಸಾವು|leopard

ಉರುಳಿಗೆ ಸಿಲುಕಿ ಚಿರತೆ ಸಾವು


ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಅಗರದಹಳ್ಳಿಯಲ್ಲಿ ನಡೆದಿದೆ. ಚಿರತೆ (Leopard) ಭದ್ರಾ ಅಭಯಾರಣ್ಯದ ವಲಯದಿಂದ ಹೊರಬಂದು ಅಗರದಹಳ್ಳಿಯ ಕಾಲುವೆ ಕೆಳಗೆ ಸೇರಿಕೊಂಡಿತ್ತು.

ಇದನ್ನು ಸೆರೆ ಹಿಡಿಯಲು ಭದ್ರಾ ಕಣಿವಮ್ಮ ದೇವಸ್ಥಾನದ ಬಳಿ ಕಳೆದ ಒಂದು ತಿಂಗಳಿಂದ ಬೋನು ಇಟ್ಟಿದ್ದರೂ ಚಿರತೆ(leopard) ಸೆರೆ ಸಿಕ್ಕಿರಲಿಲ್ಲ. ಆದರೆ ತಡರಾತ್ರಿ ಕಾಲುವೆಯಿಂದ ಅಡಿಕೆ ತೋಟಕ್ಕೆ ಹೋಗವಾಗ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದೆ. ಚಿರತೆಯ ಸಾವಿನ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ಇಲಾಖೆಯ ಉರುಳಲ್ಲ ಎಂದು ತಿಳಿದಿದೆ. ಅಲ್ಲದೇ ಮೃತಪಟ್ಟಿದ್ದು ಗಂಡು ಚಿರತೆ ಎಂದು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಸಂರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.