w
Headlines
Home » ಅಂತರ್ ಜಿಲ್ಲಾ ಬೈಕ್ ಕಳ್ಳರು ಪೊಲೀಸರ ಬಲೆಗೆ -11 ಬೈಕ್ ವಶಕ್ಕೆ|arrested

ಅಂತರ್ ಜಿಲ್ಲಾ ಬೈಕ್ ಕಳ್ಳರು ಪೊಲೀಸರ ಬಲೆಗೆ -11 ಬೈಕ್ ವಶಕ್ಕೆ|arrested

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪ ಪೊಲೀಸರು ಅಂತರ್ ಜಿಲ್ಲಾ ಬೈಕ ಕಳ್ಳರನ್ನು ಬಂಧಿಸಿದ್ದಾರೆ.
ಇತ್ತೀಚಿಗೆ ಶೇಖರಪ್ಪ ಎಂಬವರ ಬೈಕ್​ ಕಳ್ಳತನ ಪ್ರಕರಣವನ್ನು ಭೇದಿಸಿದ್ದಷ್ಟೆಅಲ್ಲದೆ ಈ ಸಂಬಂಧ 6 ಜಿಲ್ಲೆಗಳ ವಿವಿಧ ಸ್ಟೇಷನ್​ಗಳಲ್ಲಿ ವಾಂಟೆಡ್ ಆಗಿದ್ದ ಆರೋಪಿಗಳಿಬ್ಬರನ್ನ ಬಂಧಿಸಿದ್ಧಾರೆ. 




ಶಿರಾಳಕೊಪ್ಪ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಹೀರೋ ಸ್ಪೆಂಡರ್ ಪ್ರೋ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ರು. ಈ ಸಂಬಂಧ  379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣದ ಬೆನ್ನಟ್ಟಿದ್ ಶಿರಾಳಕೊಪ್ಪ ಪೊಲೀಸರು  ನಿನ್ನೆ ದಿನಾಂಕಃ 30-06-2023  ರಂದು  ಆರೋಪಿಗಳನ್ನ ಬಂಧಿಸಿದ್ದಾರೆ.

ರಫೀಕ್ ಸಾಬ್ ಸವಣೂರ @ ರಫೀಕ್, 28 ವರ್ಷ, ಮಾಸೂರು ಗ್ರಾಮ ಹಿರೇಕೆರೂರು ಹಾವೇರಿ ಜಿಲ್ಲೆ ,ಮಹಮ್ಮದ್ ಅಫ್ರಿದಿ @ ಅಫ್ರಿದಿ, 23 ವರ್ಷ,  ಮಾಸೂರು ಗ್ರಾಮ ಹಿರೇಕೆರೂರು ಹಾವೇರಿ ಜಿಲ್ಲೆ  ರನ್ನು ಬಂಧಿಸಿದ್ದಾರೆ.

ಈ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಆರು ಜಿಲ್ಲೆಗಳ ವಿವಿಧ ಸ್ಟೇಷನ್​ಗಳ ಕೇಸ್​ಗಳು ಬಗೆಹರಿದಿವೆ..  




ಶಿರಾಳಕೊಪ್ಪ ಪೊಲೀಸ್ ಠಾಣೆಯ 01, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ 01, ಆನವಟ್ಟಿ ಪೊಲೀಸ್ ಠಾಣೆಯ 01, ಹಿರೆಕೆರೂರು ಪೊಲೀಸ್ ಠಾಣೆಯ 01, ಹಾನಗಲ್ ಪೊಲೀಸ್ ಠಾಣೆಯ 01, ಕೋಟೆ ಪೊಲೀಸ್ ಠಾಣೆಯ 01, ಅಜ್ಜಂಫುರ ಪೊಲೀಸ್ ಠಾಣೆಯ 01, ಶಿರಸಿ ಟೌನ್ ಪೊಲೀಸ್ ಠಾಣೆಯ 01, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ 01, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ 01 ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ 01 ಪ್ರಕರಣ ಸೇರಿದಂತೆ ಒಟ್ಟು 11 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 3,96,000/- ರೂಗಳ 11 ಬೈಕ್ ಗಳನ್ನು ಪೊಲೀಸರು ಅಮಾನತ್ತು ಪಡಿಸಿಕೊಂಡಿದ್ಧಾರೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.