ರಿಪ್ಪನ್‌ಪೇಟೆ : ಬಾಳೂರು ತಿರುವಿನಲ್ಲಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಗಾಯಾಳುಗಳು ಮೆಗ್ಗಾನ್ ಗೆ ರವಾನೆ|accident
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮದ ಹರತಾಳು ತಿರುವಿನಲ್ಲಿ ನಡೆದಿದೆ. ರಿಪ್ಪನ್‌ಪೇಟೆಯಿಂದ ಗೇರುಬೀಸು ಕಡೆ ತೆರಳುತಿದ್ದ ಟಿವಿಎಸ್ ಸ್ಟಾರ್ ಸಿಟಿ ಬೈಕ್ ಹಾಗೂ ಬಾಳೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತಿದ್ದ ಬಜಾಜ್ ಡಿಸ್ಕವರ್ ಬೈಕ್ ನಡುವೆ ಬಾಳೂರು ತಿರುವಿನ ಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಗೇರುಬೀಸು ನಿವಾಸಿ ಮೋಹನ್(22) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಮತ್ತೊಂದು ಬೈಕ್ ನಲ್ಲಿದ್ದ ಶುಂಠಿ ಕೆಲಸಕ್ಕೆ…