ಶಿವಮೊಗ್ಗ ನಗರದ ಪಶು ವೈದ್ಯಕೀಯ ಕಾಲೇಜಿನ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
ಮೃತರನ್ನು ಗುರುರಾಜ್ ಎಂದು ಗುರುತಿಸಲಾಗಿದೆ.
ಶಿವಮೊಗ್ಗ ನಗರದ ಶುಭ ಮಂಗಳ ಕಲ್ಯಾಣ ಮಂದಿರದ ಎದುರಿನ ತಿರುವಿನ ನಿವಾಸಿಯಾಗಿದ್ದ ಗುರುರಾಜ್ ಎಪಿಎಂಸಿ ಯಾರ್ಡ್ ಗೆ ಹೋಗಿ ತರಕಾರಿ ತರುವುದಾಗಿ ಗುರುವಾರ ಬೆಳಗ್ಗಿನ ಜಾವ ಮನೆ ಬಿಟ್ಟು ಹೋಗಿದ್ದರು ಆದರೆ ಗುರುರಾಜ್ ನ ಮೃತ ದೇಹ ವೆಟನರಿ ಕಾಲೇಜು ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ.
ಗುರುರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.
ಎರಡು ಕಾರುಗಳನ್ನ ಇಟ್ಟುಕೊಂಡು ಟ್ರಾವೆಲ್ಸ್ ಆರಂಭಿಸಿದ್ದ ಗುರುರಾಜ್ ಆರಂಭದಲ್ಲಿ ಯಶಸ್ವಿಯಾಗಿದ್ದರು.ಆರಂಭದಲ್ಲಿ ಲಾಭದಲ್ಲಿದ್ದ ವ್ಯವಹಾರ ನಂತರದ ದಿನಗಳಲ್ಲಿ ಕೈಹತ್ತಲಿಲ್ಲ. ನಂತರ ಲೈಫ್ ಕೇರ್ ಆರಂಭಿಸಿದರು. ಇದು ಸಹ ಕೈಹತ್ತಲಿಲ್ಲ. ಈ ವೇಳೆ ಗುರುರಾಜ್ ಗೆ ಮೈತುಂಬ ಸಾಲವಾಗಿತ್ತು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಮೃತ ಗುರುರಾಜ್ ಪತ್ನಿ ಮತ್ತು ಇಬ್ವರು ಮಕ್ಕಳನ್ನು ಅಗಲಿದ್ದಾರೆ.
ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
