w
Headlines
Home » ಆಟೋಗೆ ಹಿಂಬದಿಯಿಂದ ಬೊಲೆರೋ ಜೀಪ್ ಡಿಕ್ಕಿ- ಐವರ ಕಾಲು ಮುರಿತ|ಆಸ್ಪತ್ರೆಗೆ ಸಂಸದ ಬಿವೈ ಆರ್ ದೌಡು|accident

ಆಟೋಗೆ ಹಿಂಬದಿಯಿಂದ ಬೊಲೆರೋ ಜೀಪ್ ಡಿಕ್ಕಿ- ಐವರ ಕಾಲು ಮುರಿತ|ಆಸ್ಪತ್ರೆಗೆ ಸಂಸದ ಬಿವೈ ಆರ್ ದೌಡು|accident

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಬಳಿ ಅಪಘಾತ ಒಂದು ಸಂಭವಿಸಿದ್ದು ಐದಕ್ಕೂ ಹೆಚ್ಚು ಜನರಿಗೆ ಕಾಲು ಮುರಿದಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಜಕ್ಕನಹಳ್ಳಿ ಗ್ರಾಮದ ಬಳಿ ಅಪೇ ಆಟೋ ಲಾಗೇಜು ಗಾಡಿಯಲ್ಲಿ ಕಾಲು ಮುಂದೆ ಮಾಡಿಕೊಂಡು ಒಂದಿಷ್ಟು ಜನರು ಪ್ರಯಾಣಿಸುತ್ತಿದ್ದು ಹಿಂಬಂದಿಯಿಂದ ಬಂದ ಬೊಲೆರೋ ಗಾಡಿ ಗುದಿದ್ದ ಪರಿಣಾಮ 5-6 ಜನರಿಗೆ ತೀವ್ರ ಗಾಯವಾಗಿದ್ದು ಕಾಲುಗಳು ಮುರಿದು ಹೋಗಿದೆ ಎನ್ನಲಾಗಿದೆ.

ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಜನರಿಗೆ ಗಾಯಗಳು ಆಗಿದ್ದು ಗಾಯಳುಗಳನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಗಾಯಳುಗಳ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ವಿಷಯ ತಿಳಿಯುತಿದ್ದಂತೆ ಸಂಸದ ಬಿ ವೈ ರಾಘವೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ಹೇಳಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರುಗಳಿಗೆ ಸೂಚಿಸಿದ್ದಾರೆ.

ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.