w
Headlines
Home » ರಿಪ್ಪನ್‌ಪೇಟೆಯ ಗಾನ ಕೋಗಿಲೆ ಕು|| ಪ್ರಣತಿ ಅಣ್ಣಪ್ಪ ರವರಿಗೆ ಶಾಸಕರಿಂದ ಸನ್ಮಾನ|pranathi

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಕು|| ಪ್ರಣತಿ ಅಣ್ಣಪ್ಪ ರವರಿಗೆ ಶಾಸಕರಿಂದ ಸನ್ಮಾನ|pranathi

ರಿಪ್ಪನ್‌ಪೇಟೆ : ಪಟ್ಟಣದ ಗಾನ ಕೋಗಿಲೆ ಕುಮಾರಿ ಪ್ರಣತಿ ಅಣ್ಣಪ್ಪ ರವರಿಗೆ ಇತ್ತೀಚೆಗೆ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.




ಚಿಕ್ಕವಯಸ್ಸಿನಲ್ಲೇ ಅದ್ಭುತ ಸಾಧನೆ ತೋರಿ ತನ್ನ ಕಂಠಸಿರಿಯಿಂದ ಗಾಯನ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಂಗೀತ ಲೋಕದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡು ನಾಡಿನಾದ್ಯಂತ ಗಾನ ಸುಧೆಯನ್ನು ಹರಿಸಿ ಸಂಗೀತ ಪ್ರಿಯರಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ ಯುವ ಪ್ರತಿಭೆ ರಿಪ್ಪನ್ ಪೇಟೆಯ ಪ್ರಣತಿ ಅಣ್ಣಪ್ಪ ರವರನ್ನು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ತಮ್ಮಡಿಕೊಪ್ಪದಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.

ನಮ್ಮೂರಿನ ಪ್ರತಿಭೆ ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಉತ್ತುಂಗಕ್ಕೆ ಏರಲಿ ಎಂದು ಈ ಸಂದರ್ಭದಲ್ಲಿ ಶಾಸಕರು ಶುಭ ಹಾರೈಸಿದರು. 




ರಿಪ್ಪನ್‌ಪೇಟೆ ಪಟ್ಟಣದ ಶ್ರೀ ಬಸವೇಶ್ವರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಪ್ರಣತಿ ಅಣ್ಣಪ್ಪ ರಿಪ್ಪನ್ ಪೇಟೆಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ಹಾಗೂ ಪ್ರವೀಣ್ ದಂಪತಿಗಳ ಪುತ್ರಿ ಯಾಗಿದ್ದಾರೆ. 

ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್ ,ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ,ಮುಖಂಡರಾದ ವೀರೇಶ್ ಆಲುವಳ್ಳಿ,ಎನ್ ಆರ್ ದೇವಾನಂದ್ ,ಸುಂದರೇಶ್ , ನಾಗರತ್ನ ದೇವರಾಜ್ ಹಾಗೂ ಇನ್ನಿತರರಿದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.