Headlines

ಚುನಾಯಿತ ಪ್ರತಿನಿಧಿಗೆ ಗ್ರಾಮೀಣ ಜನರ ಸಮಸ್ಯೆಯ ಅರಿವಿರಬೇಕು – ಹರತಾಳು ಹಾಲಪ್ಪ|Inauguration

ಚುನಾಯಿತ ಪ್ರತಿನಿಧಿಗೆ ಗ್ರಾಮೀಣ ಜನರ ಸಮಸ್ಯೆಯ ಅರಿವಿರಬೇಕು – ಹರತಾಳು ಹಾಲಪ್ಪ  ರಿಪ್ಪನ್‌ಪೇಟೆ : ಶಾಸಕರಾದವರಿಗೆ ಗ್ರಾಮೀಣ ಜನರ ಸಮಸ್ಯೆಯ ಅರಿವಿರಬೇಕು ಜೊತೆಯಲ್ಲಿ ಅಭಿವೃದ್ದಿಗಾಗಿ ಸರ್ಕಾರದ ಅನುದಾನವನ್ನು ತರುವ ಎದೆಗಾರಿಕೆ ಇರಬೇಕು ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆಯ ವ್ಯಾಪ್ತಿಯಲ್ಲಿ ಬರುವ ಸಾಗರ ತೀರ್ಥಹಳ್ಳಿ ಮಾರ್ಗದ ಅಂದಾಸುರ ಬಳಿಯಲ್ಲಿನ ಶಿಥಿಲಗೊಂಡ ಸಂಪರ್ಕ ಸೇತುವೆಗೆ 2.40 ಕೋಟಿ ವೆಚ್ಚದ ಸಂಪರ್ಕ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ…

Read More

ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು – ಬಿ ಜಿ ನಾಗರಾಜ್|congress

ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು – ಕಾಂಗ್ರೆಸ್ ಪಟಗುಪ್ಪೆಯಲ್ಲಿ ಶರಾವತಿ ಹಿನ್ನೀರು ಹಬ್ಬ ಆಚರಣೆಗೆ ಕಾಂಗ್ರೆಸ್ ಪಕ್ಷದ ವಿರೋಧ ಹೊಸನಗರ : ಶಾಸಕ ಎಚ್. ಹಾಲಪ್ಪ ಹರತಾಳು ಅಧ್ಯಕ್ಷತೆಯಲ್ಲಿ ಮಾ.೪ರಂದು ತಾಲೂಕಿನ ಪಟಗುಪ್ಪೆಯಲ್ಲಿ ಏರ್ಪಡಿಸಿರುವ ಶರಾವತಿ ಹಿನ್ನೀರು ಹಬ್ಬ ಎನ್ನುವ ಕರ‍್ಯಕ್ರಮದ ಆಯೋಜನೆಯು ಆಯೋಜಕರ ವಿಕೃತ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಆರೋಪಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶರಾವತಿ ಮುಳುಗಡೆ ಎನ್ನುವುದು ಈ…

Read More

ರಿಪ್ಪನ್‌ಪೇಟೆಯಲ್ಲಿ ಶಿವಾಜಿ ಜಯಂತಿ ಅಂಗವಾಗಿ ಮರಾಠ ಸಮಾಜದವರಿಂದ ಅದ್ದೂರಿ ಬೈಕ್ ರ‍್ಯಾಲಿ|shivaji jayanthi

ರಿಪ್ಪನ್‌ಪೇಟೆಯಲ್ಲಿ  ಮರಾಠ ಸಮಾಜದವರಿಂದ ಅದ್ದೂರಿ ಬೈಕ್ ರ‍್ಯಾಲಿ ರಿಪ್ಪನ್‌ಪೇಟೆ;- ಛತ್ರಪತಿ ಶಿವಾಜಿ 393 ನೇ ಜಯಂತೋತ್ಸವ  ಅಂಗವಾಗಿ  ರಿಪ್ಪನ್‌ಪೇಟೆ ಮರಾಠ ಸಮಾಜದವರು ಸಾಗರ ರಸ್ತೆಯಲ್ಲಿನ ಮರಾಠ ಸಮಾಜದ ಭವನದಿಂದ ಬೈಕ್ ರ‍್ಯಾಲಿ ನಡೆಸಿದರು. ಶಿವಮೊಗ್ಗ ರಸ್ತೆಯಿಂದ ವಿನಾಯಕ ವೃತ್ತ – ತೀರ್ಥಹಳ್ಳಿ ರಸ್ತೆ- ಹೊಸನಗರ ರಸ್ತೆ  ರಸ್ತೆಯ ಮೂಲಕ ಸಾಗರ ರಸ್ತೆಯಲ್ಲಿನ ಮರಾಠ ಸಮಾಜದವರೆಗೆ ಬೈಕ್ ರ‍್ಯಾಲಿ ನಡೆಸಿದರು. ಬೈಕ್ ರ‍್ಯಾಲಿಯಲ್ಲಿ ಛತ್ರಪತಿ ವೀರ ಶಿವಾಜಿಯ ಪರವಾದ ಘೋಷಣೆ ಕೂಗುತ್ತಾ ಭಗವಾಧ್ವಜವನ್ನು ಹಿಡಿದು ನೂರಾರು ಬೈಕ್‌ಗಳೊಂದಿಗೆ ರ‍್ಯಾಲಿ ನಡೆಸಿ…

Read More

ಜಂಬಳ್ಳಿ ತಿರುವಿನಲ್ಲಿ ಅಪಘಾತ – ಮಾನವೀಯತೆ ಮೆರೆದ ಆರಗ ಜ್ಞಾನೇಂದ್ರ|accident

ತೀರ್ಥಹಳ್ಳಿ : ಅಡ್ಡ ಬಂದ ಹಸುವನ್ನ ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದ್ದು ಗಾಯಗೊಂಡಿದ್ದ ಬೈಕ್ ಸವಾರನನ್ನು ಗೃಹ ಸಚಿವರ ಬೆಂಗಾವಲು ವಾಹನದಲ್ಲಿ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 169 ರ ಶಿವಮೊಗ್ಗ ಮತ್ತು ತೀರ್ಥಹಳ್ಳಿ ನಡುವಿನ  ತೂದುರು ಸಮೀಪದ ಜಂಬಳ್ಳಿ ತಿರುವಿನಲ್ಲಿ ಹಸುವೊಂದು ಅಡ್ಡ ಬಂದಿದ್ದರ ಪರಿಣಾಮ ಮಂಡಗದ್ದೆ ಸಮೀಪದ ಸಿಂಗನಬಿದರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳಗ ಗ್ರಾಮದ ಬೈಕ್ ಸವಾರ ಮನೋಜ್ ಹಸುವನ್ನು ತಪ್ಪಿಸಲು ಹೋಗಿ ಅಪಘಾತಕ್ಕಿಡಾಗಿದ್ದಾರೆ.  ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ …

Read More

ಕೊಲೆ ಮಾಡಿ ಶವವನ್ನು ಬೈಕಿನಲ್ಲಿ ಕೂರಿಸಿಕೊಂಡು ಬಂದು ಸರ್ಕಲ್ ನಲ್ಲಿ ಮಲಗಿಸಿ ಹೋದ ಆರೋಪಿಗಳು – ಅನೈತಿಕ ಸಂಬಂಧದ ಶಂಕೆ|crime news

ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯ ಶವವನ್ನು ಕೂರಿಸಿಕೊಂಡು ಬಂದು ಊರಿನ ಸರ್ಕಲ್ ನಲ್ಲಿ ಮಲಗಿಸಿ ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ಮುತ್ತಳ್ಳಿ ಗ್ರಾಮದಲ್ಲಿ ನಡೆದಿದೆ.ಇದು ಕೊಲೆ ಎಂದು ಕುಟುಂಬ ಆರೋಪಿಸಿದೆ. ಘಟನೆಯ ಹಿನ್ನಲೆ :  ಶಿರಾಳಕೊಪ್ಪ ಪೊಲೀಸ್ ಠಾಣೆಯ ಮುತ್ತಳ್ಳಿ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಸೋಮಪ್ಪ(30) ಈತನಿಗೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗಂಗಮ್ಮ ಎಂಬ ಮಹಿಳೆಯೊಂದಿಗೆ ಸ್ನೇಹವಿದ್ದು, ಆಕೆಯೇ ಕರೆಯಿಸಿ ಸೋಮಪ್ಪನನ್ನ ಕೊಲೆ ಮಾಡಿ ಕಳುಹಿಸಿರುವುದಾಗಿ ಮೃತನ‌ ಕುಟುಂಬ ಆರೋಪಿಸಿದೆ. ಸೋಮಪ್ಪ ಈ ಹಿಂದೆ ಕೆಲಸದ…

Read More

ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲರ ಮೆಚ್ಚುಗೆಗೆ ಬಿಜೆಪಿ ಪಾತ್ರವಾಗುತ್ತಿದೆ – ಗೃಹ ಸಚಿವ ಆರಗ ಜ್ಞಾನೇಂದ್ರ|BJP

ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲರ  ಮೆಚ್ಚುಗೆಗೆ ಬಿಜೆಪಿ ಪಾತ್ರ ಆಗುತ್ತಿದೆ – ಗೃಹಸಚಿವ ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಅತ್ಯಂತ ಸಂತೋಷದಾಯಕವಾದ ದಿನ, ನಮ್ಮ ಇಶಾನ್ಯ ರಾಜ್ಯಗಳಲ್ಲಿ ಮೂರು ರಾಜ್ಯದಲ್ಲಿ ಚುನಾವಣೆ ನೆಡೆದಿತ್ತು. ಇಂದು ಫಲಿತಾಂಶ ಹೊರ ಬಂದಿದೆ. ಮೂರರಲ್ಲಿ ಎರಡು ಸ್ಪಷ್ಟ ಬಹುಮತವನ್ನು ಪಡೆದು ತನ್ನ ರಾಜ್ಯಭಾರ ಮಾಡಲು ಸಜ್ಜಾಗಿದೆ. ಇನ್ನೊಂದು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಗುರುವಾರ ಕೊಪ್ಪ ಸರ್ಕಲ್ ನಲ್ಲಿ ಕಾರ್ಯಕರ್ತರ ಜೊತೆ ಸಂಭ್ರಮ…

Read More

ನಾಳೆ (03-03-2023) ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಛತ್ರಪತಿ ಶಿವಾಜಿ ಜಯಂತ್ಯೋತ್ಸವ

ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿರುವ ಮರಾಠಾ ಸಮಾಜದ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಮರಾಠ ಸಂಘ ಹಾಗೂ ಕ್ಷತ್ರಿಯ ಮರಾಠ ಯುವ ವೇದಿಕೆ ವತಿಯಿಂದ ನಾಳೆ 03/03/2023 ರಂದು ಸಂಜೆ 4.30 ಗಂಟೆಗೆ ಅದ್ದೂರಿಯಾಗಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ , ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ,ಮಾಜಿ…

Read More

ಆಗುಂಬೆ ಘಾಟಿಯಲ್ಲಿ ಖಾಸಗಿ ಬಸ್ ಬ್ರೇಕ್ ವಿಫಲ – ಮರಕ್ಕೆ ಡಿಕ್ಕಿ|ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ|accident

ಆಗುಂಬೆ : ಪ್ರವಾಸಿಗರನ್ನು ಕರೆದೊಯ್ಯುತಿದ್ದ ಖಾಸಗಿ ಬಸ್ ಆಗುಂಬೆ ಘಾಟಿಯ 12 ನೇ ತಿರುವಿನಲ್ಲಿ ಬ್ರೇಕ್ ವಿಫಲವಾಗಿ‌ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದೆ. ಘಾಟಿ ರಸ್ತೆಯ 11ನೇ ತಿರುವಿನಲ್ಲಿ ಖಾಸಗಿ ಮಿನಿ ಬಸ್ ಬ್ರೇಕ್ ವೈಫಲ್ಯಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ದೊಡ್ಡ ದುರಂತ ತಪ್ಪಿದೆ. 12ನೇ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಂತಿದೆ. ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ 20 ಜನರಿದ್ದು ಹಲವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು…

Read More

ಬೇಲಿ ಸವರುವಾಗ ಹೆಜ್ಜೇನು ದಾಳಿ – ಗಂಡ,ಹೆಂಡತಿಗೆ ಐಸಿಯು ನಲ್ಲಿ ಚಿಕಿತ್ಸೆ|honeybee

ಬೇಲಿ ಸವರುವ ವೇಳೆ ಹೆಜ್ಜೇನು ದಾಳಿ ಮಾಡಿದ ಹಿನ್ನಲೆಯಲ್ಲಿ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇ ಇಡಗೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೃಷ್ಣಪ್ಪ ಮತ್ತು ರೇಣುಕಮ್ಮ ದಂಪತಿ ಇವತ್ತು ಮನೆ ಹಿಂಭಾಗದಲ್ಲಿ ಬೇಲಿ ಸವರುತ್ತಿದ್ದರು. ಈ ವೇಳೆ ಹೆಜ್ಜೇನುಗಳು ದಾಳಿ ನಡೆಸಿವೆ. ಕೂಡಲೆ ಅವರನ್ನು ಆನವಟ್ಟಿ ಸಮುದಾಯ ಕೇಂದ್ರಕ್ಕೆ ದಾಖಲು ಮಾಡಲಾಯಿತು. ಇವತ್ತು ಬೆಳಗ್ಗೆ ಮತ್ತೆ ಹಿತ್ತಲ ಬಳಿಯಲ್ಲಿ ಬೇಲಿ…

Read More

ರಿಪ್ಪನ್‌ಪೇಟೆ : ಚಲಿಸುತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ – ಓರ್ವನ ಸ್ಥಿತಿ ಗಂಭೀರ,ಮೆಗ್ಗಾನ್ ಗೆ ದಾಖಲು|accident

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮೂಗೂಡ್ತಿ ಗ್ರಾಮದಲ್ಲಿ ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಮೂಗೂಡ್ತಿ – ತಳಲೆ ಮಾರ್ಗದಲ್ಲಿ ಬೈಕ್ ನಲ್ಲಿ ತೆರಳುತಿದ್ದ ಸುಳಗೋಡು ಗ್ರಾಮದ ನಿವಾಸಿ ಮಂಜುನಾಥ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ.ಬೈಕ್ ಸವಾರ ಕುಮಾರ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಳಲೆ ಮಾರ್ಗದ ಇಳಿಜಾರಿನಲ್ಲಿ ಚಲಿಸುತಿದ್ದ ಬೈಕ್ ಮೇಲೆ ಬೃಹತ್ ಮರ ಬಿದ್ದ ಹಿನ್ನಲೆಯಲ್ಲಿ ಬೈಕ್ ನಲ್ಲಿ ತೆರಳುತಿದ್ದ ಇಬ್ಬರು ಸಿಲುಕಿ ಕೊಂಡಿದ್ದಾರೆ ತಕ್ಷಣ ಸ್ಥಳೀಯರು ಹಾಗೂ…

Read More