Headlines

ಕುಕ್ಕರ್ ಬ್ಲಾಸ್ಟ್ ಪ್ರಕರಣ – ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ಶಾರೀಖ್ ಸ್ಥಳ ಮಹಜರು|crime news

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಖ್ ಸ್ಥಳ ಮಹಜರು ಮಾಡಲಾಗಿದೆ. ತೀರ್ಥಹಳ್ಳಿ ಹಾಗೂ ಶಿವಮೊಗ್ಗಕ್ಕೆ‌ ಸ್ಥಳ ಮಹಜರ್ ಗೆ ಎನ್ ಐಎ ಅಧಿಕಾರಿಗಳು ಕರೆತಂದಿದ್ದಾರೆ. ತೀರ್ಥಹಳ್ಳಿ ಸೊಪ್ಪುಗುಡ್ಡೆ ಮೂಲದ ಶಾರಿಕ್ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ.ಗುಣಮುಖನಾದ ಬಳಿಕ ಪ್ರಕರಣದ ವಿಚಾರಣೆಯನ್ನು ಎನ್‌ ಐಎ ತೀವ್ರಗೊಳಿಸಿದ್ದಾರೆ. ಮಂಗಳವಾರ ( ಮಾ. 8 ರಂದು) ಶಾರಿಕ್ ನನ್ನು ಶಿವಮೊಗ್ಗಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ‌…

Read More

ಶಿವಮೊಗ್ಗದ ಸುಲ್ತಾನ್ ಡೈಮಂಡ್ಸ್ ನಲ್ಲಿ ವಿಶ್ವ ವಜ್ರ ಪ್ರದರ್ಶನ|diamond show

ಶಿವಮೊಗ್ಗದ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಶೋರೂಂನಲ್ಲಿ ವಿಶ್ವ ವಜ್ರ ಪ್ರದರ್ಶನವನ್ನು ಎಚ್ ಬಿ ಟಿ ಅರೆಕಾನಟ್‌ನ ಮಾಲಕಿ ದಿವ್ಯಾ ಪ್ರೇಮ್ ಉದ್ಘಾಟಿಸಿದರು.  ಮಾ. 8 ರಿಂದ 18 ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಇಟಲಿ, ಫ್ರಾನ್ಸ್, ಅಮೆರಿಕ, ಬೆಲ್ಜಿಯಮ್, ಸಿಂಗಪೂರ್, ಟರ್ಕಿ ಮತ್ತು ಮಧ್ಯಪ್ರಾಚ್ಯ ದೇಶಗಳ ವಿವಿಧ ದೇಶಗಳ ವಜ್ರಾಭರಣಗಳನ್ನು ಅತಿಥಿಗಳು ಅನಾವರಣ ಗೊಳಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.  ಈ ಆಭರಣಗಳು 10   ಸಾವಿರ ಕ್ಯಾರೆಟ್ ಐಜಿಐ ಪ್ರಮಾಣೀಕೃತ ೪ಸಿ ಪರಿಪೂರ್ಣ ನೈಸರ್ಗಿಕ ವಜ್ರಾಭರಣಗಳಾಗಿವೆ. ಎಪಿಎಂಸಿ…

Read More

ಶಿವಮೊಗ್ಗದ ಗೋಪಿ ವೃತ್ತದಲ್ಲಿ ಹೋಳಿ ಸಂಭ್ರಮ – ಕುಣಿದು ಕುಪ್ಪಳಿಸಿದ ಯುವಕ ಯುವತಿಯರು | ರಿಪ್ಪನ್‌ಪೇಟೆ : ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಯುವಕರು|Holi

ಶಿವಮೊಗ್ಗ : ನಿರಂತರ ಹಾಡು, ಹಾಡಿಗೆತಕ್ಕಂತೆ ಸ್ಟೆಪ್ಸು ಹೀಗೆ ಶಿವಮೊಗ್ಗ ಗೋಪಿ ವೃತ್ತದ ಬಳಿ ಹೋಳಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಲಾಯಿತು. ಈ ಬಾರಿ ವಿನೂತನವಾಗಿ ಹೋಳಿ ಹಬ್ಬವನ್ನ‌ಆಚರಿಸಲಾಗಿದೆ. ಎರಡು ವರ್ಷಗಳಿಂದ ಕೊರೋನ ಹಿನ್ನಲೆಯಲ್ಲಿ ಈ ಹಬ್ಬಗಳು ಕಳೆಗುಂದಿದ್ದವು. ಆದರೆ ಈ ಬಾರಿ ಗೋಪಿ ವೃತ್ತದ ಬಳಿ ಡಿಜೆ ಹಾಡು ಎಂತಹವರನ್ನೂ ಹಬ್ವ ಆಚರಣೆಗೆ ಕೈಬೀಸಿ ಕರೆಯಲಿದೆ.  ಗೀತಾಂತಲೀ…., ಕಾಣದಂತೆ ಮಾಯವಾದನು ನಮ್ಮ ಶಿವ…, ನಮ್ಮೂರ ಜಾತ್ರೆಯಲ್ಲಿ ಮುಸ್ಸಂಜೆ ಹೊತ್ತಲ್ಲಿ, ಹೀಗೆ ನಿರಂತರ ಡಿಜೆ ಹಾಡುಗಳಿಗೆ ಯುವಕ ಯುವತಿಯರು…

Read More

ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ..!!ವೀಡಿಯೋ ವೈರಲ್|excise

ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ ! ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಸವಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ ನಡೆದಿರುವ ಘಟನೆ ನಡೆದಿದೆ. ಬಸವಾಪುರ ಗ್ರಾಮದ ಅಕ್ರಮ ಮದ್ಯ ಮಾರಾಟಗಾರನೊಬ್ಬನಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ ವೀಡಿಯೋ ವೈರಲ್ ಆಗಿದೆ. ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಗಂಡಂದಿರ ಕಾಟ ತಾಳಲಾರದೆ ಅಕ್ರಮ ಮದ್ಯ ಮಾರಾಟಗಾರನಿಗೆ ಪೊರಕೆ ಸೇವೆ ಮಾಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು…

Read More

ಆನಂದಪುರದ ಕೆರೆಯಲ್ಲಿ ಮಹಿಳೆಯ ಶವ ಪತ್ತೆ | ಹೊಸನಗರದಲ್ಲಿ ಹೆಜ್ಜೇನು ದಾಳಿ|CRIME NEWS

ಸಾಗರ :  ತಾಲೂಕಿನ ಆನಂದಪುರದ ಗಾಣಿಗನ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಆನಂದಪುರದ ಜೆಡಿಸರ ಹೋಗುವ ರಸ್ತೆಯ ಕೆರೆಯ ಬಳಿ ಇದೀಗ ಮಹಿಳೆಯ ಶವ ಪತ್ತೆಯಾಗಿದೆ.ಮೃತ ಮಹಿಳೆ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿದ್ದು ಕಳೆದ ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದರು. ಇದೀಗ ಗಾಣಿಗನ ಕೆರೆಯಲ್ಲಿ ಶವ ಪತ್ತೆಯಾಗಿದ್ದು ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೇನು ದಾಳಿ – ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ…

Read More

ರಿಪ್ಪನ್‌ಪೇಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ – ಹರತಾಳು ಹಾಲಪ್ಪ|Rpet

ರಿಪ್ಪನ್‌ಪೇಟೆ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಆ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು ನೀವು ಕೊಟ್ಟ ಅಧಿಕಾರದಿಂದ ಯಥೇಚ್ಛವಾಗಿ ಅನುದಾನ ತರಲು ಸಾಧ್ಯವಾಗಿದೆ ಎಂದು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸುಮಾರು 5.50 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅಭಿನಂದನೆ ಸ್ವೀಕರಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಾಗರ ರಸ್ತೆಯ ಕಾಲೇಜ್ ಬಳಿಯಿಂದ ತೀರ್ಥಹಳ್ಳಿ…

Read More

ಪಡುಬಿದ್ರೆಯಲ್ಲಿ ರಸ್ತೆ ಅಪಘಾತ – ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಅಕ್ಬರ್ ಬಾಷಾ ಮತ್ತು ಅವರ ಪತ್ನಿ ಸ್ಥಳದಲ್ಲೇ ಮೃತ್ಯು|accident

ತೀರ್ಥಹಳ್ಳಿ : ಮಂಗಳೂರು ಜಿಲ್ಲೆಯ ಮೂಲ್ಕಿ ಪಟ್ಟಣದ ಬಳಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎಲೆಕ್ಟ್ರಿಷಿಯನ್ ಅಕ್ಬರ್ ಭಾಷ ಹಾಗೂ ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಕೋಳಿಕಾಲು ಗುಡ್ಡೆ ನಿವಾಸಿ, ದಂಪತಿ ಅಕ್ಬರ್ ಪಾಶ(61) ಹಾಗೂ ಖತೀಜಾಬಿ(46) ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಮೂಲ್ಕಿ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಆಕ್ಟೀವ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದು,…

Read More

KSRTC ಬಸ್ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಶಿವಮೊಗ್ಗ : ವೇಗವಾಗಿ ಆಗಮಿಸಿದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಮೊಪೆಡ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಬುಳ್ಳಾಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬುಳ್ಳಾಪುರ ಗ್ರಾಮದ ನಿವಾಸಿಯಾದ ಕರಿಬಸಪ್ಪ (65) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರ ಪುತ್ರ ಬಸವರಾಜ್ (35) ಅವರಿಗೆ ಗಾಯವಾಗಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಅಜಾಗರೂಕತೆ, ಮಿತಿಮೀರಿದ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಈ ಸಂಬಂಧ ಬಸ್ ಚಾಲಕನ…

Read More

ಇಂದು ಶಾಸಕ ಹರತಾಳು ಹಾಲಪ್ಪರವರ 61ನೇ ಹುಟ್ಟುಹಬ್ಬ – ಶಾಸಕರ ಬಗ್ಗೆ ನಿಮಗೆಷ್ಟು ಗೊತ್ತು…?? ಈ ಸುದ್ದಿ ನೋಡಿ

ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ,ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಕಾರ್ಯನಿರ್ವಹಿಸುತ್ತಿರುವ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೋರಾಟ, ಜನಸೇವೆ ಮೂಲಕ ಇಡೀ ಕ್ಷೇತ್ರದ ಮನೆ ಮಾತಾಗಿರುವ ರಾಜಕಾರಣಿ.  ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರ ಗರಡಿಯಲ್ಲಿ ಬೆಳೆದು ರಾಜಕೀಯ ಪ್ರವೇಶಿಸಿ ಎದುರಾದ ಅನೇಕ ಕಷ್ಟಗಳನ್ನು ಎದುರಿಸಿ ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಜನಾನುರಾಗಿ. ನೇರ ನಡೆ-ನುಡಿಯ ವ್ಯಕ್ತಿತ್ವದ ಹರತಾಳು…

Read More

ರಿಪ್ಪನ್‌ಪೇಟೆ : ಅಪ್ರಾಪ್ತ ಯುವತಿಯ ಮೇಲೆ ಯುವಕನಿಂದ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು|POCSO

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲಿ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಬನಶೆಟ್ಟಿಕೊಪ್ಪ ಗ್ರಾಮದ ಮನೋಜ್ (22) ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ವಿವರ ಇಲ್ಲಿದೆ : ಸಂತ್ರಸ್ತ ಬಾಲಕಿಯ ತಂದೆ ತೀರಿಕೊಂಡಿದ್ದು ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಸದರಿಯವರ ತಂದೆ ತಾಯಿಗೆ 2 ಜನ ಮಕ್ಕಳಿದ್ದು ಹಿರಿಯವನು ಅಣ್ಣ ಡ್ರೈವಿಂಗ್ ಕೆಲಸ ಮಾಡಿಕೊಂಡಿರುತ್ತಾನೆ.ನೊಂದ ಬಾಲಕಿಯು ೨ ನೇ ತರಗತಿ ವರೆಗೆ ವಿದ್ಯಾಭ್ಯಾಸ…

Read More