ಬೇಲಿ ಸವರುವ ವೇಳೆ ಹೆಜ್ಜೇನು ದಾಳಿ ಮಾಡಿದ ಹಿನ್ನಲೆಯಲ್ಲಿ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇ ಇಡಗೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೃಷ್ಣಪ್ಪ ಮತ್ತು ರೇಣುಕಮ್ಮ ದಂಪತಿ ಇವತ್ತು ಮನೆ ಹಿಂಭಾಗದಲ್ಲಿ ಬೇಲಿ ಸವರುತ್ತಿದ್ದರು. ಈ ವೇಳೆ ಹೆಜ್ಜೇನುಗಳು ದಾಳಿ ನಡೆಸಿವೆ. ಕೂಡಲೆ ಅವರನ್ನು ಆನವಟ್ಟಿ ಸಮುದಾಯ ಕೇಂದ್ರಕ್ಕೆ ದಾಖಲು ಮಾಡಲಾಯಿತು.
ಇವತ್ತು ಬೆಳಗ್ಗೆ ಮತ್ತೆ ಹಿತ್ತಲ ಬಳಿಯಲ್ಲಿ ಬೇಲಿ ಸವರುತ್ತಿದ್ದ ವೇಳೆ ಹೆಜ್ಜೇನು ಎದ್ದು ದಾಳಿ ನಡೆಸಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತಕ್ಷಣವೇ ಆನವಟ್ಟಿ ಆಸ್ಪತ್ರೆ ಕರೆದೊಯ್ಯಲಾಗಿದೆ.
ಸರ್ಕಾರಿ ನೌಕರರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಲ್ಲಿನ ವೈದ್ಯರು, ತಕ್ಷಣವೇ ತುರ್ತುಚಿಕಿತ್ಸೆ ನೀಡಿ ಶಿಕಾರಿಪುರ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿಯು ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದ್ದಾರೆ.