w
Headlines
Home » ಹೆದ್ದಾರಿಪುರ ಗ್ರಾಪಂ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು|GP

ಹೆದ್ದಾರಿಪುರ ಗ್ರಾಪಂ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು|GP

ರಿಪ್ಪನ್‌ಪೇಟೆ : ಸದಸ್ಯರೊಬ್ಬರ ನಿಧನದ ಹಿನ್ನಲೆಯಲ್ಲಿ ಹೆದ್ದಾರಿಪುರ ಗ್ರಾಪಂನ ತಳಲೆ  ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೇಯಸ್ ಗೆಲುವು ಸಾಧಿಸಿದ್ದಾರೆ.




ಶ್ರೇಯಸ್  ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸುರೇಶ್ ಬೇಕರಿ ಅವರಿಂದ 87 ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿದ್ದಾರೆ.


ಚುನಾವಣೆಯಲ್ಲಿ ಒಟ್ಟು 594 ಮತದಾನವಾಗಿತ್ತು. ಈ ಪೈಕಿ ಶ್ರೇಯಸ್ ಅವರು 279 ಮತಗಳನ್ಮು ಪಡೆದುಕೊಂಡಿದ್ದಾರೆ. ಸುರೇಶ್ ಬೇಕರಿ ಅವರು 192 ಮತಗಳನ್ನು ಪಡೆದುಕೊಂಡಿದ್ದಾರೆ.ಕಾಂಗ್ರೆಸ್ ಬೆಂಬಲಿತ ಮಂಜಣ್ಣ 120 ಮತಗಳನ್ನು ಪಡೆದಿದ್ದಾರೆ‌. 3 ಮತಗಳು ಅಸಿಂಧುಗೊಂಡಿತ್ತು. 




ಮಂಗಳವಾರ ಹೊಸನಗರ ತಾಲೂಕು ಪಂಚಾಯತ್ ನಲ್ಲಿ ಮತ ಎಣಿಕೆ ಮಾಡಲಾಯಿತು. 

ಈ ವಾರ್ಡ್ ನ ಹಿಂದಿನ ಸದಸ್ಯರಾಗಿದ್ದ ಚೂಡಾಮಣಿ ಅವರ ನಿಧನದ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಸಲಾಗಿತ್ತು.




ಉಪಚುನಾವಣೆಯಲ್ಲಿ ಚೂಡಾಮಣಿ ರವರ ಪುತ್ರ ಶ್ರೇಯಸ್ 87 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.