POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಅಕ್ರಮ ಮರ ಕಡಿತಲೆ – ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ನಾಟ ಹಾಗೂ ವಿದ್ಯುತ್ ಚಾಲಿತ ಮರ ಕೊಯ್ಯುವ ಯಂತ್ರ ವಶಕ್ಕೆ|Teak

ಅಕ್ರಮವಾಗಿ ಸಾಗುವನಿ ಮರ ಕಡಿತಲೆ ಮಾಡುತಿದ್ದ ವೇಳೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಾಟ ಹಾಗೂ ವಿದ್ಯುತ್ ಚಾಲಿತ ಯಂತ್ರವನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಸಾಗರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದಿದೆ.




ಖಚಿತ ಮಾಹಿತಿಯನ್ನು ಆಧರಿಸಿ ಕಲ್ಮನೆ  ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಸಾಗುವಾನಿ ಮರವನ್ನು ಕಡಿದು ವಿದ್ಯುತ್ ಚಾಲಿತ ಯಂತ್ರದಿಂದ ಕೊಯ್ಯುತ್ತಿರುವಾಗ ದಾಳಿ ನಡೆಸಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಲಕ್ಷಾಂತರ ಬೆಲೆಯ ಸಾಗುವಾನಿ ಮರದ ತುಂಡು ಸೈಜು ಹಾಗು ಮರ ಕೊಯ್ಯುವ ಯಂತ್ರವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.




ಅಕ್ರಮ ನಾಟ ಹಾಗೂ ವಿದ್ಯುತ್ ಚಾಲಿತ ಮರ ಕೊಯ್ಯುವ ಯಂತ್ರವನ್ನು ಮುಂದಿನ ಕಾನೂನು ಕ್ರಮಕ್ಕೆ ವಲಯ ಅರಣ್ಯ ಅಧಿಕಾರಿ ಸಾಗರ ಇವರಿಗೆ ಹಸ್ತಾಂತರಿಸಿರುತ್ತಾರೆ. 

ದಾಳಿಯಲ್ಲಿ ಪಿಎಸ್ಐ ವಿನಾಯಕ. ಸಿಬ್ಬಂದಿಯವರಾದ  ಗಿರೀಶ, ಕೃಷ್ಣ ವಿಶ್ವನಾಥ್, ಗಣೇಶ್, ದಿನೇಶ ಇದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.