ಗರ್ತಿಕೆರೆ ಬಳಿ ಭೀಕರ ಅಪಘಾತ – ಮೀನು ವ್ಯಾಪಾರಿ ಸ್ಥಳದಲ್ಲೇ ಸಾವು|accident
ರಿಪ್ಪನ್‌ಪೇಟೆ : ಗರ್ತಿಕೆರೆ ಕಾಲೇಜು ಸಮೀಪದಲ್ಲಿ ಬೆಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ತಿಕೆರೆ ನಿವಾಸಿ ಮೀನು ವ್ಯಾಪಾರಿ ಕಬೀರ್ ಸಾಬ್ (72) ಎಂಬುವವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಎಕ್ಸ್ಎಲ್ ಸೂಪರ್ ಬೈಕ್ ನಲ್ಲಿ ಹೊರಟು ನಿಂತಿದ್ದ ಕಬೀರ್ ಸಾಬ್ ಎಂಬುವವರಿಗೆ ಹಿಂಬದಿಯಿಂದ ವೇಗವಾಗಿ ಬಂದ ಬೊಲೆರೋ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಅಪಘಾತದಲ್ಲಿ ಬೊಲೆರೋ ವಾಹನ ಸಹ ಪಲ್ಟಿಯಾಗಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ….