ಸಾಲಭಾದೆಗೆ ತತ್ತರಿಸಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ|sucide
ಸಾಲಭಾದೆಗೆ ಹೆದರಿ ಶಿವಮೊಗ್ಗ ದ ಮಿಳಘಟ್ಟದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಂದಯ್ಯ(70), ದಾನಮ್ಮ (60)ಮತ್ತು ಮಂಜುನಾಥ್(25) ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಮಿಳಘಟ್ಟ ಮೊದಲನೇ ತಿರುವಿನಲ್ಲಿ ಪರಂದಯ್ಯ, ದಾನಮ್ಮ, ಮಂಜುನಾಥ್ ನಿನ್ನೆ ಸಾಲಕ್ಕೆ ಬೆದರಿ ವಿಷ ಸೇವಿಸಿದ್ದರು. ವೃದ್ಧರಿಬ್ಬರೂ ನಿನ್ನೆನೇ ಸಾವನ್ನಪ್ಪಿದರು. ಶಿವಮೊಗ್ಗದ ಆನಂದರಾವ್ ಬಡಾವಣೆ ಹತ್ತಿರದ ಮಿಳಗಟ್ಟ ಕೆರೆಅಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪರಂದಯ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ದಾನಮ್ಮ ಕಲ್ಲೂರು ಮಂಡ್ಲಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತಿದ್ದರು. ಅವರಿಗೆ ಮಕ್ಕಳಿರಲಿಲ್ಲ…