ರಿಪ್ಪನ್‌ಪೇಟೆ : ಚಲಿಸುತಿದ್ದ ಟಾಟಾ ಏಸ್ ವಾಹನದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು|accident

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕಣಬಂದೂರು ಶಾಲೆಯ ಬಳಿ ಟಾಟಾ ಏಸ್ ವಾಹನದಲ್ಲಿ ಹಿಂಬದಿ ಕುಳಿತಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.




ಕಣಬಂದೂರು ಗ್ರಾಮದ ರಾಘವೇಂದ್ರ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.

ಟಾಟಾ ಏಸ್(tata ace) ವಾಹನದಲ್ಲಿ  ತೋಟಕ್ಕೆ ದರಗಲು ತರುತ್ತಿರುವಾಗ ಕಣಬಂದೂರು ಶಾಲೆಯ(school) ಸಮೀಪದಲ್ಲಿ ಹಿಂಬದಿ ಕುಳಿತಿದ್ದ ರಾಘವೇಂದ್ರ ಆಯ ತಪ್ಪಿ ಕೆಳಗಿನ ಸಿಮೆಂಟ್ ರಸ್ತೆಯ ಮೇಲೆ ಬಿದ್ದು ತೀವ್ರತರವಾಗಿ ಗಾಯಗೊಂಡಿದ್ದನು.




ಕೂಡಲೇ ಸ್ಥಳೀಯರು ಹಾಗೂ ಸಂಬಂಧಿಕರು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ(hospital) ದಾಖಲಿಸಿದ್ದಾರೆ ಆದರೆ ಅಷ್ಟರಲ್ಲೇ ರಾಘವೇಂದ್ರ ಮೃತಪಟ್ಟಿದ್ದಾನೆ.

ಟಾಟಾ ಏಸ್ ವಾಹನ ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವೇ ಈ ಘಟನೆಗೆ ಕಾರಣ ಎಂದು ರಾಘವೇಂದ್ರ ಸಂಬಂಧಿಕರು ದೂರು ದಾಖಲಿಸಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ,ಪ್ರಕರಣ ದಾಖಲಾಗಿದೆ.



Leave a Reply

Your email address will not be published. Required fields are marked *