Headlines

ಚಾಲಕನ ಜೊತೆ ಮಕ್ಕಳನ್ನು ಕರೆದುಕೊಂಡು ಮಹಿಳೆ ಪರಾರಿ : ಮಕ್ಕಳನ್ನು ಹುಡುಕಿಕೊಡುವಂತೆ ಪತಿಯಿಂದ ಕಣ್ಣೀರು|missing

ಪತಿಯನ್ನು ಬಿಟ್ಟು ತಾನು ಕೆಲಸ ನಿರ್ವಹಿಸುತಿದ್ದ ಸಂಸ್ಥೆಯ ಚಾಲಕನೊಂದಿಗೆ ಗೃಹಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಘಟನೆಯಿಂದ ನೊಂದು ಪತಿ ಕಣ್ಣೀರು ಹಾಕುತ್ತಿದ್ದಾರೆ.  ಶಿಕಾರಿಪುರ ತಾಲೂಕಿನ ಪುಣೇದಹಳ್ಳೀ ಗ್ರಾಮದಲ್ಲಿ ಪರಶುರಾಮ್ ಮತ್ತು ಶಾರದಾ ದಂಪತಿ ವಾಸವಾಗಿದ್ದರು. ಕಳೆದ 13 ವರ್ಷದ ಹಿಂದೆ  ಮದುವೆಯಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದು ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಮಕ್ಕಳ ದಾಖಲಾತಿಗಳನ್ನು ತೆಗೆದುಕೊಂಡು ಶಾಲೆಗೆ ಹೋಗಿದ್ದ ಮಹಿಳೆ ಅಲ್ಲಿಂದ…

Read More

ಖಾಸಗಿ ಆಸ್ಪತ್ರೆಯ ವೈದ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ|sucide

ಶಿವಮೊಗ್ಗ ನಗರದ ಪ್ರಸಿದ್ಧ ಖಾಸಗಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ಲೋಲಿತ್ (40) ನೇಣು ಬಿಗಿದ ಸ್ಥಿತಿಯಲ್ಲಿ ತಮ್ಮ ಕೊಠಡಿಯಲ್ಲಿ ಪತ್ತೆಯಾಗಿದ್ದಾರೆ. ಗೋಪಾಳದಲ್ಲಿರುವ ಅವರ ನಿವಾಸದಲ್ಲಿ ಲೋಲಿತ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಅವರ ಸಾವಿಗೆ ಅನಾರೋಗ್ಯದ ಕಾರಣ ತಿಳಿದು ಬಂದಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ವೈದ್ಯರು ಬಳಲುತ್ತಿದ್ದರು ಎನ್ನಲಾಗುತಿದ್ದು ಪೊಲೀಸರ ತನಿಖೆಯ ನಂತರ ಕಾರಣ ತಿಳಿದುಬರಬೇಕಾಗಿದೆ. ತುಂಗನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Read More

ಬೀದಿನಾಯಿಗಳ ದಾಳಿಗೆ ಬಲಿಯಾದ 4 ವರ್ಷದ ಬಾಲಕ – ಮನೆಯಂಗಳದಲ್ಲಿ ಆಟವಾಡುತಿದ್ದಾಗ ಬಾಲಕನ ತಲೆ ಸೀಳಿ ಮೆದುಳು ತಿಂದ ನಾಯಿಗಳು|attack

  ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದಡಮಘಟ್ಟ ಗ್ರಾಮದಲ್ಲಿ ನಡೆದಿದೆ.  ಸೈಯದ್ ಮದನಿ(4) ನಾಯಿಗಳ ದಾಳಿಗೆ ಬಲಿಯಾದ ಬಾಲಕ. ಬಾಲಕ ಸೈಯದ್ ಮದನಿಯು ಸಂಜೆ ನಾಲ್ಕು ಗಂಟೆಗೆ ಮನೆಯಿಂದ ಹೊರಗೆ ಆಟವಾಡಲು ಬಂದಾಗ ಏಕಾಏಕಿ ಹತ್ತಾರು ನಾಯಿಗಳು ಒಂದೇ ಸಮನೆ ದಾಳಿ ನಡೆಸಿವೆ. ದಾಳಿಗೆ ಬೆದರಿದ ಮದನಿ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ಎಲ್ಲ ನಾಯಿಗಳು ಆತನನ್ನು ಕಚ್ಚಿ ಹಾಕಿದೆ. ಅಲ್ಲದೇ, ರಸ್ತೆ ತುಂಬೆಲ್ಲಾ…

Read More

ಬಟ್ಟೆಮಲ್ಲಪ್ಪದಲ್ಲಿ ನೂತನವಾಗಿ ಅನಾವರಣಗೊಂಡಿದ್ದ ಎಸ್ ಬಂಗಾರಪ್ಪರವರ ನಾಮಫಲಕವನ್ನು ರಾತ್ರೋರಾತ್ರಿ ಕಿತ್ತು ಹಾಕಿದ ಕಿಡಿಗೇಡಿಗಳು – ಆಮ್ ಆದ್ಮಿ ಪಕ್ಷದಿಂದ ಆಕ್ರೋಶ|Bangarappa

ನಾಡುಕಂಡ  ದಿಟ್ಟ ನೇರ  ನಡೆ  ನುಡಿ ವ್ಯಕ್ತಿತ್ವದ  ಧೀಮಂತ್  ರಾಜಕಾರಣಿ ರಾಜ್ಯದ  ಮಾಜಿ  ಮುಖ್ಯ ಮಂತ್ರಿ ಎಸ್. ಬಂಗಾರಪ್ಪ  ರವರ ಹೆಸರನ್ನು ಬಟ್ಟೆ ಮಲ್ಲಪ್ಪ ಸರ್ಕಲ್ ಗೆ ಆಮ್ ಆದ್ಮಿ ಪಕ್ಷ ಹಾಗೂ ಕೆಲ ಸಂಘಟನೆಗಳ  ವತಿಯಿಂದ ಕಳೆದ 6 ದಿನಗಳ ಹಿಂದೆ ನಾಮಕರಣ  ಮಾಡಲಾಗಿತ್ತು. ಹಾಗೆಯೇ  ನಾಮ ಫಲಕವನ್ನು ಅಳವಡಿಸಲಾಗಿತ್ತು. ಇದನ್ನು ಸಹಿಸದ ಕೆಲ ದುಷ್ಕರ್ಮಿಗಳು ನಾಮ ಫಲಕವನ್ನು ಕಿತ್ತೊಗೆದಿದ್ದಾರೆ ಎಂದು ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ…

Read More

ಕೆಂಚನಾಲ : ಬಸ್ ಅಡ್ಡಗಟ್ಟಿ ವಿದ್ಯಾರ್ಥಿಯ ಮೇಲೆ ನಾಲ್ವರು ಯುವಕರಿಂದ ಹಲ್ಲೆ – ದೂರು ದಾಖಲು|assault

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಕೆದಲುಗುಡ್ಡೆ ಗ್ರಾಮದಲ್ಲಿ ಚಲುಸುತಿದ್ದ ಬಸ್ ನ್ನು ಅಡ್ಡ ಹಾಕಿ ನಾಲ್ವರು ಯುವಕರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪಟ್ಟಣದ ಸರ್ಕಾರಿ ಪ್ರೌಡ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಗಾಳಿಬೈಲ್ ಗ್ರಾಮದ ನಿವಾಸಿ ರಿಫಾಯತ್(17) ಇಂದು ಸಂಜೆ ವಿಶೇಷ ತರಗತಿ ಮುಗಿಸಿಕೊಂಡು‌ ತನ್ನ ಊರಾದ ಕೆಂಚನಾಲಕ್ಕೆ ಬಸ್ ನಲ್ಲಿ ಹಿಂದಿರುತಿದ್ದಾಗ ನಾಲ್ಕು ಜನ ಯುವಕರು ಬೈಕ್ ನಲ್ಲಿ ಹಿಂಬಾಲಿಸಿ ಕೆದಲುಗುಡ್ಡೆ ಗ್ರಾಮದ ಬಳಿ ಬಸ್…

Read More

ಹೊಸನಗರದಲ್ಲಿ ಭೀಕರ ಅಪಘಾತ : ಮಗಳನ್ನು ಕಾಲೇಜಿಗೆ ಅಡ್ಮಿಶನ್ ಮಾಡಿ ಹಿಂದಿರುಗುತಿದ್ದ ವ್ಯಕ್ತಿಯ ದಾರುಣ ಸಾವು|Accident

ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಮಧ್ಯಾಹ್ನ ಟಿಪ್ಪರ್ ಲಾರಿ ಹಾಗೂ ಟಿವಿಎಸ್ ಎಕ್ಸೆಲ್ ನಡುವೆ ಭೀಕರ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮುಂಬಾರು ಸಮೀಪದ ಸಾವಂತೂರು ನಿವಾಸಿ ಅಣ್ಣಪ್ಪ (43) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಕೊಡಚಾದ್ರಿ ಕಾಲೇಜಿನ ಮುಂಭಾಗದಲ್ಲಿ ಅಣ್ಣಪ್ಪ ತಮ್ಮ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಸಾಗುತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ಅಣ್ಣಪ್ಪ ರವರು ಕೊಡಚಾದ್ರಿ ಸರ್ಕಾರಿ ಪ್ರಥಮ…

Read More

ಸಾಗರ ನಗರಸಭೆ ಅಧಿಕಾರಿಗಳ ಗೂಂಡಾವರ್ತನೆ – ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದ ಅಧಿಕಾರಿಗಳು|Sagara

ಸಾಗರ : ನಗರಸಭೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಬಳಿ ಬೀದಿ ಬದಿಯಲ್ಲಿ ಹೊಟ್ಟೆಪಾಡಿಗೆ ಹಣ್ಣು ವ್ಯಾಪಾರ ಮಾಡುವವರನ್ನು ನಗರಸಭೆ ಅಧಿಕಾರಿಗಳು ಬೀದಿಗೆ ತಳ್ಳಿದ್ದಾರೆ.ರಾತ್ರೋರಾತ್ರಿ ಕಳ್ಳರ ಹಾಗೆ ಬಂದು ಅಂಗಡಿಗಳನ್ನು ತೆರವುಗೊಳಿಸಿ ಬಡವರ ಮೇಲೆ ತಮ್ಮ ಶೂರತನ ಮೆರೆದಿದ್ದಾರೆ. ಸಾಲ ಮಾಡಿ ತಂದು ನಾಲ್ಕಾಣೆ ಲಾಭಕ್ಕೆ ಮಾರಾಟ ಮಾಡಿ ತನ್ನ ಹಾಗೂ ಕುಟುಂಬದ ಹೊಟ್ಟೆಪಾಡಿಗಾಗಿ ತಂದಿದ್ದ ಹಣ್ಣುಗಳನ್ನು ರಸ್ತೆಯ ತುಂಬ ಚೆಲ್ಲಾಡಿ ರಾಕ್ಷಸರಂತೆ ವರ್ತಿಸಿದ್ದಾರೆ. ಸಾಗರ ನಗರ ವ್ಯಾಪ್ತಿಯಲ್ಲಿ ಬಹುತೇಕ ಬಡವರು,ಅವಿದ್ಯಾವಂತರು ದೊಡ್ಡ ದೊಡ್ಡ ಮಳಿಗೆಯನ್ನು ಬಾಡಿಗೆ ಪಡೆದು…

Read More

ರಿಪ್ಪನ್‌ಪೇಟೆ : 24 ಗಂಟೆಯೊಳಗೆ ಸರ್ಕಾರಿ ವೈದ್ಯರ ವರ್ಗಾವಣೆಗೊಳಿಸುವಂತೆ ಗ್ರಾಮಸ್ಥರ ಒಕ್ಕೊರಲ ಆಗ್ರಹ|Ripponpet

ರಿಪ್ಪನ್‌ಪೇಟೆ : ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ವೈದರಿಲ್ಲದೇ ರೋಗಿಗಳು ಹಾಗೂ ಆಕಸ್ಮಿಕ ಅಪಘಾತಕ್ಕೀಡಾದವರು ಪರಿತಪಿಸುವಂತಾಗಿದ್ದು ಕೂಡಲೇ ನಾಲ್ವರು ವೈದ್ಯಾಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು. ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಕುವೆಂಪು ಸಭಾ ಭವನದಲ್ಲಿ 2022-23 ನೇ ಸಾಲಿನ ಗ್ರಾಮ ಸಭೆಯಲ್ಲಿ ಹೆಸರಿಗೆ ನಾಲ್ವರು ವೈದ್ಯಾಧಿಕಾರಿಗಳಿದ್ದರೂ ಕೂಡಾ ರಾತ್ರಿ ವೇಳೆ ಅರೋಗ್ಯ ಕಾರ್ಯಕರ್ತೆಯೇ ವೈದ್ಯರಾಗಿ ಹೆರಿಗೆ ಮಾಡಿಸುವುದು ಮತ್ತು ತುರ್ತು ಚಿಕಿತ್ಸೆ ನೀಡುವಂತಾಗಿದೆ ಹಾಗಾದರೆ ನಮ್ಮೂರಿಗೆ ಇಂತಹ ಬೇಜವಾಬ್ದಾರಿ ವೈದ್ಯಾಧಿಕಾರಿಗಳು ಏಕೆ…

Read More

ಕಾಗೋಡು ತಿಮ್ಮಪ್ಪ ಹೆಂಡ ಮತ್ತು ಸಿಗರೇಟ್ ಮಾರುತ್ತಾರೆ ಎಂದ ಹರತಾಳು ಹಾಲಪ್ಪ : ಶಾಸಕರ ವಿರುದ್ದ ಕಾಂಗ್ರೆಸ್ ಕಿಡಿಕಿಡಿ- ಪ್ರತಿಭಟನೆಯ ಎಚ್ಚರಿಕೆ|Sagara

ಸಾಗರ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಶಾಸಕ ಹಾಲಪ್ಪ ಹರತಾಳು ಸರ್ಕಾರಿ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಶಾಸಕರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದೆ ಹೋದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ನಗರ ಯೋಜನಾ ಪ್ರಾಧಿಕಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಲಪ್ಪ, ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಸಚಿವ ಕಾಗೋಡು…

Read More

ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ ತೀರ್ಥಹಳ್ಳಿಯ ರೌಡಿ ಶೀಟರ್ ಕೋಬ್ರಾ ಸುಹೈಲ್ – ಸ್ಥಿತಿ ಗಂಭೀರ|Thirthahalli

ತೀರ್ಥಹಳ್ಳಿ : ಗಡಿಪಾರು ಆದೇಶದ ಕಾರಣ ಕೇಳಿ ನೋಟೀಸ್ ನೀಡುತ್ತಿದ್ದಂತೆ ರೌಡಿ ಶೀಟರ್ ಕೋಬ್ರಾ ಸುಹೇಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಒಂದು ವಾರದ ಹಿಂದೆ ತೀರ್ಥಹಳ್ಳಿ  ಪೊಲೀಸರು  ರೌಡಿಶೀಟರ್ ಕೋಬ್ರಾ ಸುಹೇಲ್ ನಿಗೆ ಗೆರಡು ವರ್ಷ ಗಳ ಕಾಲ ಗಡಿಫಾರು ಯಾಕೆ ಮಾಡಬಾರದು ಎಂದು ಕಾರಣಕೇಳಿ ನೋಟೀಸ್ ಜಾರಿ ಮಾಡಿದ್ದರು. ಪೊಲೀಸ್ ನೋಟೀಸ್ ತಲುಪಿ ಎರಡು ದಿನಕ್ಕೆ ಆತ ಆತ್ಮಹತ್ಯೆಗೆ ಯತ್ನಿಸಿ ಈಗ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಾಗಿದ್ದಾನೆ. ಇಂದಿರಾ ನಗರ ನಿವಾಸಿ…

Read More