ಐತಿಹಾಸಿಕ ಕಲ್ಯಾಣೇಶ್ವರ ದೇವಾಲಯದ ನೂತನ ಶಿಲಾಮಯ ಹಾಗೂ ಪುನರ್ ಪ್ರತಿಷ್ಠಾಪನೆಗೆ ಕ್ಷಣಗಣನೆ! ಭಕ್ತರ ಮದುವೆಯ ಶುಭ ಕಾರ್ಯದ ಬೇಡಿಕೆಯು ಬಹುಬೇಗನೆ ಪೂರೈಸುವ ಶ್ರೀ ಕಲ್ಯಾಣೇಶ್ವರ
ಹೊಸನಗರ :ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸಮೀಪ ವಾರಂಬಳ್ಳಿ ಯ ಸರಿಸುಮಾರು ಎಂಟು, ಮತ್ತು ಹತ್ತನೇ ಶತಮಾನದ ಐತಿಹಾಸಿಕ ಸುಪ್ರಸಿದ್ಧ ಶಿವನ ಆಲಯ ಕಲ್ಯಾಣಿ ಶ್ವರ ದೇವಸ್ಥಾನದ ಸಪರಿವಾರ ಕಲ್ಯಾಣಿಶ್ವರನ ಶಿಲಾಮಯ ಹಾಗೂ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು. ಫೆಬ್ರವರಿ 2ರಂದು ಪುನರ್ ಪ್ರತಿಷ್ಠಾಪನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ಮರುದಿನ ಬ್ರಹ್ಮಕಲಶೋತ್ಸವ ಹಾಗೂ ಪೂರ್ಣಾಹುತಿಯನ್ನು ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳಿಂದ ನೆರವೇರಲಿದೆ. ದೇವಾಲಯದ ಐತಿಹಾಸಿಕ ಹಿನ್ನೆಲೆ : ದೇವಸ್ಥಾನದ ಐತಿಹಾಸಿಕ…