POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ : ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್ ಅಭಿಮಾನಿ ಬಳಗದ ನೂತನ ಅಧ್ಯಕ್ಷರಾಗಿ ಮೆಣಸೆ ಆನಂದ್ ಆಯ್ಕೆ |Ripponpet

ರಿಪ್ಪನ್ ಪೇಟೆ : ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್‍ಕುಮಾರ್  ಆಭಿಮಾನಿ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಇಂದು ನಡೆಯಿತು.

ಪಟ್ಟಣದಲ್ಲಿ ಇಂದು ಗ್ರಾಮ ಪಂಚಾಯತ್ ನ ಕುವೆಂಪು ಸಭಾಂಗಣದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ಸರ್ವ ಸದಸ್ಯರ ಸಭೆಯನ್ನು ಕರೆದು ನೂತನ ಪದಾದಿಕಾರಿಗಳ ಆಯ್ಕೆ ನಡೆಸಲಾಯಿತು.

ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ನೂತನ ಅಧ್ಯಕ್ಷರಾಗಿ ಆನಂದ್ ಮೆಣಸೆ , ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಫ಼್ಯಾನ್ಸಿ ಮತ್ತು ಹಸನಬ್ಬ ಗೌರವಾಧ್ಯಕ್ಷರಾಗಿ ಅರ್ ಎ ಚಾಬುಸಾಬ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಂಎಂ ಪರಮೇಶ್, ವರದರಾಜ್ ಜಿ ಎಸ್ , ಯೋಗೆಂದ್ರಪ್ಪ ಗೌಡ , ಧನಲಕ್ಷ್ಮಿ ಗಂಗಾಧರ್ ,ರವೀಂದ್ರ ಕೆರೆಹಳ್ಳಿ ,ಗಣಪತಿ ಗವಟೂರು ,ಚಂದ್ರೇಶ್ ,ವರ್ತೇಶ್ ,ಈಶ್ವರಪ್ಪಗೌಡ ಸಾಜೀದಾ ಹನೀಪ್ ಮತ್ತು ಶೀಲಾ ಆರ್ ಡಿ ರವರು ಆಯ್ಕೆಯಾಗಿದ್ದಾರೆ. 

ಸಂಘಟನಾ ಕಾರ್ಯದರ್ಶಿಗಳಾಗಿ ಚಿಗುರು ಶ್ರೀಧರ್, ಆಸೀಫ಼್ ಭಾಷಾ ಸಾಬ್ , ಪಿಯೂಸ್ ರೊಡ್ರಿಗಸ್,ಮಲ್ಲಿಕಾರ್ಜುನ್ ,ನಿರ್ಮಲ ಹರೀಶ್ ,ಸೀಮಾ ಭಾಸ್ಕರ ಶೆಟ್ಟಿ ಮತ್ತು ಖಜಾಂಚಿಯಾಗಿ ಉಲ್ಲಾಸ್ ಆಯ್ಕೆಯಾಗಿದ್ದಾರೆ.

ಸಹ ಕಾರ್ಯದರ್ಶಿಯಾಗಿ ಮಳವಳ್ಳಿ ಮಂಜು, ವಿನಾಯಕ್ ಶೆಟ್ಟಿ ,ನವೀನ್ ,ದಾನೇಶ್ , ಅರುಣ್ ಆಯ್ಕೆಯಾಗಿದ್ದಾರೆ.

ಈ ಸಭೆಯಲ್ಲಿ ನವೆಂಬರ್ 1 ರಂದೇ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.

ನಂತರ ಮಾತನಾಡಿದ ನೂತನ ಅಧ್ಯಕ್ಷರಾದ ಆನಂದ್ ಮೆಣಸೆ ನವೆಂಬರ್ 1 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಎಲ್ಲಾ ಕನ್ನಡ ಪ್ರೇಮಿಗಳು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.