w
Headlines
Home » ವಾಲಿಬಾಲ್ : ವಿಭಾಗ ಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು |volleyball

ವಾಲಿಬಾಲ್ : ವಿಭಾಗ ಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು |volleyball

ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಪೈನಲ್ ಪಂದ್ಯಾವಳಿಯಲ್ಲಿ ಗಾಜನೂರು ತಂಡವನ್ನು ಮಣಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಈ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳಾದ ಪ್ರೀತಮ್ , ಸಾತ್ವಿಕ್
ಸುಧನ್ವ , ಅಮಾನ್ ,ಗಗನ್‌ , ಗಣೇಶ ,ನವೀನ್ ,ಮಿಥುನ್ , ಶಶಾಂಕ್,ಕುಮಾರ್ ಜೆ ,ಪ್ರಜ್ವಲ್ ,ವರುಣ ,ಅಂಕುಶ ,ಪ್ರೀತಮ್ ಬಿ ಆರ್ ಇವರು ಅಮೋಘ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಮತ್ತು ದೈಹಿಕ ಶಿಕ್ಷಕಿ ಶೈಲಾ ಮತ್ತು ತರಬೇತುದಾರರಾದ ಉಮೇಶ್ ಹೆಚ್ ಎನ್ ,ಭೀಮರಾಜ್ ರವರಿಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಮಂಜಪ್ಪ ಮತ್ತು ಸದಸ್ಯರು ಹಾಗೂ ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದನೆಗಳನ್ನು‌ ಸಲ್ಲಿಸಿದ್ದಾರೆ.



ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಮಲೆನಾಡಿನ ಕುವರಿ ಮೋನಿಕಾ ಎನ್ ಶೆಟ್ಟಿ

ರಿಪ್ಪನ್‌ಪೇಟೆ : ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆ – ಕಳೆದ ವರ್ಷ ನಾಪತ್ತೆಯಾಗಿದ್ದ ಮಹಿಳೆ ಎಂಬ ಶಂಕೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.