POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರದ ಖ್ಯಾತ ವೈದ್ಯರು ಹಾಗೂ ಮಾಜಿ ಪುರಸಭಾ ಅಧ್ಯಕ್ಷರಾದ ಡಾ. ನಾಗರಾಜ ಚಡಗ ನಿಧನ

ಹೊಸನಗರದ ಖ್ಯಾತ ವೈದ್ಯರು ಮಾಜಿ ಪುರಸಭಾ ಅಧ್ಯಕ್ಷರಾದ ಡಾ. ನಾಗರಾಜ ಚಡಗ (83) ವಯೋಸಹಜದಿಂದ ನಿಧನರಾಗಿದ್ದಾರೆ.


ಪಟ್ಟಣದ ಶಿವಪ್ಪನಾಯಕ ರಸ್ತೆಯ ವೈದ್ಯ ಫ್ಯಾಮಿಲಿ ಎಂದೇ ಗುರುತಿಸಿಕೊಂಡಿದ್ದ ಡಾಕ್ಟರ್ ಚಡಗ ಕುಟುಂಬದ ನಾಗರಾಜ ಚಡಗ ಅವರು ಇಂದು ಸಂಜೆ 5.30 ರ ವೇಳೆಗೆ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ಪುತ್ರ ಅಪಾರ ಬಂಧು-ಬಳಗ ಬಿಟ್ಟು ಅಗಲಿದ್ದಾರೆ.

ಡಾಕ್ಟರ್ ನಾಗರಾಜ ಚಡಗ ರವರು 1986 ರಿಂದ 1990 ರವರೆಗೆ ಹೊಸನಗರ ಪುರಸಭೆ ಅಧ್ಯಕ್ಷರಾಗಿ ಹಾಗೂ ಪರಿವರ್ತಿತ ಮಂಡಲ ಪ್ರಧಾನರಾಗಿ ಉತ್ತಮ ಸೇವೆ ಸಲ್ಲಿಸಿದ್ದರು.ಅವರ ತಂದೆ ವೆಂಕಟರಮಣ ಚಡಗ ರವರು ಪಟ್ಟಣದಲ್ಲಿ ವೈದ್ಯ ವೃತ್ತಿ ಪ್ರಾರಂಭಿಸಿ ಜನಾನುರಾಗಿಯಾಗಿದ್ದರು.ಡಾಕ್ಟರ್ ನಾಗರಾಜ ಚಡಗ ರವರ ಏಕೈಕ ಪುತ್ರ ರಾಜೇಶ ಚಡಗ ಅವರು ಸಹ ಈಗ ಪಟ್ಟಣದಲ್ಲಿ ವೈದ್ಯವೃತ್ತಿ ಮಾಡುತ್ತಿದ್ದಾರೆ.

ಜನಾನುರಾಗಿಯಾಗಿದ್ದ ಡಾಕ್ಟರ್ ಚಡಗ ಅವರ ನಿಧನದ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಜನ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದರು.

ಸಂತಾಪ :: 

ಡಾ ನಾಗರಾಜ ಚಡಗ ರವರ ನಿಧನಕ್ಕೆ ತಾಲೂಕು ಬ್ರಾಹ್ಮಣ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿದೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.