ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ಹೊಸನಗರ ಉಪ ವಿಭಾಗದ ರಿಪ್ಪನ್ ಪೇಟೆ ಶಾಖೆಯಲ್ಲಿ ತುರ್ತು ನಿರ್ವಹಣೆ ಇರುವುದರಿಂದ ನಾಳೆ (20-07-2022) ವಿದ್ಯುತ್ ವ್ಯತ್ಯಯವಿರುತ್ತದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ. ರಿಪ್ಪನ್‌ಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಾದ ಕೆಂಚನಾಲ,ಬೆಳ್ಳೂರು,ಗರ್ತಿಕೆರೆ,ಅರಸಾಳು,ಕೋಡೂರು ಮತ್ತು ಚಿಕ್ಕ ಜೇನಿ ಗ್ರಾಮಗಳಲ್ಲಿ ನಾಳೆ ಬೆಳಿಗ್ಗೆ  9-30 ರಿಂದ ಸಂಜೆ 6 ರವರೆಗೆ  ವಿದ್ಯುತ್ ವ್ಯತ್ಯಯ ಇರುತ್ತದೆ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಧ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಮರು ತನಿಖೆ ನಡೆಸುವಂತೆ ಆಗ್ರಹ

ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಧ್ಯಾರ್ಥಿನಿಯೊಬ್ಬರ ಮೇಲೆ ಹಿರಿಯ ವೈದ್ಯರೊಬ್ಬರಿಂದ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮುಚ್ಚಿಹಾಕಲಾಗಿದ್ದು, ಈ ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡು ಪೀಪಲ್ಸ್ ಲಾಯರ್ ಗಿಲ್ಡ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕಳೆದ ಶುಕ್ರವಾರ ಅಂದರೆ ದಿನಾಂಕ:15-07-2022 ರಂದು ಸಿಮ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಹಿರಿಯ ಶಸ್ತ್ರ ಚಿಕಿತ್ಸೆ ವೈದ್ಯರಾದ ಆಶ್ವಿನ್ ಹೆಬ್ಬಾರ್, ಎಂಬುವರಿಂದ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಉತ್ತರಭಾರತೀಯ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಸಿಮ್ಸ್  ನಿರ್ದೇಶಕರಿಗೆ ಲಿಖಿತ ದೂರನ್ನು…

Read More

ರೌಡಿಶೀಟರ್ ಹಂದಿ ಅಣ್ಣಿ ಯ ಬರ್ಬರ ಹತ್ಯೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಎದುರು ಶರಣಾಗತಿ :

ಶಿವಮೊಗ್ಗದ ವಿನೋಬ ನಗರದಲ್ಲಿ ಹಾಡುಹಗಲೇ ರೌಡಿಶೀಟರ್ ಹಂದಿ ಅಣ್ಣಿ ಯ ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಚಿಕ್ಕಮಗಳೂರಿನ ಎಸ್ ಪಿ ಎದುರಲ್ಲಿ ಶರಣಾಗಿದ್ದಾರೆ. 8 ಜನ ಆರೋಪಿಗಳು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮುಂದೆ ಶರಣಾಗಿರುವುದಾಗಿ ತಿಳಿದು ಬಂದಿದೆ.ತಡರಾತ್ರಿ 8 ಜನ ಆರೋಪಿಗಳು ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಬಂದು ಶರಣಾಗಿರುವುದಾಗಿ ತಿಳಿದು ಬಂದಿದೆ. ಎಸ್ಪಿ ಮುಂದೆ 8 ಜನರು ಆರೋಪಿಗಳು ಹಂದಿ ಅಣ್ಣಿಯನ್ನ ಕೊಲೆ ಮಾಡಿದವರು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ…

Read More

ತೀರ್ಥಹಳ್ಳಿ ತಾಲ್ಲೂಕಿನ ದರಲಗೋಡು “ನೆಸ್ಟ್ ಹೋಂ ಸ್ಟೇ” ಮೇಲೆ ದಾಳಿ : 9 ಜನರ ವಿರುದ್ಧ ಎಫ್ಐಆರ್‌ ದಾಖಲು !

ತೀರ್ಥಹಳ್ಳಿ : ತಾಲೂಕಿನ ದರಲಗೋಡಿನಲ್ಲಿರುವ  ನೆಸ್ಟ್ ಹೋಮ್ ಸ್ಟೇ‌ಯಲ್ಲಿ ಜೂಜಾಡುತ್ತಿದ್ದವರ ಮೇಲೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ‌ಯಲ್ಲಿ 9 ಜನರಿದ್ದು ಅವರ ಮೊಬೈಲ್ ಮತ್ತು ಇಸ್ಪೀಟ್ ಆಟಕ್ಕೆ ಪಣವಾಗಿಟ್ಟಿದ್ದ 30,270 ರೂ. ಹಣವನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ.  ದರಲಗೋಡಿನ ನೆಸ್ಟ್ ಹೋಮ್ ಸ್ಟೇಯಲ್ಲಿ ಇಸ್ಪೀಟ್ ಆಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮ ಅವರ ನೇತೃತ್ವದಲ್ಲಿ ಭಾನುವಾರ ಸಂಜೆ ದಾಳಿ ನಡೆಸಲಾಗಿದೆ. ಪರವಾನಗಿ ಇಲ್ಲದೆ ಇಸ್ಪೀಟ್ ಆಟವಾಡಲು ಅವಕಾಶ ಮಾಡಿಕೊಟ್ಟ ಕಾರಣ…

Read More

ರಿಪ್ಪನ್ ಪೇಟೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ಪ್ರಮೀಳಾ ಲಕ್ಷ್ಮಣಗೌಡ ಪದವಿ ಸ್ವೀಕಾರ

ರಿಪ್ಪನ್‌ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಜೀವನ ಸಾಗಿಸುತ್ತಿರುವ ಇಂದಿನ ನಾಗರಿಕರಿಗೆ  ಮಾನಸಿಕ ನೆಮ್ಮದಿ ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಮಾನವ ಸಮಾಜ ಸೇವೆಯಲ್ಲಿ ಪಡೆದುಕೊಂಡಾಗ ಮಾತ್ರ ನೆಮ್ಮದಿಯನ್ನು ಕಾಣಬಹುದು ಎಂದು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ರೊಟೇರಿಯನ್ ಎಚ್ ಎಲ್ ರವಿ ಹೇಳಿದರು. ಪಟ್ಟಣದ ಸಾಗರ ರಸ್ತೆಯಲ್ಲಿನ ವಿಶ್ವಮಾನವ ಸಮುದಾಯಭವನದಲ್ಲಿ ಅಯೋಜಿಸಲಾಗಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ  ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆ ಜಗತ್ತಿನಲ್ಲಿ…

Read More

ಬಡವರ ಕಣ್ಣೀರು ತಾಲೂಕ್ ಆಡಳಿತಕ್ಕೆ ಕಾಣಿಸುತ್ತಿಲ್ಲವೇ .???? : ಆರ್ ಎಂ ಮಂಜುನಾಥ್ ಗೌಡ

ತೀರ್ಥಹಳ್ಳಿ : ತಾಲೂಕಿನ ತಹಶೀಲ್ದಾರರು ಬಿಬಿಎಂಪಿ ಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದವರು ಈಗ ಹಳ್ಳಿಗೆ ಬಂದಿದ್ದಾರೆ, ಮಳೆಗಾಲದಲ್ಲಿ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಅರಿವು ಅವರಿಗೆ ಹೆಚ್ಚು ತಿಳಿದಂತೆ ಇಲ್ಲ.ಕೊನೆ ಪಕ್ಷ ಬೇರೆಯವರ ಬಳಿ ಕೇಳಿ ತಿಳಿದುಕೊಂಡು ಬಡವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ತಾಲೂಕು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ಬೆಟ್ಟಮಕ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ…

Read More

ತೋಟದ ಕೆಲಸಕ್ಕೆ ಹೋದ ರೈತ ಮಹಿಳೆ ಹಳ್ಳಕ್ಕೆ ಬಿದ್ದು ಸಾವು : ತಡರಾತ್ರಿ ಮೃತದೇಹ ಪತ್ತೆ

ತೋಟದ ಕೆಲಸಕ್ಕೆ ಹೋದ ರೈತ ಮಹಿಳೆಯೊಬ್ಬರು ಹಳ್ಳದಲ್ಲಿ ಕೊಚ್ಚಿಹೋಗಿರುವ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ಮೃತ ದುರ್ಧೈವಿಯನ್ನು ಭವಾನಿ ಶಂಕರ್ ನಾರಾಯಣ(52) ಎಂದು ಗುರುತಿಸಲಾಗಿದೆ. ಸುಳುಗೋಡು ಗ್ರಾಮದ ಬಾಳೆಹಿತ್ತಲು ಹಳ್ಳದಲ್ಲಿ ಭವಾನಿ ರವರು ಎಂದಿನಂತೆ ಬೆಳಿಗ್ಗೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾರೆ ಆದರೆ ಸಂಜೆಯವರೆಗೂ ಮನೆಗೆ ಬಾರದಿದ್ದಾಗ ಕುಟುಂಬದವರು ಇವರನ್ನು ಹುಡುಕಲು ಪ್ರಾರಂಭಿಸಿದ್ದು  ಎಷ್ಟೇ ಹುಡುಕಿದರೂ ಇವರ ಸುಳಿವು ಸಿಗಲಿಲ್ಲ.ತಡರಾತ್ರಿಯವರೆಗೂ ಹುಡುಕಿದಾಗ ರಾತ್ರಿ ಹನ್ನೊಂದರ ಸಮಯಕ್ಕೆ ಹಳ್ಳದಲ್ಲಿ ಇವರ ಮೃತದೇಹ…

Read More

ರಾಜ್ಯ ಗೃಹ ಮಂತ್ರಿಗಳ ಕ್ಷೇತ್ರ ಕರಡಿಗ-ಬೆಳಕೋಡು ಗ್ರಾಮದಲ್ಲಿ ಹೊಳೆದಾಟುವ ಹರಸಾಹಸಾದಲ್ಲಿ ಶಾಲಾ-ಕಾಲೇಜು ಮಕ್ಕಳು,ಗ್ರಾಮಸ್ಥರು : ಸಾರ್ವಜನಿಕರ ಗೋಳು ಕೇಳುವವರು ಯಾರು…..!?

ರಿಪ್ಪನ್‌ಪೇಟೆ;- ರಾಜ್ಯದ ಗೃಹ ಮಂತ್ರಿಗಳು ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಆರಗ ಜ್ಞಾನೇಂದ್ರ ರವರ ಕ್ಷೇತ್ರದ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬೆಳಕೋಡು-ಕರಡಿಗ ಗ್ರಾಮದ ಸಂಪರ್ಕವೂ ಮೃತ್ಯುವಿನ ಜೊತೆಗೆ ಸರಸವಾಡಿದಂತಾಗಿದ್ದು ಪ್ರತಿನಿತ್ಯ ನೂರಾರು ಜನ ಇಲ್ಲಿನ ಅಸುರಕ್ಷಿತ ಕಾಲಸಂಕ ಬಳಸಿ ತಮ್ಮ ದೈನಂದಿನ ಕಾರ್ಯಚಟುವಟಿಕೆಗಾಗಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಪ್ರತಿವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿಬಳಸಿ ದೂರದ ಪ್ರಯಾಣದಿಂದ ಜನರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಪೇಟೆ…

Read More

ರಿಪ್ಪನ್ ಪೇಟೆಯಲ್ಲಿ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಕಾರ್ಯಗಾರ : ಆಧುನಿಕ ಸಮಾಜದಲ್ಲಿ ಎಲ್ಲಕ್ಕಿಂತಲೂ ಮಿಗಿಲಾದದ್ದು ಶಿಕ್ಷಣ : ಎಸ್ ಎಲ್ ಭೋಜೇಗೌಡ

ರಿಪ್ಪನ್ ಪೇಟೆ : ಆಧುನಿಕ ಸಮಾಜದಲ್ಲಿ ಎಲ್ಲಕ್ಕಿಂತ ಮಿಗಿಲಾದುದು ಶಿಕ್ಷಣ ಮತ್ತು ಆರೋಗ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಹೇಳಿದರು. ಪಟ್ಟಣದ ಆಶ್ರೀತಾ ಸಭಾಭವನದಲ್ಲಿ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕಾರ್ಯಾಗಾಗಾರ  ಹಾಗೂ ನಿವೃತ್ತ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ  ಅಭಿನಂದನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸರಕಾರಿ ಕಾಲೇಜುಗಳ ಹಾಗೂ ಶಾಲೆಗಳ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಇಡೀ ರಾಜ್ಯದಲ್ಲಿ ಎಲ್ಲಾ ಸರಕಾರಿ ಶಾಲಾ ಕಾಲೇಜುಗಳು  ಮೂಲ ಸೌಕರ್ಯಗಳಿಲ್ಲದೆ…

Read More

ಅಮ್ಮನ ಜೊತೆಗೆ ಹಂದಿ ಅಣ್ಣಿಯ ಕೊನೆಯ ಸ್ಟೆಪ್ ಜೋಗಿ ಚಿತ್ರದ ನೆನಪನ್ನು ಮರುಕಳಿಸುವಂತಿದೆ…!!!.ವೀಡಿಯೋ ವೈರಲ್…..

ಜಗತ್ತಿನಲ್ಲಿ ಹುಟ್ಟುವ ಮೊದಲೇ ನಮ್ಮನ್ನು ಪ್ರೀತಿಸುವ ಯಾವುದಾದರೂ ಜೀವವೊಂದಿದ್ದರೆ ಅದು ಅಮ್ಮ ಮಾತ್ರ. ನವಮಾಸ ಹೊತ್ತು ತನ್ನ ರಕ್ತವನ್ನೆ ಬಸಿದು ತನಗಾದ ನೋವನ್ನು ನುಂಗಿ ಜಗತ್ತಿನ ಅಷ್ಟು ಸುಖವು ಸಿಕ್ಕ ಕ್ಷಣವೆಂದು ಸಂತೋಷದೊಂದಿಗೆ ಮಗುವಿಗೆ ಜನ್ಮ ನೀಡುತ್ತಾಳೆ ಅಮ್ಮ. ಇವಳಿಗಿಂತ   ಪ್ರತ್ಯಕ್ಷವಾದ ದೇವರು ಬೇರೆ ಇರಲು ಸಾಧ್ಯವೆ? ಅಮ್ಮನ ವಾತ್ಸಲ್ಯ , ಮಮತೆ ಅಪಾರವಾದದ್ದು . ಅಮ್ಮ ತನ್ನೆಲ್ಲಾ ಕಷ್ಟ – ನೋವುಗಳನ್ನು ಒಡಲಲ್ಲೆ ಅವಿತಿಟ್ಟುಕೊಂಡು ತನ್ನ ಮಕ್ಕಳ ನಗುವಿನಲ್ಲಿ  ಮರೆಯುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ಹಗಲಿರುಳು…

Read More