ವರದಕ್ಷಿಣೆ ಕಿರುಕುಳ : ನಾಲ್ಕು ವರ್ಷದ ಕಂದಮ್ಮನೊಂದಿಗೆ ನೇಣಿಗೆ ಶರಣಾದ ತಾಯಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ತಾಯಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ನಯನಾ (27) ಹಾಗೂ ಗುರು (4) ಆತ್ಮಹತ್ಯೆಗೆ ಶರಣಾಗಿರುವ ದುರ್ಧೈವಿಗಳು. ಸುಮಾರು 5 ವರ್ಷಗಳ ಹಿಂದೆ ಕುಂಬತ್ತಿ ಗ್ರಾಮದ ನಯನಾ ಹಾಗೂ ಕಪ್ಪಗಳಲೆ ಗ್ರಾಮದ ಶರತ್ ಪ್ರೀತಿಸಿ ವಿವಾಹವಾಗಿದ್ದರು.  ಮಗಳು ನಯನ(27) ಮತ್ತು ಮೊಮ್ಮಗ ಗುರು(04) ಸಾವಿಗೆ ಗಂಡ ಶರತ್, ಮಾವ ಹಾಲೇಶ್ ಹಾಗೂ ಅತ್ತೆ ಸೀತಮ್ಮ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ನಾಗರಾಜ್ ಸಲ್ಲಿಸಿರುವ…

Read More

ಆಯನೂರು ಬಳಿ KSRTC ಬಸ್ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ :

 ಕೆಎಸ್ ಆರ್ ಟಿಸಿ ಬಸ್ಸು ಹಾಗೂ ಮಾರುತಿ ಓಮಿನಿ  ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ  ಚೋರಡಿ ಸಮೀಪದ ಹೆಗ್ಗೇರೆಯಲ್ಲಿ ನಡೆದಿದೆ.  ಈ ಅಪಘಾತದಲ್ಲಿ ಮಾರುತಿ ಓಮಿನಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು,ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಶಿವಮೊಗ್ಗದಿಂದ ಸಾಗರದ ಕಡೆಗೆ ತೆರಳುತಿದ್ದ ಕೆಎಸ್ ಆರ್ ಟಿಸಿ ಬಸ್ ಹಾಗೂ  ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮಾರುತಿ ಓಮಿನಿ ಕಾರು ಹೆಗ್ಗೆರೆ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ…

Read More

ಐದು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಕಠಿಣ ಶಿಕ್ಷೆ ಪ್ರಕಟ

ತೀರ್ಥಹಳ್ಳಿ : ಐದು ವರ್ಷ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC–II (POCSO) 20 ವರ್ಷ ಕಠಿಣ ಶಿಕ್ಷೆ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 2020 ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 05 ವರ್ಷದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗುವೊಂದು ತನ್ನ ಮನೆಯಲ್ಲಿ ಆಟವಾಡುತ್ತಾ ಇದ್ದಾಗ ವೆಂಕಟೇಶ್ ಎಂಬುವವನು ಸದರಿ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನಡೆದಿತ್ತು. ಘಟನೆಯ ಬಗ್ಗೆ…

Read More

ರಿಪ್ಪನ್‌ಪೇಟೆಯ ದ್ವಿಪಥ ರಸ್ತೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ : ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಪಟ್ಟಣದ ಜನರ ಹಲವು ವರ್ಷಗಳ ಬೇಡಿಕೆ ದ್ವಿಪಥ ರಸ್ತೆಗೆ  ರಾಜ್ಯ ಸರ್ಕಾರ ಸ್ಪಂದನೆ ನೀಡಿದ್ದು ಕಾಮಗಾರಿಗೆ ಸೆಪ್ಟೆಂಬರ್ ನಲ್ಲಿ  ಚಾಲನೆ ನೀಡಲಾಗುವುದು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ವಿನಾಯಕ ವೃತ್ತದಿಂದ ಸಾಗರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೆ ಹಾಗೂ ವಿನಾಯಕ ವೃತ್ತದಿಂದ ತೀರ್ಥಹಳ್ಳಿ ರಸ್ತೆಯಲ್ಲಿರುವ ಶಬರೀಶನಗರದವರೆಗೂ ದ್ವಿಪಥ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸೆಪ್ಟೆಂಬರ್ ನಲ್ಲಿ…

Read More

ಬಸವಾಪುರ : ರಸ್ತೆ ಅಗೆದು ಕೆರೆಯ ಕೋಡಿ ನೀರನ್ನು ಹರಿಯಬಿಟ್ಟ ಪ್ರಭಾವಿ ವ್ಯಕ್ತಿಗಳು,ಜೆಸಿಬಿ ತಡೆದು ಗ್ರಾಮಸ್ಥರ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾವಪುರ ಗ್ರಾಮದ ಸರ್ವೆ ನಂ 26 ರ  ಹಳ್ಳದಕಟ್ಟೆ ಕೆರೆಯ ಕೋಡಿ ನೀರನ್ನು ಖಾಸಗಿ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡುವ ಉದ್ದೇಶದಿಂದ ಸರ್ಕಾರಿ ರಸ್ತೆಯ ಮೇಲೆ ಜೆಸಿಬಿ ಮೂಲಕ ಕಾಲುವೆ ತೋಡಿ ನೀರನ್ನು ಹರಿಯಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.  ಬಸಾವಪುರ ಗ್ರಾಮದ ಗುಂಡೂರು ಮೂಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರ್ಕಾರಿ ರಸ್ತೆಯ ಮೇಲೆ ಖಾಸಗಿ ಪ್ರಭಾವಿ ವ್ಯಕ್ತಿಗಳು ಹಳ್ಳದಕಟ್ಟೆ ಕೆರೆಯ ಕೋಡಿ ನೀರನ್ನು ರಸ್ತೆಯ ಮೇಲೆ…

Read More

ಮಲಗಿದ್ದ ತಾಯಿ,ಮಗಳ ಮೇಲೆ ಗೋಡೆ ಕುಸಿತ : ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ಮನೆಯಲ್ಲಿ‌ ಮಲಗಿದ್ದವರ ಮೇಲೆ ಏಕಾಏಕಿ ಗೋಡೆ ಕುಸಿದು ತಾಯಿ ಮತ್ತು ಮಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಾಲ್ಕನೇ ಕ್ರಾಸ್​​ನ ಯತಿರಾಜ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ ಉಮಾ ಹಾಗೂ ಮಗಳು ಕಾವ್ಯ ಎಂಬುವರ ಮೇಲೆ ಇಂದು ಬೆಳಿಗ್ಗೆ ಮನೆಯ ಗೋಡೆ‌ ಕುಸಿದಿದೆ. ಉಮಾ ಅವರ ಕಾಲು ಮುರಿದಿದ್ದು, ಕಾವ್ಯ ಅವರ ಬಲಗೈ ಮುರಿತವಾಗಿದೆ. ಗೋಡೆಯು ಯತಿರಾಜ್ ಅವರ ಕಡೆಯೂ ಬಿದ್ದಿದ್ದರಿಂದ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಗೊಂಡಿರುವ…

Read More

ಕಾಲೇಜುಗಳ ಕ್ಯಾಂಪಸ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯುವಂತೆ ಇರಬೇಕು : ಹರತಾಳು ಹಾಲಪ್ಪ

ಶೈಕ್ಷಣಿಕ ಕೆಂದ್ರಗಳನ್ನು ಸುಸಜ್ಜಿತವಾಗಿ,ಶುಚಿತ್ವವಾಗಿ, ಸುಂದರವಾಗಿ ರೂಪುಗೊಳಿಸಬೇಕು ಕಾರಣ ಪರಿಸರವು ಅಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳ ಮನಸ್ಸಿನ  ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಎಂಎಸ್‌ಐಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆ ಪಟ್ಟಣದಲ್ಲಿ 20 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರವೇಶ ರಸ್ತೆಯ ಕಾಮಗಾರಿಯ ಶಂಕುಸ್ಥಾಪನಾ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಮಾತನಾಡಿ ಕಾಲೇಜುಗಳ ಕ್ಯಾಂಪಸ್ ವಿದ್ಯಾರ್ಥಿ, ಸಾರ್ವಜನಿಕರ ಗಮನ ಸೆಳೆಯುವಂತಿರಬೇಕು ಅದಕ್ಕಾಗಿ ಕಾಲೇಜಿಗೆ ದ್ವಿಪಥ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯ ಸುಸಜ್ಜಿತ ರಸ್ತೆ…

Read More

ರಿಪ್ಪನ್ ಪೇಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 17ಕ್ಕೆ

ರಿಪ್ಪನ್‌ಪೇಟೆ: ಪಟ್ಟಣದ ರೋಟರಿ ಕ್ಲಬ್‌ನ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 17ರ ಭಾನುವಾರ ವಿಶ್ವಮಾನವ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ತಿಳಿಸಿದರು. ಪಟ್ಟಣದ ರೋಟರಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ನಮ್ಮ ಸಂಸ್ಥೆಯ ಸದಸ್ಯರು ಪ್ರಪ್ರಥಮವಾಗಿ ಮಹಿಳಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಿದ್ದಾರೆ, ಇದರ ಉದ್ದೇಶ ಮಹಿಳಾ ಸಬಲೀಕರಣವಾಗಿದ್ದು ಸೇವೆಯಲ್ಲಿ ಮಹಿಳೆಯರ ಹೆಚ್ಚು ಪಾಲ್ಗೊಳ್ಳುವಿಕೆಯನ್ನು ಪ್ರತಿನಿಧಿಸುತ್ತದೆ. ಸಂಸ್ಥೆಯು ಇಮ್ಯಾಜಿನ್ ರೋಟರಿ ಎಂಬ ಕಲ್ಪನೆಯನ್ನು ಕೊಟ್ಟಿದ್ದು ಸಮಾನ ಶಿಕ್ಷಣ,…

Read More

ಆಗುಂಬೆ ಘಾಟಿಯಲ್ಲಿ ಮತ್ತೇ ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದ ಮರಗಳು: ಸಂಚಾರ ಸಂಪೂರ್ಣ ಅಸ್ತವ್ಯಸ್ತ

ಆಗುಂಬೆ : ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಆಗುಂಬೆ ಘಾಟಿಯಲ್ಲಿ ಮತ್ತೆ ಬೃಹತ್ ಗಾತ್ರದ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದೂ, ಸಂಚಾರ ಅಸ್ತವ್ಯಸ್ತವಾಗಿದೆ. ಇತ್ತೀಚೆಗೆ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು ಹಾಗೂ ನೆನ್ನೆಯಿಂದ ಲಘ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮರ ಬಿದ್ದು ಗಂಟೆಗಳಾದರೂ ಇನ್ನೂ ತೆರವು ಕಾರ್ಯಾಚರಣೆ ಪ್ರಾರಂಭವಾಗಿಲ್ಲ,ಸುಮಾರು 4 ರಿಂದ 5 ಕಿಮೀ ರಸ್ತೆಯಲ್ಲಿ ಲಘು ವಾಹನಗಳಿದ್ದು ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತಿದ್ದಾರೆ. ರೋಗಿಗಳನ್ನು…

Read More

ತುಂಗಾ ನದಿಗೆ ಬಾಗಿನ ಅರ್ಪಿಸಿದ ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ತೀರ್ಥಹಳ್ಳಿಯ ಪವಿತ್ರ ತುಂಗಾ ನದಿಯ ನೀರು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ಗುರುವಾರ ಸಂಜೆ ರಾಜ್ಯ ಸರ್ಕಾರದ ಗೃಹಸಚಿವರು, ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರು ತುಂಗಾ ನದಿಗೆ  ಬಾಗಿನ ಅರ್ಪಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮಳೆ ಎಷ್ಟು ಬೇಕಾದರೂ ಬರಲಿ, ನದಿ ಉಕ್ಕಿ ಹರಿಯಲಿ ಅದು ಸಮೃದ್ಧಿಯ ಸಂಕೇತ ಆದರೆ ಎಲ್ಲೂ ಕೂಡ ಹನಿಯಾಗದ ರೀತಿಯಲ್ಲಿ ಕಾಪಾಡು ಎಂದು ರಾಮೇಶ್ವರನಲ್ಲಿ ಬೇಡಿ ಬಾಗಿನ ಅರ್ಪಿಸಿದ್ದೇವೆ…

Read More