w
Headlines
Home » ಪತಿಯೊಂದಿಗಿನ ಜಗಳದಿಂದ ನೊಂದು ತನ್ನ ಆರು ಮಕ್ಕಳನ್ನು ಬಾವಿಗೆಸೆದು ಕೊಂದ ಪಾಪಿ ತಾಯಿ :

ಪತಿಯೊಂದಿಗಿನ ಜಗಳದಿಂದ ನೊಂದು ತನ್ನ ಆರು ಮಕ್ಕಳನ್ನು ಬಾವಿಗೆಸೆದು ಕೊಂದ ಪಾಪಿ ತಾಯಿ :

 

ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ತನ್ನ ಆರು ಮಕ್ಕಳನ್ನು ಬಾವಿಗೆಸೆದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಘಟನೆಯಲ್ಲಿ ಐದು ಬಾಲಕಿಯರು ಸೇರಿದಂತೆ ಆರು ಸಣ್ಣ ಮಕ್ಕಳು ಸಾವನ್ನಪ್ಪಿದ್ದಾರೆ.ಆದರೆ, ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.

ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಬಾವಿಯಲ್ಲಿದ್ದ ಎಲ್ಲಾ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಮಾಹಿತಿ ಪ್ರಕಾರ, ಪತಿ ಜೊತೆ ಮಹಿಳೆ ಜಗಳವಾಡಿದ್ದಾಳೆ. ಇದರಿಂದ ನೊಂದು ತನ್ನ ಐವರು ಪುತ್ರಿಯರು ಹಾಗೂ ಒಂದೂವರೆ ವರ್ಷದ ಮಗನನ್ನು ಬಾವಿಗೆ ಎಸೆದು, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಯಲ್ಲಿ ಮಕ್ಕಳು ಸಾವನ್ನಪ್ಪಿದ್ದು, ಮಹಿಳೆಯನ್ನು ರಕ್ಷಿಸಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.