ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಹಾಗೂ ರಿಪ್ಪನ್ ಪೇಟೆ ಗ್ರಾಮಾಡಳಿತದಿಂದ ಚಿಕ್ಕಬೀರನ ಕೆರೆಗೆ ಕಾಯಕಲ್ಪ:

ರಿಪ್ಪನ್ ಪೇಟೆ : ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಗ್ರಾಮಾಧ್ಯಕ್ಷೆ ಮಂಜುಳಾರವರ ಅಧ್ಯಕ್ಷತೆಯಲ್ಲಿ ಚಿಕ್ಕಬೀರನಕೆರೆ ಕೆರೆ ಹೂಳು ತೆಗೆಯುವ ಬಗ್ಗೆ ಸಾರ್ವಜನಿಕರ ಸಮಾಲೋಚನಾ ಸಭೆ ನಡೆಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಸರ್ಕಾರ ಮಾಡದಂತಹ ಅಭಿವೃದ್ದಿ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಶ್ವಾರ್ಥ ಸೇವೆಯ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಹೆಚ್ಚು ಆದ್ಯತೆ ನೀಡುವುದರೊಂದಿಗೆ ಕೆರೆಗಳಲ್ಲಿನ ಹೂಳು ತೆಗೆದು ಅಂತರ್ಜಲ ಹೆಚ್ಚಿಸುವ ಕಾರ್ಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳ ಕನಸು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆಂದು  ಪ್ರಶಂಸೆ ವ್ಯಕ್ತಪಡಿಸಿ, ಈಗಾಗಲೇ ನಮ್ಮೂರು ನಮ್ಮ ಕೆರೆ ವಿಚಾರದಲ್ಲಿ ಸಾರ್ವಜನಿಕರ ಸಹಭಾಗಿತ್ವದ ಕುರಿತು ಸ್ವಪ್ರೇರಣೆಯೊಂದಿಗೆ ಸಾರ್ವಜನಿಕರು ಇಂತಹ ಅಭಿವೃದ್ಧಿ ಕಾರ್ಯದಲ್ಲಿ ಪಕ್ಷ ಬೇದ ಮರೆತು ಸಹಕರಿಸುವಂತೆ ಮನವಿ ಮಾಡಿದರು.


ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸಿದ್ದಿವಿನಾಯಕ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎನ್.ಸತೀಶ್ ರವರನ್ನು ಕೆರೆ ಸಮಿತಿಯ ಅಧ್ಯಕ್ಷರನ್ನಾಗಿ ಅಮೀರ್ ಹಂಜಾ ಉಪಾಧ್ಯಕ್ಷರಾಗಿ ಎಂ.ಬಿ.ಮಂಜುನಾಥ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸುಮಾರು 23 ಜನರನ್ನು ಸಮಿತಿಯ ಸದಸ್ಯರಾಗಿ ಅಯ್ಕೆ ಮಾಡಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ  ಗೀತಾ ಮಾತನಾಡಿ ಯೋಜನೆಯಿಂದ ಬಂದಂತ ಹಣ ದುರ್ಬಳಕೆ ಆಗದೆ ಕೆರೆಯ ನವೀಕರಣಕ್ಕೆ ಸರಿಯಾದ ಮಾರ್ಗದಲ್ಲಿ ಸದ್ಬಳಕೆಯಾಗಬೇಕು ಸಮಿತಿಯವರು ಸಹಕಾರ ಬಹುಮುಖ್ಯವಾಗಿದೆ ಉತ್ತಮ ಸಮಿತಿ ಆದರೆ ಯೋಜನೆಯಿಂದ ಬಂದ ಹಣವನ್ನು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

>ಈ ಸಂಧರ್ಭದಲ್ಲಿ  ಹೊಸನಗರ ತಾಲ್ಲೂಕ್ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಬೇಬಿ,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ ,ಕೆರೆ ಸಂಪನ್ಮೂಲ ಯೋಜನೆಯ ಇಂಜಿನಿಯರ್ ಗಣಪತಿ, ಕೃಷಿ ಮೇಲ್ವಿಚಾರಕ ಶಶಿಧರ, ಪಿಡಿಓ ಜಿ.ಚಂದ್ರಶೇಖರ್, ರಿಪ್ಪನ್‌ಪೇಟೆ ಮೇಲ್ವಿಚಾರಕ ಹರೀಶ್‌ ಹಾಗೂ ಇನ್ನಿತರರು ಹಾಜರಿದ್ದರು.

ಇದೇ ಸಭೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹಾಲುಗುಡ್ಡೆ ನಿವಾಸಿ ಬಿನೂಸ್ ಎಂಬುವವರಿಗೆ ಯೋಜನೆಯಿಂದ ಮಂಜೂರಾದ 20000 ರೂ ಅನುದಾನವನ್ನು ಕುಟುಂಬದ ಸದಸ್ಯರಿಗೆ ವಿತರಿಸಲಾಯಿತು.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ One-month skill development training on bakery product preparation…

8 hours ago

ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ

ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ Thirthahalli police…

10 hours ago

ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ

ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ House fire reported at Keelambi…

11 hours ago

ಶಾಸಕರ ಜೊತೆ ಟ್ರಾಫಿಕ್ ಪೊಲೀಸರ ಡ್ಯಾನ್ಸ್; ವಿಡಿಯೋ ವೈರಲ್, ಇಬ್ಬರ ವರ್ಗಾವಣೆ

ಶಾಸಕರ ಜೊತೆ ಟ್ರಾಫಿಕ್ ಪೊಲೀಸರ ಡ್ಯಾನ್ಸ್; ವಿಡಿಯೋ ವೈರಲ್, ಇಬ್ಬರ ವರ್ಗಾವಣೆ Two traffic police personnel in Shivamogga…

11 hours ago

ಬಾವಿಗೆ ಬಿದ್ದು ನಿವೃತ್ತ ಕುಲಪತಿ ಪ್ರೊ. ಎಂ.ಕೆ. ನಾಯ್ಕ್ ಸಾವು

ಬಾವಿಗೆ ಬಿದ್ದು ನಿವೃತ್ತ ಕುಲಪತಿ ಪ್ರೊ. ಎಂ.ಕೆ. ನಾಯ್ಕ್ ಸಾವು Retired Vice Chancellor Prof. M.K. Naik, 63,…

11 hours ago

ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ

ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government…

1 day ago