ಹೊಸನಗರ:- ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಜೆಸಿಐ ಹೊಸನಗರ ಕೊಡಚಾದ್ರಿಯ ಅಧ್ಯಕ್ಷರು ಸೀಮಾಕಿರಣ್ ಸೆರಾವ್ ರವರ ನೇತೃತ್ವದಲ್ಲಿ ಹೇರ್ ಡೊನೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜೆಸಿಐ ಹೊಸನಗರ ಕೊಡಚಾದ್ರಿ, ಜೆಸಿ ಸದಸ್ಯರು ಮತ್ತು ಪದಾಧಿಕಾರಿಗಳು ಮತ್ತು ಕುಟುಂಬದವರು ಮತ್ತು ಬೆಂಗಳೂರಿನಿಂದ ಹೇರ್ ಡೋನೆಷನ್ ಟ್ರಸ್ಟ್ ನವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಡಾ!ಚಡಗ ಕಾಂಪ್ಲೆಕ್ಸ್ ಸಿಯಂಟೋ ಬ್ಯೂಟಿ ಸಲೂನ್ ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಜೆಸಿಐ ಕೊಡಚಾದ್ರಿ ಹೊಸನಗರ ಅಧ್ಯಕ್ಷರಾದ ಸೀಮಾ ಕಿರಣ್ ಮತ್ತು ಅವರ ಮಗಳಾದ ಅರ್ಚನಾ ಕಾರ್ವಲ್ಲೋ ರವರು ಹೇರ್ ಡೋನೆಷನ್ ಮಾಡಿದರು.ಅರ್ಚನಾ ಕರ್ವಲ್ಲೋ ರವರು ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಕಾಮರ್ಸ್ ಓದುತ್ತಿದ್ದು,ಕ್ಯಾನ್ಸರ್ ರೋಗಿಗಳಿಗಾಗಿ ಹೇರ್ ಡೊನೇಷನ್ ಮಾಡುವುದರ ಮೂಲಕ ಸಮಾಜದಲ್ಲಿ ಮಾದರಿಯಾಗಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಕಿಮೋ ತೆಗೆದು ಕೊಂಡ ನಂತರದ ದಿನಗಳಲ್ಲಿ ಕೂದಲುದುರುವಿಕೆಯಿಂದ ಕಿನ್ನತೆಗೆ ಒಳಗಾಗದಂತೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ, ಹಾಗೆಯೇ ಅವರ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನವಾಗಿ ಕೊಟ್ಟಿದ್ದಾರೆ.ಈ ಸಂಧರ್ಭದಲ್ಲಿ ಕ್ಯಾನ್ಸರ್ ರೋಗದಿಂದ ಮುಕ್ತರಾದ ತೆರೆಸಾ ಕಾರ್ವಲ್ಲೋ, ಅವರ ಅನುಭವವನ್ನು ಹಂಚಿಕೊಂಡರು.
ಹೊಸನಗರದಲ್ಲಿ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ಕೇಶ ದಾನ ಮಾಡುವವರು ಡಾ!ಚಡಗ ಕಾಂಪ್ಲೆಕ್ಸ್ ಸಿಯಂಟೋ ಬ್ಯೂಟಿ ಸಲೂನ್ ನಲ್ಲಿ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಜೆಸಿ ಸುರೇಶ್.ಬಿ, ಎಸ್, ಜೆಸಿ ಜ್ಯೋತಿ, ಜೆಸಿ ಶೈಲಾ, ಜೆಸಿ ರೇಷ್ಮಾ. ಜೆಸಿ ವನಜಾಕ್ಷಿ, ಜೆಸಿ ಗಣೇಶ್. ಜೆಸಿ ರಾಧಾಕೃಷ್ಣ, ಜೆಸಿ ಪೂರ್ಣೇಶ್ ಮಲೆಬೈಲು,ಜೆಸಿ ಅರ್ಚನಾ ಕಾರ್ವಲ್ಲೋ, ತೆರೆಸಾ ಸಿಕ್ವೇರಾ, ರೋಸಿ ಸೆರಾವ್, ಗ್ರೇಸಿ ಫೆರ್ನಾಂಡಿಸ್, ಸಿಸಿಲಿಯ ಫೆರ್ನಾಂಡಿಸ್, ರೇಖಾ ಹರೀಶ್ ಆಲೆನ್ ಕಾರ್ವಲ್ಲೋ ಭಾಗಿಯಾಗಿದ್ದರು.
ವರದಿ : ಪುಷ್ಪಾ ಜಾಧವ್ ಹೊಸನಗರ