POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಆರೋಪಿಯ ಬಂಧನ

ರಬ್ಬರ್ ಕಾಡಿನಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ರೂ ಮೌಲ್ಯದ ನಗದು ಮತ್ತು 134 ಗ್ರಾಂನ ಚಿನ್ನ ಆಭರಣ ಗಳನ್ನ  ಕಳವು ಮಾಡಿರುವ ಆರೋಪಿಯನ್ನ ಬಂಧಿಸಿ ಕಳವು ಮಾಡಿದ ನಗದು ಮತ್ತು ಚಿನ್ನಾಭರವಣವನ್ನು ವಶಪಡಿಸಿಕೊಳ್ಳಲಾಗಿದೆ.

ಜ.13 ರಂದು ಭದ್ರಾವತಿ ಬಳಿಯ ರಬ್ಬರ್ ಕಾಡಿನ ನಿವಾಸಿ ಪದ್ಮಾ ಎಂಬುವವರ ಮನೆಯಲ್ಲಿ ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ 6 ಲಕ್ಷ ನಗದು ಮತ್ತು 5.66 ಲಕ್ಷ ರೂ ಮೌಲ್ಯದ 134.44 ಗ್ರಾಂ ಚಿನ್ನಾಭರಣವನ್ನ ಕಳವು ಮಾಡಲಾಗಿತ್ತು. 6 ಲಕ್ಷ ಹಣವನ್ನ ಪದ್ಮಾ ರವರು ಮನೆ ಕಟ್ಟುವ ಉದ್ದೇಶದಿಂದ ತಂದಿಟ್ಟಿದ್ದರು.

ಪ್ರಕರಣವನ್ನ ದಾಖಲಿಸಿಕೊಂಡ ಪೇಪರ್ ಟೌನ್ ಪೊಲೀಸರು ಪ್ರಕರಣ ಬೆನ್ನುಹತ್ತಿದ್ದರು. ರಬ್ಬರ್ ಕಾಡು ಗ್ರಾಮದ 27 ವರ್ಷದ ವ್ಯಕ್ತಿ ಚೇತನ್ ಎಂಬುವರನ್ನು ಬಂಧಿಸಿ 5,60,000/- ನಗದು ಹಣ ಹಾಗೂ ರೂ 6,43,000/- ಅಂದಾಜು ಮೌಲ್ಯದ ಒಟ್ಟು 134.44 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.‌

ಈ ಪ್ರಕರಣದ ಪತ್ತೆಗಾಗಿ  ಬಿ.ಎಂ. ಲಕ್ಷ್ಮೀ ಪ್ರಸಾದ್ ಐಪಿಎಸ್ ಪೊಲೀಸ್ ಅಧೀಕ್ಷಕರು ಮತ್ತು ವಿಕ್ರಮ್ ಅಮಟೆ ಕೆಎಸ್‌ಪಿಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರುಗಳ ಹಾಗು ಉಮೇಶ್ ಈಶ್ವರ್ ನಾಯಕ್, ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪವಿಭಾಗ ಮಾರ್ಗದರ್ಶನದಲ್ಲಿ ಪೇಪರ್ ಟೌನ್ ಪೊಲೀಸ್ ಠಾಣೆಯ  ಮಂಜುನಾಥ, ಇ.ಓ. ಪೊಲೀಸ್ ಇನ್ಸ್ ಪೆಕ್ಟರ್, ಶಿಲ್ಪಾ ನಾಯನೇಗಲಿ ಪಿ.ಎಸ್.ಐ. ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ, ಆರ್. ರತ್ನಾಕರ ಎಎಸ್‌ಐ, ಚಿನ್ನ ನಾಯ್ಕ, ಕಾಳಾನಾಯ್ಕ, ಹಣಮಂತ ಅವಟಿ, ರಾಜೇಶ ವಿಕ್ರಮ್, ಮೋಹನ್, ನಾಗರಾಜ, ಹಾಗು ರಾಜಣ್ಣ ರವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.